Representational image

ಏಪ್ರಿಲ್ 16 ರಂದು ಇಡೀ ಕೇರಳ 15 ದಿನದ ಮಗುವಿನ ಪ್ರಾಣ ರಕ್ಷಣೆಗಾಗಿ ಮಿಡಿದಿತು. ಮಗುವಿಗೆ ತುರ್ತು ಹೃದಯ ಕವಾಟದ ಶಸ್ತ್ರಚಿಕಿತ್ಸೆ ಅಗತ್ಯ ಇತ್ತು. ಆಂಬ್ಯುಲೆನ್ಸ್ ಕರ್ನಾಟಕದ ಮಂಗಳೂರಿನಿಂದ 400 ಕಿಲೋಮೀಟರ್ ದೂರದಲ್ಲಿರುವ ಕೇರಳದ ಕೊಚ್ಚಿಗೆ ಮಗುವಿನೊಂದಿಗೆ ಪ್ರಯಾಣ ಪ್ರಾರಂಭಿಸಿತು.

ಮಗುವಿನ ಪ್ರಾಣ ರಕ್ಷಣೆಗಾಗಿ ರಸ್ತೆಯುದ್ದಕ್ಕೂ ಗ್ರೀನ್ ಕಾರಿಡಾರ್ ನಿರ್ಮಿಸುವ ವ್ಯವಸ್ಥೆ ಮಾಡಲಾಗಿತ್ತು. ಮಾತ್ರವಲ್ಲ, ಆಂಬ್ಯುಲೆನ್ಸ್ ಹಾದಿ ಸುಗಮವಾಗಲು ಫೇಸ್ ಬುಕ್ ಲೈವ್ ಕೂಡ ಕೊಡಲಾಗಿತ್ತು.

ವಿಮಾನದ ಮೂಲಕ ಹೋಗಬಾರದು ಎಂಬ ವೈದ್ಯರ ಸೂಚನೆಯಂತೆ ಶಿಶುವನ್ನು ರಸ್ತೆ ಮಾರ್ಗವಾಗಿ ಕೊಂಡು ಹೋಗುವ ತೀರ್ಮಾನ ಮಾಡಲಾಗಿತ್ತು.

ಈ ವಿಷಯ ತಿಳಿದು ಹಲವಾರು ರಸ್ತೆಗಿಳಿದು ಟ್ರಾಫಿಕ್ ಸರಿ ಪಡಿಸಿದರು, ಪೊಲೀಸ್ ಇಲಾಖೆ ಮತ್ತು ಕೆಲವು ಸರಕಾರೇತರ ಸಂಘಟನೆಗಳು ಕಾರ್ಯ ರಂಗಕ್ಕೆ ಬಂದವು. ಚೆಕ್ ಪೋಸ್ಟ್ ಗಳು ಸಹಾಯ ಮಾಡಿತು. ಹೀಗೆ ಎಲ್ಲರ ಸಹಾಯದಿಂದ ಆಂಬುಲೆನ್ಸ್ ಕೇವಲ ಐದು ಗಂಟೆಯಲ್ಲಿ ಕೊಚ್ಚಿಯ ಅಮೃತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಗೆ ತಲಪಿತು.

ಕಾಸರಗೋಡಿನ ಸಾನಿಯಾ ಮತ್ತು ಮಿತ ದಂಪತಿಯ ಮಗು ಖಾಸಗಿ ಆಸ್ಪತ್ರೆಯಲ್ಲಿ ವಾರಗಳಿಂದ ಚಿಕಿತ್ಸೆಗೊಳಪಟ್ಟಿತ್ತು. ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಮಗುವನ್ನು ಕೊಚ್ಚಿಗೆ ಕೊಂಡೊಯ್ಯಲಾಯಿತು.

Leave a Reply