ಹೈದರಾಬಾದ್: ಹೈದರಾಬಾದಿನ ಪಾರ್ಕಿನಲ್ಲಿ ಹಿರಿಯಜ್ಜಿ ಆನೆಗೆ ಹುಟ್ಟು ಹಬ್ಬ ಆಚರಿಸಿದ ಘಟನೆ ವರದಿಯಾಗಿದೆ. ನಿಝಾಮರ ಕಾಲದ ಆನೆ ಇದು ಎನ್ನಲಾಗಿದ್ದು ನಿನ್ನೆ 80ವರ್ಷ ಪೂರ್ತಿಯಾದ ಸಂಭ್ರದಲ್ಲಿ ಹೈದರಾಬಾದಿನ ಝೂವಾಜಿಕಲ್ ಪಾರ್ಕಿನವರು, ಶನಿವಾರ ಆನೆಗೆ ಅವರು ಸೇರಿ ಹುಟ್ಟು ಹಬ್ಬವನ್ನು ಆಚರಿಸಿದರು. ಈ ಪಾರ್ಕಿನಲ್ಲಿ ಪ್ರಾಣಿಗಳ ಹುಟ್ಟುಹಬ್ಬ ಆಚರಿಸುವ ಸಂಪ್ರದಾಯ ಇರುವುದು ಒಂದು ವಿಶೇಷವಾಗಿದೆ, ನೆಹರೂ ಝೂವಾಜಿಕಲ್ ಹಿರಿಯಜ್ಜಿ ಆನೆ ರಾಣಿ ಕೇಕ್ ಕತ್ತರಿಸಿದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಆನೆಯನ್ನು ಝುವೋಲಜಿಕಲ್ ಪಾರ್ಕಿಗೆ ಹೈದರಾಬಾದಿನ ನಿಝಾಂ ಉಡುಗೊರೆ ನೀಡಿದ್ದರು. .ಆನೆಯ ಹುಟ್ಟುಹಬ್ಬದೊಂದಿಗೆ ಪಾರ್ಕಿನ 55ನೆ ವರ್ಷಾಚರಣೆಯೂ ನಡೆದಿದೆ. 1963ರಲ್ಲಿ ನೆಹರೂ ಝೂವಾಲಿಜಿಕಲ್ ಪಾರ್ಕಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹುಟ್ಟಿದ ಹಬ್ಬಕ್ಕೆ ದೊಡ್ಡ ಪ್ಲಂ ಕೇಕನ್ನು ಸಿಬ್ಬಂದಿಗಳು ತಂದಿದ್ದರು. ಆನೆಗೆ ಹೂಮಾಲೆ ಮತ್ತು ರಿಬ್ಬನ್‍ಗಳ ಮೂಲಕ ಅಲಂಕಾರ ಮಾಡಲಾಯಿತು. ರಾಣಿಗೆ ಕೇಕ್ ಇಷ್ಟವಲ್ಲದ್ದರಿಂದ ಬಾಳೆ ಹಣ್ಣು ನೀಡಿ ಅದನ್ನು ಸಂತೋಷಪಡಿಸಲಾಯಿತು.

ಈ ಆನೆಯನ್ನು ಪಾರ್ಕಿನ ಸಿಬ್ಬಂದಿಗಳು ಪಾರ್ಕ್‍ನಲ್ಲಿ ಅತಿಹೆಚ್ಚು ಅನುಸರಣಾಶೀಲ ಪ್ರಾಣಿ ಎಂದು ಹೇಳಿದರು. ಝೂನಲ್ಲಿ ಒಟ್ಟು ಐದು ಆನೆಗಳಿವೆ. ಬೇರೆ ಆನೆಗಳಿಗೆ ಆಹಾರ ಈ ಆನೆ ಆಹಾರವನ್ನು ಮುಟ್ಟಿ ನೋಡುವುದಿಲ್ಲ. ಅವೆಲ್ಲಕ್ಕೂ ಆಹಾರ ಬಂತೆಂದ ನಂತರವೇ ಇದು ಆಹಾರ ಸೇವಿಸುವುದು. ಇಲ್ಲಿ ಎಲ್ಲ ಪ್ರಾಣಿಗಳ ಹುಟ್ಟುಹಬ್ಬ ಆಚರಿಸುವ ಸಂಪ್ರದಾಯ ಇದೆಯಷ್ಟೇ. ಇಂತಹ ಹುಟ್ಟುಹಬ್ಬಗಳಲ್ಲಿ ಪ್ರಾಣಿಗಳಿಗೆ ವಿಶಿಷ್ಟ ಭಕ್ಷ್ಯ ಕೊಡಲಾಗುವುದು.

Leave a Reply