(Image: PTI)

ಕಳೆದ ನಾಲ್ಕುವರೆ ವರ್ಷಗಳಲ್ಲಿ ಸರ್ಕಾರದ ಸಾಲ ಭಾದ್ಯತೆ (Total liabilities of the government) 49 ರಷ್ಟು ಏರಿಕೆಯಾಗಿ ಎಂದು ಹಣಕಾಸು ಸಚಿವಾಲಯದ ವರದಿ ತಿಳಿಸಿದೆ. ಶುಕ್ರವಾರ ಬಿಡುಗಡೆಯಾದ ಸರ್ಕಾರಿ ಸಾಲದ ಸ್ಥಿತಿ ಪತ್ರದ 8 ನೇ ಆವೃತ್ತಿ ಪ್ರಕಾರ ಕೇಂದ್ರ ಸರಕಾರದ ಸಾಲದ ಬಾಧ್ಯತೆಯು 82 ಲಕ್ಷ ಕೋಟಿ ರೂ.ಗೆ ಏರಿದೆ.
ಸೆಪ್ಟೆಂಬರ್ 2014 ರವರೆಗೆ ಹೋಲಿಸಿದರೆ ಜೂನ್ 2014 ರ ತನಕ ಸಾಲ ಬಾಧ್ಯತೆ 54,90,763 ಕೋಟಿ ರೂ.ಗಳಾಗಿದ್ದು, ಈಗ ಅದು ಡಬಲ್ ಆಗಿದೆ.
ಮಾತ್ರವಲ್ಲ ಸಾರ್ವಜನಿಕ ಸಾಲ ಮತ್ತು ಆಂತರಿಕ ಸಾಲ ಹಾಗೂ ಮಾರುಕಟ್ಟೆ ಸಾಲ ಗಣನೀಯವಾಗಿ ಏರಿಕೆಯಾಗಿರುವುದನ್ನು ವರದಿ ತಿಳಿಸುತ್ತದೆ. ಸಾರ್ವಜನಿಕ ಸಾಲ 48 ಲಕ್ಷ ಕೋಟಿ ಇದ್ದದ್ದು 73 ಲಕ್ಷ ಕೋಟಿ, ಆಂತರಿಕ ಸಾಲ 68 ಲಕ್ಷ ಕೋಟಿ, ಮಾರುಕಟ್ಟೆ ಸಾಲ 52 ಲಕ್ಷ ಕೋಟಿ ಎಂದು ದಾಖಲೆಗಳು ಬಹಿರಂಗ ಪಡಿಸಿವೆ.

ಸರ್ಕಾರದ ಸಾಲದ ಸ್ಥಿತಿ ಪತ್ರದಲ್ಲಿ, ಭಾರತದ ಸರ್ಕಾರದ ಒಟ್ಟು ಸಾಲ ಬಾಧ್ಯತೆ ಸ್ಥಿತಿಯ ವಿವರವಾದ ವಿಶ್ಲೇಷಣೆಯನ್ನು ನೀಡಲಾಗಿದೆ. ಸರಕಾರದ ಸಾಲಭಾದ್ಯತೆಯು ಸ್ಥಿರವಾಗಿ ಸುಧಾರಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಮಾತ್ರವಲ್ಲ, 2010 – 2011 ರಿಂದ ಪ್ರತಿ ವರ್ಷ ಈ ಕುರಿತು ಎಲ್ಲಾ ಸರಕಾರಗಳು ದಾಖಲೆಗಳನ್ನು ಬಿಡುಗಡೆ ಮಾಡುತ್ತದೆ.

Leave a Reply