ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರಕಾರ ಹೊಸ ಹೊಸ ನಿಬಂಧನೆಗಳನ್ನು ಜನರ ಮೇಲೆ ಹೇರುತ್ತಿದೆ ಎಂದು ವರದಿಯಾಗುತ್ತಿದ್ದು ಸರಕಾರಿ ಕಚೇರಿಗಳನ್ನು ಪ್ರವೇಶಿಸುವ ಮಹಿಳೆಯರು ಕಡ್ಡಾಯವಾಗಿ ತಲೆ ವಸ್ತ್ರ ಧರಿಸರಬೇಕಾಗುತ್ತದೆ ಪ್ರಧಾನಿ ಕಚೇರಿ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಸಿದ್ರ ಯುವತಿಯೊಬ್ಬರು ಲಾಹೋರ್ ಪ್ರಾಂತ್ಯದ ಸರಕಾರಿ ಕಚೇರಿಯಲ್ಲಿ ತನಗಾದ ಅನುಭವವನ್ನು ಟ್ವಿಟರ್ ಮೂಲಕ ವಿವರಿಸಿದ್ದು ತನಗೆ ಶಿರೋವಸ್ತ್ರ ಧರಿಸದ ಕಾರಣಕ್ಕೆ ಸರಕಾರಿ ಕಚೇರಿಗೆ ಪ್ರವೇಶ ನಿರಾಕರಿಸಲಾಯಿತು ಎಂದು ವಿವರಿಸಿದ್ದಾರೆ. ಇನ್ನು ಮುಂದೆ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ, ಸಚಿವಾಲಯಗಳಲ್ಲಿ ತಲೆ ವಸ್ತ್ರ ಧರಿಸುವುದು ಕಡ್ಡಾಯ ಎಂದು ಸರಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ಇಮ್ರಾನ್ ಖಾನ್ ಆದೇಶ ಪ್ರಕಾರ ಮಹಿಳೆಯರು ದುಪ್ಪಟ್ಟ ಧರಿಸಬೇಕು. ಅಧಿಕಾರಿಯೊಬ್ಬರು ದುಪ್ಪಟ್ಟ ಧರಿಸಿ ಬರುವಂತೆ ಹೇಳುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ದುಪ್ಪಟ್ಟ ಧರಿಸದೆ ಬಂದ ತನ್ನನ್ನು ಕಚೇರಿಯೊಳಗೆ ಬಿಡಲಿಲ್ಲ. ಹೀಗೇಕೆ ಎಂದು ಕೇಳಿದಾಗ ಇದು ಇಲ್ಲಿನ ನಿಯಮ ಎಂದು ಅಧಿಕಾರಿಗಳು ಹೇಳಿದರು ಎಂದು ಸಿದ್ರ ಟ್ವಿಟರ್‍ನಲ್ಲಿ ಹೇಳಿದ್ದಾರೆ.

ಇಮ್ರಾನ್ ಖಾನ್‍ರ ತೆಹ್ರಿಕೆ ಇನ್ಸಾಫ್ ಪಾರ್ಟಿಯ ಅಧಿಕೃತ ವೆಬ್‍ಸೈಟ್‍ನಿಂದ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದು ಯುವತಿಗೆ ಅಧಿಕಾರಿಗಳು ಸೂಚಿಸುವುದು ವೀಡಿಯೊದಲ್ಲಿ ಕಂಡು ಬರುತ್ತಿದೆ.

Leave a Reply