ಪಾಲಕ್ಕಾಡ್ ಜಿಲ್ಲೆಯ ಕುನ್ನುಂಪರಂಬಿಲ್ ಪ್ರದೇಶದಲ್ಲಿ ವಾಸವಾಗಿರುವ ಫಿರೋಜ್ ಎಂಬವರು ಒಂದು ಸಣ್ಣ ಮೊಬೈಲ್ ಅಂಗಡಿಯ ಮೂಲಕ ತನ್ನ ಕಷ್ಟ ಜೀವನವನ್ನು ಆ ಮೂಲಕ ಸಾಗಿಸುತ್ತಿದ್ದರು.
ಹೇಗೋ ತನ್ನ ವ್ಯಾಪಾರದಲ್ಲಿ ಅಷ್ಟಿಷ್ಟು ಉಳಿಸಿ ಗಲಿಸಿ ತನ್ನ ಕುಟುಂಬದ ಪೋಷಣೆಗೆ ವ್ಯಯಿಸುತ್ತಿದ್ದ ಫಿರೋಝ್, ಉದ್ಯೋಗ ದ ಎಡೆಯಲ್ಲಿ ಒಂದು ಸಣ್ಣ ಸಮಾಜ ಸೇವೆಯನ್ನು ಮಾಡುತ್ತಿದ್ದ.

ರಾತ್ರಿ ಮೊಬೈಲ್ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುವ ವೇಳೆಗೆ, ಪಕ್ಕದ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಉಳಿದ ಅನ್ನವನ್ನು ಕಟ್ಟಿಕೊಂಡು ಅದನ್ನು ಅರ್ಹ ಹಸಿದ ಕುಟುಂಬದವರಿಗೆ ತಲುಪಿಸುತ್ತಿದ್ದ.
ಹೀಗೆ ಹಸಿದವರಿಗೆ ಅನ್ನ ಉಣಿಸುತ್ತಿದ್ದ ಫಿರೋಝ್’ಗೆ, ಒಂದು ಮನೆಯಲ್ಲಿ ಎರಡು ಮೂರು ಜನರು ಅಂಗಾತ ಮಲಗಿರುವುದು ಕಂಡುಬಂತು. ಇದರ ಬಗ್ಗೆ ಕುತೂಹಲವಾಗಿ ವಿಚಾರಿಸಿದಾಗ ಸ್ವತಃ ಅವರ ಕಣ್ಣಲ್ಲಿ ನೀರು ಬಂದದ್ದು ಫಿರೋಝ್ ಗೆ ತಡೆಯಲಾಗಲಿಲ್ಲ. ಕೂಡಲೇ ಜಾಲತಾಣ ವಾದ ಫೇಸ್ಬುಕ್ ಮುಖಾಂತರ ನನ್ನ ಗೆಳೆಯರಲ್ಲಿ ವಿನಂತಿಸಿವುದ್ದೇನೆಂದರೆ ‘ಈ ಕುಟುಂಬವನ್ನು ಯಾರಾದರೂ ದತ್ತು ಪಡೆದು ಕೊಳ್ಳಿ ಅಥವಾ ಅವರಿಗೆ ಒಂದು ಮೂಲಸೌಕರ್ಯ ಒದಗಿಸಿ ಸಾಂತ್ವನ ಹೇಳಿ.”’

#വീർത്ത് #പൊട്ടാറായ #വയറും മഞ്ഞ നിറം ബാധിച്ച കണ്ണും #നീരെടുത്ത #ശരീരവും #കണ്ടില്ലെ……….
ഇനിയുള്ള ഓരോ ദിവസവും ഈ #കുഞ്ഞിന്റെ #ജീവന് #വിലപ്പെട്ടതാണ് കരൾ രോഗം കാർന്ന് തിഞ്ഞുകയാണ് ഈ കുഞ്ഞു ജീവനെ ഇനി ദിവസങ്ങൾ മാത്രമാണ് നമുക്ക് മുന്നിലുള്ളത് ഒറ്റപ്പാലം പഴയ ലക്കിടിയിലെ ഒരു വയസ്സുകാരിയായ #ഹനഫാത്തിമ എന്ന ഈ പൊന്നുമോളെ നമുക്ക് ജീവിതത്തിലേയ്ക്ക് തിരിച്ച് കൊണ്ടുവരണം എല്ലാവരും സഹായിക്കണം……..
12/05/2019
MUHAMMED JABIR K P
A/c NO : 12410100176574
IFSC : FDRL0001241
FEDERAL BANK
BR: PUTHUVYPE
MOB:7994905936 / 9061271051Posted by Firos Kunnamparambil Palakkad on Sunday, 12 May 2019

