Image credit : Pixabay

ಜನಪ್ರಿಯ ಫೋಟೋ-ಹಂಚಿಕೆ ಮೊಬೈಲ್ ಅಪ್ಲಿಕೇಶನ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಗಂಭೀರ ದೋಷ ವನ್ನು ಪತ್ತೆ ಹಚ್ಚಿ ತೋರಿಸಿದ ಬಳಿಕ ಚೆನ್ನೈ ಮೂಲದ ಟೆಕ್ಕಿ $ 30,000 ಅಥವಾ 20 ಲಕ್ಷ ರೂ. ಫೇಸ್ ಬುಕ್ ನಿಂದ ಒಂದು ತಿಂಗಳ ಮೊದಲು ಬಹುಮಾನವಾಗಿ ಪಡೆದಿದ್ದರು. ಫೋಟೋ ಶೇರಿಂಗ್ ಆಪ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಬಗ್ ಹುಡುಕಿದ್ದಕ್ಕಾಗಿ ಫೇಸ್ಬುಕ್ ನಿಂದ 20 ಲಕ್ಷ ರೂಪಾಯಿಗಳನ್ನು ಗೆದ್ದ ಲಕ್ಷ್ಮಣ್ ಮುಥಯ್ಯ ಮತ್ತೊಮ್ಮೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ದೋಷವನ್ನು ಹುಡುಕಿದ್ದಾರೆ. ಈ ಬಾರಿ ಅವರಿಗೆ 7 ಲಕ್ಷ ರೂ. ದೊರೆತಿದೆ. ಮುಥಯ್ಯ ಪಾಸ್ವರ್ಡ್ ರಿಸೆಟ್ ನ ಸಮಯ ಅಪರ್ಯಾಪ್ತ ಸುರಕ್ಷಾ ವ್ಯವಸ್ಥೆಗಳನ್ನು ಪತ್ತೆ ಹಚ್ಚಿದ್ದರು .ಇದರಿಂದ ಯಾರು ಬೇಕಿದ್ದರೂ ಅಕೌಂಟ್ ಹ್ಯಾಕ್ ಮಾಡಬಹುದಾಗಿತ್ತು.

ಇನ್‌ಸ್ಟಾಗ್ರಾಮ್‌ನಲ್ಲಿ ದೋಷವಿದ್ದು ಅದು ಖಾತೆಯ ಹ್ಯಾಕಿಂಗ್‌ಗೆ ಕಾರಣವಾಗಬಹುದು, ಏಕೆಂದರೆ ಬಳಕೆದಾರರ ಒಪ್ಪಿಗೆಯಿಲ್ಲದೆ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ಹ್ಯಾಕರ್‌ಗೆ ಅವಕಾಶ ಮಾಡಿಕೊಟ್ಟಿತು. ಫೇಸ್‌ಬುಕ್‌ನ ತಂಡವು ಈ ದೋಷವನ್ನು ಸರಿಪಡಿಸಿತ್ತು. ಚೆನ್ನೈ ಮೂಲದ ಟೆಕ್ಕಿ ಈ ದೋಷವನ್ನು ಪತ್ತೆಹಚ್ಚಿದ್ದು ಇದೇ ಮೊದಲಲ್ಲ. ಅವರು ಈ ಮೊದಲು ಡೇಟಾ ಅಳಿಸುವಿಕೆಯ ದೋಷವನ್ನು ಕಂಡುಹಿಡಿದಿದ್ದಾರೆ ಎಂದು ಐಎಎನ್‌ಎಸ್ ವರದಿ ತಿಳಿಸಿದೆ.

Leave a Reply