ಊರಿನ ಜನರ ಸಮಸ್ಯೆಯನ್ನು ಮನಗಂಡ ಈ 45 ವರ್ಷದ ಕೀನ್ಯಾದ ಕಾರ್ಮಿಕ ವ್ಯಕ್ತಿ ಒಂದೇ ವಾರದಲ್ಲಿ ಒಬ್ಬನೇ ನಿಂತು ರಸ್ತೆ ಮಾಡಿ ಮಾದರಿಯಾಗಿದ್ದಾರೆ. ಕೀನ್ಯಾದ ಕಗಾಂಡ ಗ್ರಾಮದ ನಿಕೋಲಾಸ್ ಮುಚಾಮಿ ಎನ್ನುವ ಈ ಮಹಾನ್ ಸಾಧಕ ಸುಮಾರು 1.5 ಕಿಲೋ ಮೀಟರ್ ವರೆಗೆ ಉದ್ದದ ರಸ್ತೆ ನಿರ್ಮಿಸಿದ್ದಾರೆ.

ಈ ರಸ್ತೆ ಕಗಾಂಡ ಶಾಪಿಂಗ್‌ ಸೆಂಟರ್‌ನಿಂದ ತನ್ನ ಗ್ರಾಮವನ್ನು ಸಂಪರ್ಕಿಸುತ್ತದೆ. ಬೆಳಗ್ಗೆ ಪ್ರಾರಂಭಿಸಿದರೆ ಸಂಜೆಯವರೆಗೆ ಈ ದಿನಗೂಲಿ ಕಾರ್ಮಿಕ ಪರಿಶ್ರಮ ಪಡುತ್ತಿದ್ದರು. ಹಲವು ಬಾರಿ ಅಲ್ಲಿನ ಸ್ಥಳೀಯ ಜವಾಬ್ದಾರಿಯುತ ಜನರಲ್ಲಿ ಅವರು ಈ ಬಗ್ಗೆ ಮನವಿ ಮಾಡಿದರು.

ಆದರೆ ಯಾರೂ ಇವರಿಗೆ ಸ್ಪಂದಿಸದೇ ಇದ್ದಾಗ ಅವರು ಸ್ವತಃ ತನ್ನ ಕೃಷಿ ಉಪಕರಣಗಳ ಸಹಾಯದಿಂದ ಈ ಕೆಲಸ ಮಾಡಿಯೇ ಬಿಟ್ಟರು. ಗ್ರಾಮದ ಮಹಿಳೆಯರು ಮತ್ತು ಮಕ್ಕಳಿಗೆ ದಾರಿ ಸುಗಮವಾಗಲಿ ಎಂದು ಈ ಕೆಲಸ ಮಾಡಿದ್ದೇನೆ ಎಂದು ಅವರು ಹೇಳುತ್ತಾರೆ. ಈ ಹಿಂದೆ ದಶರಥ ಮಾಂಜಿ ಇಂತಹದ್ದೇ ಒಂದು ಸಾಧನೆ ಮಾಡಿ ಇಡೀ ವಿಶ್ವದ ಗಮನ ಸೆಳೆದಿದ್ದರು. ಇದೀಗ ಮುಚಾಮಿಯವರನ್ನು ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಲಾಗುತ್ತದೆ.

Leave a Reply