Representational Image

ನೆರೆಯವರ ಬಾತ್ ರೂಮ್ ನೊಳಗೆ ಬಿದ್ದು ಐದು ದಿನಗಳ ಕಾಲ ಕೇವಲ ನೀರು ಸೇವಿಸಿ 7 ವರ್ಷದ ಬಾಲಕಿಯೊಬ್ಬಳು ಬದುಕುಳಿದ ಘಟನೆ ವರದಿಯಾಗಿದೆ. ಈ ಆಘಾತಕಾರಿ ಘಟನೆ ಹೈದರಾಬಾದ್ನಿಂದ ಸುಮಾರು 160 ಕಿ.ಮೀ ದೂರದಲ್ಲಿ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಖ್ತಲ್ ಪಟ್ಟಣದಲ್ಲಿ ನಡೆದಿದೆ. ಟೆರೇಸ್ ನಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ಆಟವಾಡುತ್ತಾ ನೆರೆಯವರ ಬಾತ್ರೂಂ ನೊಳಗೆ ಬಿದ್ದಿದ್ದು, ಐದು ದಿನಗಳ ಕಾಲ ಕೇವಲ ನೀರು ಸೇವಿಸಿ ಬದುಕುಳಿದಿದ್ಧಾಳೆ ಎಂದು ತೆಲಂಗಾಣ ಪೋಲಿಸರು ತಿಳಿಸಿದ್ದಾರೆ. ಬಾತ್ರೂಂ ನ ಛಾವಣಿಯ ತೆರೆದ ಭಾಗದಲ್ಲಿ ಪ್ಲಾಸ್ಟಿಕ್ ನೆಟ್ ಅಳವಡಿಸಿದ್ದರಿಂದ ಬಾಲಕಿಗೆ ಗಾಯವಾಗಿಲ್ಲ.

ಐದು ದಿನಗಳ ಕಾಲ ಯಾವುದೇ ಆಹಾರ ಸೇವಿಸದ ಕಾರಣ ಹುಡುಗಿ ತುಂಬಾ ಬಳಲಿದ್ದಳು. ಬಾಗಿಲು ಹೊರಗಿನಿಂದ ಚಿಲಕ ಹಾಕಿದ್ದರಿಂದ ಮಗುವಿನ ಕೂಗು ಯಾರಿಗೂ ಕೇಳಿಸಿಲ್ಲ, ಕಾಣೆಯಾದ ಮಗಳನ್ನು ಹುಡುಕಿ ಹುಡುಕಿ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ನೆರೆಮನೆಯವರು ಪ್ರವಾಸದಿಂದ ಮರಳಿದಾಗ ಮಗು ಬಾತ್ರೂಂ ನೆಲದಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದ್ದನ್ನು ಕಂಡು ಆಘಾತಗೊಂಡರು. ಬಾಲಕಿ ಅಖಿಲರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಬೇಸಿಗೆ ರಜೆಯನ್ನು ಕಳೆಯಲು ಹೋಗಿದ್ದ ನೆರೆ ಮನೆಯವರು ಕುಟುಂಬದ ಮದುವೆಗೆ ಪಾಲ್ಗೊಳ್ಳಲು ಬೇಗನೆ ಮರಳಿದ್ದರು. ಬೇಸಿಗೆ ರಜೆಯಲ್ಲಿ ಇಂತಹ ಅನಾಹುತಗಳು ಆಗದಂತೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

Leave a Reply