Photo: PTI/Representational image

ಚುನಾವಣೆಯಲ್ಲಿ ಈಗಾಗಲೇ ಮತ ಹಾಕಿ ಮತ್ತೆ ಉಪಚುನಾವಣೆಯಲ್ಲಿ ಅಥವಾ ಇನ್ನಾವುದೇ ಚುನಾವಣೆಯಲ್ಲಿ ಮತ ಹಾಕಬೇಕಾಗಿ ಬಂದಾಗ ಎಡಗೈಯ ಮಧ್ಯದ ಬೆರಳಿಗೆ ಇಂಕು ಹಾಕುತ್ತಾರೆ. ಯಾಕೆಂದರೆ ಒಮ್ಮೆ ಹಾಕಿದ ಇಂಕು ಅಷ್ಟು ಬೇಗ ಅಳಿದು ಹೋಗುವುದಿಲ್ಲ. ಮಾತ್ರವಲ್ಲ, ಕಳ್ಳ ಮತದಾನವನ್ನು ತಡೆಯಲೂ ಇದು ಸಹಕಾರಿ ಎಂಬ ನೆಲೆಯಲ್ಲಿ ಈ ಶಾಯಿಯನ್ನು ಬೆರಳಿಗೆ ದಪ್ಪಗೆ ಹಾಕುತ್ತಾರೆ. ಹಲವು ವಾರಗಳ ವರೆಗೆ ನಮ್ಮ ಮತದಾನದ ಗುರುತು ನಮ್ಮ ಕೈಯಲ್ಲಿ ಇರುತ್ತದೆ.

ಆದರೆ ಉತ್ತರ ಪ್ರದೇಶದ ನೊಯಿಡಾ ಮತದಾರರ ಬೆರಳಿಗೆ ಹಾಕಿದ ಶಾಯಿ ಮಸಿ ಅಳಿದು ಹೋದ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ನೋಯ್ಡಾದ ಹಲವಾರು ಮತದಾರರು ಗುರುವಾರ ಮತ ಚಲಾಯಿಸಿದ್ದು, ಅವರು ತಮ್ಮ ಬೆರಳಿನ ಮೇಲೆ ಹಾಕಲಾದ ಶಾಯಿಯನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಲ್ಲಿ ವರದಿ ಕೇಳಿದೆ. ಚುನಾವಣೆಗಿಂತ ಮುಂಚೆ ಸಿಎಐಐಆರ್ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

Leave a Reply