ನಾವು 2008 ರಲ್ಲಿ ಮಹಾರಾಷ್ಟ್ರದ ಥಾಣೆ, ವಾಶಿ, ಪನವೇಲ್ ಎಂಬಲ್ಲಿ ನಾಟಕ ಮತ್ತು ಸಿನಿಮಾ ಥಿಯೇಟರ್ ಗಳಲ್ಲಿ ಬಾಂಬ್ ಸ್ಫೋಟಿಸಿದವರು ಎಂದು ನ್ಯಾಯಾಲಯದಿಂದ ದೋಶಮುಕ್ತರಾಗಿ ಹೊರ ಬಂದ ಸನಾತನ ಸಂಸ್ಥೆಯ ಕಾರ್ಯಕರ್ತರನ್ನು ಇಂಡಿಯಾ ಟುಡೇ ಟಿವಿ ಬಹಿರಂಗಪಡಿಸಿದೆ.

ಇಂಡಿಯಾ ಟುಡೇ ಟಿ.ವಿ. ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸನಾತನ ಸಂಸ್ಥೆಯ ಸಕ್ರಿಯ ಕಾರ್ಯರ್ತರಾದ ಮಂಗೇಶ್ ದಿನಕರ್ ನಿಕಮ್, ಹರಿಬಾವು ಕೃಷ್ಣ ದಿವಾಕರ್ ಎಂಬವರು ಸ್ಫೋಟದಲ್ಲಿ ತಮ್ಮ ಪಾತ್ರವಿರುವುದನ್ನು ಬಹಿರಂಗಪಡಿಸಿದ್ದಾರೆ.

ಮನೆಯಿಂದ ಸ್ಪೋಟಕ ವಸ್ತುಗಳನ್ನು ಪತ್ತೆ ಹಚ್ಚಿಯೂ ಕೂಡಾ ಪ್ರಮುಖ ಆರೋಪಿಯ ಸಹಚರನೆಂಬ ಆರೋಪವಿರುವ ಹರಿಭಾವು ದಿವಾಕರನ ಈ ಹೇಳಿಕೆಯಿಂದ ಏಟಿಎಸ್ ಪೇಚಿಗೆ ಸಿಲುಕಿದೆ. ಹಿಂದೂ ದೇವತೆಗಳನ್ನು ನಿಂದಿಸಲಾಗುತ್ತಿದೆಯೆಂದಾರೋಪಿಸಿ ಮರಾಠಿ ನಾಟಕವಾದ ಅಮಿ ಪಚ್ ಪುತೈ ಹಾಗೂ ಬಾಲಿವುಡ್ ಚಿತ್ರವಾದ “ಜೋಧ ಅಕ್ಬರ್” ಎಂಬ ಚಿತ್ರ ಪ್ರದರ್ಶಿಸಿದ ಥಿಯೇಟರ್ಗಳಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. 2011ರಲ್ಲಿ ಈರ್ವರನ್ನು ಶಿಕ್ಷಿಸಿದ ನ್ಯಾಯಾಲಯ ಹರಿಬಾವು ಮಂಗೆ ಸಹಿತ ನಾಲ್ವರನ್ನು ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು. ಇವರ ಮನೆಯಿಂದ ಎರಡು ರಿವಾಲ್ವರ್, 20 ಜಿಲೇಟಿನ್ ಗಳು 23 ಡಿಟೋನೈಟ್ ಗಳನ್ನು ಪತ್ತೆ ಹಚ್ಚಲಾಗಿತ್ತು. ಆದರೆ ಏಟಿಎಸ್ ಅರೋಪ ಪಟ್ಟಿಯಲ್ಲಿ ಇದನ್ನು ಸೇರಿಸಿರಲಿಲ್ಲ. ಮುಖ್ಯ ಆರೋಪಿಯ ಸಹಚರ ಎಂಬ ನೆಲೆಯಲ್ಲಿ ನಾನು ವಿಚಾರಣೆ ಎದುರಿಸಿದೆ ಎಂದು ರಹಸ್ಯ ಕ್ಯಾಮರಾದ ಮುಂದೆ ಬಹಿರಂಗಗೊಂಡಿದೆ.

ರಹಸ್ಯ ಕಾರ್ಯಾಚರಣೆಯಲ್ಲಿ,  ಜನರನ್ನು ಕೊಲ್ಲಬಹುದಿತ್ತು ಆದರೆ ಕೇವಲ ಕೇವಲ ಜನರಲ್ಲಿ ಭಯ ಹುಟ್ಟಿಸಲು ಹೀಗೆ ಮಾಡಲಾಗಿತ್ತು. ಅಷ್ಟು ಮಾತ್ರ ನಮ್ಮ ಪಾತ್ರ ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.

Leave a Reply