ಸಾಂದರ್ಭಿಕ ಚಿತ್ರ

ಗಾಝ: ಇಸ್ರೇಲಿನ ಸೇನೆ ಫೆಲಸ್ತೀನಿನ ಸಾವಿರಾರು ಪ್ರತಿಭಟನಕಾರರ ವಿರುದ್ಧ ಗುಂಡು ಹಾರಿಸಿದು ಮೂವರು ಫೆಲಸ್ತೀನ್ ನಾಗರಿಕರು ಮೃತಪಟ್ಟು 376 ಮಂದಿಗಾಯಗೊಂಡಿದ್ದಾರೆ. ಗಾಝಪಟ್ಟಿಯಲ್ಲಿ ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ ಎಂದು ಶಿನ್‍ವುಆ ಪತ್ರಿಕೆ ವರದಿಮಾಡಿದೆ.ಇಸ್ರೇಲ್ ಸೇನೆ ಗುಂಡು ಹಾರಿಸಿದ್ದರಿಂದ ಗಾಝಪಟ್ಟಿಯಲ್ಲಿ ಮೂವರು ಮೃತಪಟ್ಟಿದ್ದು ಇದರಲ್ಲಿ ಒಂದು ಮಗು ಕೂಡ ಸೇರಿದೆ ಎಂದು ಗಾಝಾದ ಅರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್ ಕೆದರಾ ಪತ್ರಕರ್ತರಿಗೆ ತಿಳಿಸಿದರು.

192 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇವರಲ್ಲಿ126 ಮಂದಿ ಇಸ್ರೇಲ್ ಸೇನೆ ಗುಂಡು ಹಾರಿಸಿದ್ದರಿಂದ ಗಾಯಗೊಂಡರೆಂದು ಅವರು ಹೇಳಿದರು.ಮೃತರಲ್ಲಿ ಇಬ್ಬರು ಚಿಕಿತ್ಸೆ ಸಹಾಯಕರ ಮತ್ತುಇಬ್ಬರು ಪತ್ರಕರ್ತರು ಇದ್ದಾರೆ ಎಂದು ಆಶ್ರಫ್ ತಿಳಿಸಿದ್ದು ಕಳೆದ ಮಾರ್ಚ್ 30ರಿಂದ ಗ್ರೇಟ್ ಮಾರ್ಚ್ ಪ್ರತಿಭಟನೆ ಆರಂಭವಾಗಿದ್ದು ಒಟ್ಟು 197 ಫೆಲಸ್ತೀನಿ ನಾಗರಿಕರನ್ನು ಹತ್ಯೆಮಾಡಲಾಗಿದೆ 21 ಸಾವಿರಕ್ಕೂ ಹೆಚ್ಚು ಫೆಲಸ್ತೀನಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

Leave a Reply