ಸಾಂದರ್ಭಿಕ ಚಿತ್ರ

ಬೇಕಾಗುವ ಸಾಮಗ್ರಿ:

ಪಾಲಾಕ್ ಸೊಪ್ಪು 200 ಗ್ರಾಂ, ಆಲೂಗಡ್ಡೆ 100 ಗ್ರಾಂ, ಜೀರಿಗೆ – 1 ಟೀ ಚಮಚ, ಇಂಗು- 1 ಚಿಟಿಕೆ, ಕೆಂಪು ಮೆಣಸಿನ ಹುಡಿ – 1 ಟೀ ಚಮಚ, ಎಣ್ಣೆ – ಮೂರು ಟೇಬಲ್ ಚಮಚ, ಹೆಚ್ಚಿದ ಹಸಿ ಮೆಣಸಿನ ಕಾಯಿ -2/3, ಗರಂ ಮಸಾಲಾ ಅರ್ಧ ಟೀ ಚಮಚ, ಹೆಚ್ಚಿದ ಈರುಳ್ಳಿ – 1, ಹೆಚ್ಚಿದ ಶುಂಠಿ – ಅರ್ಧ ತುಂಡು, ಉಪ್ಪು – ಒಂದೂವರೆ ಟೀ ಚಮಚ, ನೀರು – ಅರ್ಧ ಕಪ್.

ತಯಾರಿಸುವ ವಿಧಾನ:

ಪಾಲಾಕ್ ಸೊಪ್ಪನ್ನು ತೊಳೆದು ಕತ್ತರಿಸಿಕೊಳ್ಳಿ. ಆಲೂಗಡ್ಡೆ ಸಿಪ್ಪೆ ತೆಗೆದು ಚಿಕ್ಕ ತುಂಡುಗಳಾಗಿ ಕತ್ತರಿಸಿ. ಪ್ಯಾನ್‍ನಲ್ಲಿ ಎಣ್ಣೆ ಕಾಯಿಸಿ ಜೀರಿಗೆ, ಇಂಗು ಹಾಕಿ ಕೆಲ ಸೆಕೆಂಡುಗಳ ಕಾಲ ಹುರಿ ಯಿರಿ. ಹಸಿ ಮೆಣಸಿನಕಾಯಿ, ಈರುಳ್ಳಿ, ಶುಂಠಿ ಸೇರಿಸಿ ಈರುಳ್ಳಿ ಕಡು ಕಂದು ಬಣ್ಣ ಬರುವವರೆಗೆ ಬೇಯಿಸಿ. ಕೆಂಪು ಮೆಣಸಿನ ಹುಡಿ, ಉಪ್ಪು ದನಿಯಾ ಹುಡಿ, ಪಾಲಾಕ್ ಸೊಪ್ಪು , ಆಲೂಗಡ್ಡೆ ಸೇರಿಸಿ ಚೆನ್ನಾಗಿ ಕಲೆಸಿ. ನೀರು ಹಾಕಿ ಮುಚ್ಚಿ ಆಲೂಗಡ್ಡೆ ಮೃದುವಾಗುವವರೆಗೆ ಬೇಯಿಸಿ. ಪರೋಟ ಅಥವಾ ನಾನ್ ಜತೆ ಬಿಸಿಯಾಗಿ ಬಡಿಸಿ.

Leave a Reply