ನವದೆಹಲಿ: ,ಮುಹಮ್ಮದಲಿ ಜಿನ್ನಾರ ಚಿತ್ರವನ್ನು ತೆರವುಗೊಳಿಸಬೇಕೆಂದು ಅಲಿಘಢ ವಿಶ್ವ ವಿದ್ಯಾಲಯದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿಂದೂ ವಾಹಿನಿಯನ್ನು ತೀವ್ರವಾಗಿ ಟೀಕಿಸಿ ಹಿರಿಯ ಬರಹಗಾರ,ಚಲನಚಿತ್ರ ಕತೆಗಾರ ಜಾವೇದ್ ಅಖ್ತರ್ ರಂಗಕ್ಕಿಳಿದಿದ್ದಾರೆ.
ಜಿನ್ನಾ ಅಲೀಘಢದ ಅದ್ಯಾಪಕನೋ, ವಿಧ್ಯಾಥಿಯೋ ಅಲ್ಲ. ಆದ್ದರಿಂದ ಜಿನ್ನಾ ಚಿತ್ರವನ್ನು ತೆರವು ಗೊಳಿಸಬೇಕು. ಜಿನ್ನಾ ವಿರುದ್ಧ ಪ್ರತಿಕ್ರಿಯಿಸುವವರು ಗೋಡ್ಸೆಯ ದೇವಾಲಯಗಳ ವಿರುದ್ಧವೂ ದನಿಯೆತ್ತಬೇಕಾಗಿದೆಯೆಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.

ಅಲೀಘಡದಲ್ಲಿ ನಡೆದ ಘಟನೆಗಳು ದೇಶಕ್ಕೆ ಅವಮಾನ ಮಾಡುವಂತಹದ್ದು ಎಂದೂ ಹೇಳಿದ್ದಾರೆ.
ಮುಹಮ್ಮದಲಿ ಜಿನ್ನಾ ಚಿತ್ರವನ್ನು ತೆರವುಗೊಳಿಸಬೇಕೆಂದು ಅಲೀಘಡ ಮುಸ್ಲಿಮ್ ವಿ.ವಿ.ಯಲ್ಲಿ ಯೋಗಿ ಆದಿತ್ಯನಾತ್ ರ ಸಂಘಟನೆಯಾದ ಹಿಂದೂ ವಾಹಿನಿಯ ಕಾರ್ಯಕರ್ತರು ದಾಳಿ ನಡೆಸಿದ್ದರು. ಜೈಶ್ರೀರಾಮ್ ಎಂಬ ಘೋಷಣೆಯೊಂದಿಗೆ ಹಿಂದೂ ವಾಹಿನಿಯ ಕಾರ್ಯಕರ್ತರು ಶಿಕ್ಷಣ ಕೇಂದ್ರಕ್ಕೆ ನುಗ್ಗಿದ್ದನ್ನು ವಿದ್ಯಾರ್ಥಿಗಳು ತಡಡೆದಾಗ ಪರಿಸ್ಥಿತಿ ಬಿಡಾಯಿಸಿತ್ತು. ಆದರೆ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲು ಪೋಲೀಸರು ಮುಂದಾಗಲಿಲ್ಲ. ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ಪೋಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರು ವಾಯು ಸಿಡಿಸಿದರು. ಇದರಿಮದ ವಿದ್ಯಾರ್ಥಿ ಸಂಘಟನೆಯ ನಾಯಕರು ಗಾಯಗೊಂಡರು.

ಮುಹಮ್ಮದ್ ಅಲಿ ಜಿನ್ನಾ ಅಲೀಘಡ್ ವಿ.ವಿ.ಯ ಸ್ಥಾಪಕ ಸದಸ್ಯವೆಂಬುದನ್ನು ಸಂಸ್ಥೆಯು ಬಹಿರಂಗಗೊಳಿಸಿತು. ಭಾರತ ವಿಭಜನೆಯಾಗುವುದಕ್ಕಿಂತ ಮೊದಲೇ ಅವರು ಅದರ ಅಜೀವ ಸದಸ್ಯರಾಗಿದ್ದರು. ಅಲ್ಲದೆ ಮಹಾತ್ಮಾ ಗಾಂಧಿ,ಸರೋಜಿನಿ ನಾಯ್ಡ, ಜವಹರಲಾಲ ನೆಹರೂ ಮುಂತಾದ ಅನೇಕರು ಈ ಶಿಕ್ಷಣ ಸಂಸ್ಥೆಯ ಅಜೀವ ಸದಸ್ಯರಾಗಿದ್ದರು. ಅವರೆಲ್ಲರ ಭಾವ ಚಿತ್ರಗಳು ಶಿಕ್ಷಣ ಸಂಸ್ಥೆಯಲ್ಲಿದೆಯೆಂಬುದನ್ನೂ ಉಪ ಕುಲಪತಿಯ ವಕ್ತಾರ ತಿಳಿಸಿದರು

Leave a Reply