ಸಾಂದರ್ಭಿಕ ಚಿತ್ರ

ಗುಜರಾತಿನ ಸಬರ್ಮತಿ ಜೈಲಿನಲ್ಲಿ ಕೈದಿಗಳಿಗಾಗಿ ಪತ್ರಿಕೋದ್ಯಮ ಕೋರ್ಸ್ ಪ್ರಾರಂಭವಾಗಿದೆ. ಮೊದಲು ಪ್ರೂಫ್ ರೀಡಿಂಗ್ ಕೋರ್ಸನ್ನು ಮೊದಲು ಪ್ರಾರಂಭಿಸಲಾಗುತ್ತದೆ. ಕೋರ್ಸು ಮುಗಿಸುವವರಿಗೆ ಉದ್ಯೋಗವನ್ನೂ ನೀಡಲಾಗುವುದು. ಇದಕ್ಕೆ ಮಹಾತ್ಮಾ ಗಾಂಧಿ ಸ್ಥಾಪಿಸಿದ ನವಜೀವನ್ ಟ್ರಸ್ಟ್ ನೇತೃತ್ವ ವಹಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ಜೈಲಿನಲ್ಲಿ ಇಂತಹ ಕೋರ್ಸು ಸ್ಥಾಪಿಸಿರುವುದಾಗಿಯೂ ಕೈದಿಗಳಿಗೆ ಮಾಧ್ಯಮ ರಂಗದಲ್ಲಿ ಉದ್ಯೋಗಾವಕಾಶಗಳು ಲಭಿಸಲು ಅವಕಾಶ ಮಾಡಿಕೊಡುವುದಾಗಿ ನವಜೀವನ್ ಟ್ರಸ್ಟ್ ಮುಖ್ಯಸ್ಥ ವಿವೇಕ್ ದೇಸಾಯಿ ಹೆಳಿದರು.

ಅಕ್ಟೋಬರ್ ಹದಿನೈದಕ್ಕೆ ತರಗತಿ ಪ್ರಾರಂಭಿಸುವುದಾಗಿ ಹೇಳಿದ ಅವರು ಗಾಂಧೀಜಿಯವರ 150ನೇಯ ಜನ್ಮದಿನಾಚರಣೆಯ ಪ್ರಯುಕ್ತ ಈ ಕೋರ್ಸು ಪ್ರಾರಂಭಿಸಲಾಗಿದೆಯೆಂದು ಹೇಳಿದರು.

Leave a Reply