ಮೂರು ದಿನಗಳವರೆಗೆ ಯಾರು ಇದಕ್ಕೆ ಸ್ಪಂದಿಸದಿದ್ದಾಗ ಖುದ್ದು ತಾನೇ ಆ ಕುಟುಂಬವನ್ನು ತನ್ನ ಮನೆಯ ಬಳಿ ಕರೆದುಕೊಂಡು ಬಂದು, ಒಂದು ಬಾಡಿಗೆ ಮನೆಯಲ್ಲಿ ವಾಸಿಸಲಿಟ್ಟು, ಅವರಿಗೆ ಬೇಕಾದ ಊಟ ಬಟ್ಟೆ ಯನ್ನು ತನ್ನ ಕೈ ಕರ್ಚಿ ನಿಂದಲೇ ನೀಡಿದ.

ಅಲ್ಲಿಗೆ ಕೊನೆಗೊಳ್ಳದ ತನ್ನ ಸಹಾಯ ಹಸ್ತವನ್ನು ಮುಂದುವರಿಸುತ್ತಾ…. ಇನ್ನೊಂದು ಫೇಸ್ ಬುಕ್ ಲೈವ್ ಮುಖಾಂತರ ಈ ಕುಟುಂಬಕ್ಕೆ ಒಂದು ಶಾಶ್ವತ ಮನೆಯ ಅವಶ್ಯಕತೆ ಇದೆ. ಎಂಬ ಬೇಡಿಕೆಯನ್ನು ಇಟ್ಟ. ಎರಡನೇ ಫೇಸ್ ಬುಕ್ ಲೈವ್ ಮುಖಾಂತರ ಸ್ಪಂದಿಸಿದ ಕೆಲ ಗೆಳೆಯರು ಮತ್ತು ನಾಗರಿಕರ ಧನ ಸಹಾಯದ ಮೇರೆಗೆ ಆ ಕುಟುಂಬಕ್ಕೆ ಒಂದು ಶಾಶ್ವತವಾದ ಮನೆಯನ್ನು ನಿರ್ಮಿಸಲು ಸಾಧ್ಯವಾಯಿತು. ಎಂಬುವುದು ಫಿರೋಝಿ ನ ಮಾತು.

ನಂತರದ ದಿನಗಳಲ್ಲಿ ನಡೆದದ್ದೇ ಚಮತ್ಕಾರ. ದಿನದ 24 ಗಂಟೆಯೂ ಪಕ್ಕದ ಊರು ಪಕ್ಕದ ಜಿಲ್ಲೆಗಳಿಂದ ಬಂದಂತಹ ಸಹಾಯಸ್ತ ಕರೆಗಳು, ಬೇಡಿಕೆಗಳು ಪಿರೋಝಿನ ದಾನ ವ್ಯಾಪ್ತಿಯನ್ನು ಹೆಚ್ಚಿಸಿತು. ಹೀಗೆ ಕರೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಅವರ ಬಳಿ ತೆರಳಿ ಖುದ್ದು ಅವರ ಮುಖಾಂತರ ಫೇಸ್ ಬುಕ್ ಲೈವ್ ಗಳನ್ನು ಹರಿಯಬಿಟ್ಟ.
ಇದು ಹೆಚ್ಚು ಹೆಚ್ಚು ರವಾನೆಯಾಗಿ ಪಕ್ಕದ ರಾಷ್ಟ್ರ ದುಬೈ, ಸೌದಿ, ಕತ್ತಾರ್ ಎಂಬಿತ್ಯಾದಿ ನಗರಗಳಲ್ಲೂ ಚರ್ಚೆಗೊಳಪಟ್ಟಿತು. ಫಿರೋಝಿನ ಫೇಸ್ ಬುಕ್ ಗೆಳೆಯರು ವಾಟ್ಸಪ್ ಗೆಳೆಯರು ವಿಷಯವನ್ನು ಹಂಚುತ್ತಲೇ ಎಲ್ಲ ಧರ್ಮ ಜಾತಿಯ ಜನರು ಒಗ್ಗಟ್ಟಾದರು.

