ರಾಬರ್ಟ್ ಡೌನಿಂಗ್ ಜೂನಿಯರ್ ನಿರ್ವಹಿಸಿದ ಐರನ್ ಮ್ಯಾನ್ ಎಂಬ ಸಿನೆಮಾ ಪಾತ್ರವು ಎಲ್ಲರನ್ನು ಆಕರ್ಷಿಸಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಐರನ್ ಮ್ಯಾನ್ ಫ್ರಾಂಚೈಸ್ ನಿಂದ ಸ್ಪೂರ್ತಿ ಪಡೆದು ವಾರಣಾಸಿಯ ಖಾಸಗಿ ವಿದ್ಯಾಲಯವೊಂದರ ಉದ್ಯೋಗಿಯೋರ್ವರು ಐರನ್ ಮ್ಯಾನ್ ಕವಚವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಶತ್ರುಗಳ ವಿರುದ್ಧ ಮುಖಾಮುಖಿಯಲ್ಲಿ ಭಾರತೀಯ ಸೈನಿಕರಿಗೆ ನೆರವಾಗಲಿದೆ.

ಅಶೋಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಮಾಡುವ ಶ್ಯಾಮ್ ಚೌರಾಸಿಯಾ ಎಂಬುವರು ಭಾರತೀಯ ಸೈನಿಕರನ್ನು ಮನದಲ್ಲಿಟ್ಟುಕೊಂಡು ಈ ಐರನ್ ಮ್ಯಾನ್ ಸೂಟ್ ಅನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ.

ಭಯೋತ್ಪಾದಕರು ಮತ್ತು ಶತ್ರುಗಳ ವಿರುದ್ಧ ಹೋರಾಡುವ ಭಾರತೀಯ ಸೈನಿಕರು ಲೋಹದ ಸೂಟ್ ಧರಿಸಿದರೆ ಇದು ಹಲವು ರೀತಿಯ ಆಕ್ರಮಣಗಳಿಂದ ಸೈನಿಕರನ್ನು ರಕ್ಷಿಸಬಹುದು ಎಂದು ಶ್ಯಾಮ್ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದರು. ನಾವು ಇದಕ್ಕಾಗಿ ಗೇರ್ ಮತ್ತು ಮೋಟಾರುಗಳನ್ನು ಬಳಸಿದ್ದೇವೆ. ಮೊಬೈಲ್ ಸಂಪರ್ಕಗಳನ್ನು ಕೂಡ ಹೊಂದಿದೆ. ರಿಮೋಟ್ ಹೊಂದಿರುವುದರಿಂದ ಇದನ್ನು ದೂರದಿಂದಲೇ ಬಳಸಬಹುದಾಗಿದೆ. ಇದು ಸಂವೇದಕಗಳನ್ನು ಹೊಂದಿದ್ದು ಜವಾನರಿಗೆ ಹಿಂಬದಿಯಿಂದ ದಾಳಿ ಮಾಡಿದರೂ ಸೂಚನೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

 

Leave a Reply