Women praying inside a mosque

ಕೇರಳ : ಮುಸ್ಲಿಮ್ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅನುಮತಿ ಮತ್ತು ವಸ್ತ್ರಧಾರಣೆಯ ಸ್ವಾತಂತ್ರ್ಯ ನೀಡಬೇಕೆಂದು ಸಲ್ಲಿಸಿದ ಅರ್ಜಿಯನ್ನು ಕೇರಳ ಹೈಕೋರ್ಟು ತಳ್ಳಿಹಾಕಿದೆ. ಅಖಿಲ ಭಾರತೀಯ ಹಿಂದೂ ಮಹಾಸಭಾದ ಕೇರಳ ಘಟಕದ ಅಧ್ಯಕ್ಷ ಸ್ವಾಮೀ ದತ್ತಾತ್ರೇಯ ಈ ಅರ್ಜಿ ಹಾಕಿದ್ದರು.

ಶಬರಿ ಮಲೆಗೆ ಮಹಿಳೆಯರ ಪ್ರವೇಶ ಮತ್ತು ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶವನ್ನು ಬೆರೆಸಿ ಹಾಳು ಮಾಡಬಾರದು ಎಂದು ಹೇಳಿದ ನ್ಯಾಯಾಲಯವು ಹೇಳಿದೆ. ಶೋಷಿಸಲಾಗುತ್ತಿದೆಯೆಂದು ಮುಸ್ಲಿಮ್ ಮಹಿಳೆಯರು ಕೂಡಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿಲ್ಲ. ಮಾತ್ರವಲ್ಲ ಶೋಷಣೆಯಿದೆಯೆಂದು ಸಾಬೀತು ಪಡಿಸಲು ಅರ್ಜಿದಾರನಿಂದಲೂ ಸಾಧ್ಯವಾಗಲಿಲ್ಲ ಎಂದು ಹೇಳಿ ಅರ್ಜಿಯನ್ನು ತಳ್ಳಿಹಾಕಿದೆ.

ಈ ಹಿಂದೆ ಸುನ್ನಿ ಮಸೀದಿಗಳ ಸಹಿತ ಎಲ್ಲಾ ಮಸೀದಿಗಳಲ್ಲಿಯೂ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಕೇರಳದ ಸಚಿವ ಕೆ.ಟಿ.ಜಲೀಲ್ ಹೇಳಿದ್ದರು. ಎಲ್ಲಾ ಆರಾಧನಾಲಯಗಳಿಗೂ ಮಹಳೆಯರಿಗೆ ಪ್ರವೇಶಾನುಮತಿ ನೀಡಿದರೆ ಆರಾಧನಾ ಸ್ವಾತಂತ್ರ್ಯ ಲಭ್ಯವಾಗುವುದು ಎಂದು ಹೇಳಿದ ಸಚಿವರು ಶಬರಿಮಲೆಯ ಕುರಿತ ಸುಪ್ರೀಮ್ ಕೋರ್ಟಿನ ತೀರ್ಪನ್ನು ಜಾರಿಗೆ ತರಲು ಸರಕಾರ ಅವಸರ ತೋರುತ್ತಿಲ್ಲವೆಂದೂ ಹೇಳಿದರು.

Leave a Reply