ಚಾರಿಟಿ ಯನ್ನು ಸ್ಥಾಪಿಸಿದ. ಫಿರೋಝ್ ಖಾತೆಗೆ ಇದೀಗ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಅರ್ಹ ಕುಟುಂಬ ಅರ್ಹ ವ್ಯಕ್ತಿಗಳಿಗೆ ಜಾತಿ ಮತ ನೋಡದೆ, ತನ್ನ ಚಾರಿಟಿ ಮುಖಾಂತರ ಸೂಕ್ತ ಸಹಾಯ ಹಸ್ತವನ್ನು ಚಾಚುವ ಫಿರೋಝ್ ನ ನಲ್ಮೆಯ ಕಾರ್ಯಕ್ಕೆ ಎಲ್ಲರೂ ಶ್ಲಾಘಿಸಲೇಬೇಕು.

ಒಂದು ಬಡ ಕುಟುಂಬದ ವ್ಯಕ್ತಿ ತನ್ನ ಕಾಸ ಮೊಬೈಲ್ ಉದ್ಯೋಗದ ಎಡೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸದುದ್ದೇಶಕ್ಕೆ ಬಳಸಿಕೊಂಡು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಬಡವರ ಬಾಳಿನಲ್ಲಿ ಆಶಾಕಿರಣವಾಗಿ ಮೂಡಿಬಂದಿರುವ ಈ ವ್ಯಕ್ತಿಯ ಸಮಾಜ ಸೇವೆ ಪ್ರತಿಯೊಬ್ಬರಿಗೂ ಮಾದರಿ….

ಕೆಲ ದಿನಗಳ ಹಿಂದೆ ಜಾಲತಾಣಗಳಲ್ಲಿ ಬಂದ ಒಂದು ಮಗುವಿನ ಆಪರೇಷನ್ ಒಂದಕ್ಕೆ ಬರೋಬ್ಬರಿ 50 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಇಂತಹ ಅದೆಷ್ಟು ಕುಟುಂಬಗಳಿಗೆ ಲಕ್ಷ ಲಕ್ಷ ರೂ ಗಳನ್ನು ಸಂಗ್ರಹಿಸಿ ಅವರ ಬಾಳನ್ನು ಬೆಳಗಿಸಿದ್ದಾರೆ. ಕಳೆದ ತಿಂಗಳು ಫ್ಲವರ್ಸ್ ಮಳೆಯಾಳಂ ಚಾನಲ್ ಒಂದರಲ್ಲಿ ಲೈನ್ ಮುಖಾಂತರ 1 ಬಡಕುಟುಂಬಕ್ಕೆ ಆಪರೇಷನ್ ಗಾಗಿ ಚೆನ್ನೈ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ, ದೊಡ್ಡ ಮೊತ್ತವನ್ನು ವೇದಿಕೆ ಮುಖಾಂತರವೇ ಸಂಗ್ರಹಿಸಿದ್ದೂ ಒಂದು ಸಾಧನೆ.

ಇದೀಗ ಫಿರೋಝ್ ಅಭಿಮಾನಿಗಳು ಅವರನ್ನು ಸೌದಿ ದುಬೈ ಎಂಬಿತ್ಯಾದಿ ನಗರಗಳಿಗೆ ಖುದ್ದಾಗಿ ಕರೆದು, ತಮ್ಮ ತಂಡಗಳು ಸಂಗ್ರಹಿಸಿದ ಸಹಾಯಧನವನ್ನು ಅವರ ಮುಖಾಂತರ ಕೊಟ್ಟು ಊರಿಗೆ ಕಳುಹಿಸಿ ಕೊಡುತ್ತಾರೆ. ಇದಲ್ಲದೆ ಕೆಲ ಅರಬಿ ಪ್ರಜೆಗಳು ಇವರ ಸೇವನೆಯನ್ನು ಮೆಚ್ಚಿ ಗೌರವಿಸಿ ತಾವೂ ಧನ ಸಹಾಯವನ್ನು ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ನಗೆ ಚಟಾಕಿ ಅಥವಾ ನಿಂದನೆಗೆ ಸೀಮಿತಗೊಳಿಸುವ ಯುವ ಸಮೂಹಕ್ಕೆ ಫಿರೋಜ್ ನಂತಹ ವ್ಯಕ್ತಿತ್ವಗಳು ಆದರ್ಶದಾಯಕ ವಾಗಿರುತ್ತದೆ.

ದೇವರು ಎಲ್ಲರ ಸೇವೆ ಸಹಕಾರವನ್ನು ಸ್ವೀಕರಿಸಲಿ….

– ನಿಜಾಮುದ್ದೀನ್ ಉಪ್ಪಿನಂಗಡಿ  

Leave a Reply