ಮೂಲ :ಇಂಡಿಯಾ ಟೈಮ್ಸ್ – ಟೈಮ್ಸ್ ಆಫ್ ಇಂಡಿಯಾ ಮೂಲದಿಂದ

ಕಳೆದ ಎರಡು ವಾರಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜನರು ಬೀದಿಗಿಳಿದಿದ್ದಾರೆ. ಅವರ ಪ್ರಕಾರ ಇದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ತೋರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಪ್ರಶ್ನಾರ್ಹ ಕಾಯ್ದೆಯು ಮೋದಿಯವರ ಆರು ವರ್ಷದ ಅಧಿಕಾರಾವಧಿಯಲ್ಲಿ ಅವರು ಎದುರಿಸಿದ ದೊಡ್ಡ ಸವಾಲಾಗಿ ಗೋಚರಿಸುತ್ತಿದೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಬಂಧನ ಕೇಂದ್ರಗಳಿಲ್ಲ, ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ ಪ್ರಧಾನಿಯವರ ಹೇಳಿಕೆಗೆ ವಿರುದ್ಧವಾಗಿ, ಕರ್ನಾಟಕದಲ್ಲಿ ಈಗಾಗಲೇ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ನೇಲಮಂಗಲ ಬಳಿ ಅಕ್ರಮ ವಲಸಿಗರಿಗಾಗಿ ಮೊದಲ ಬಂಧನ ಕೇಂದ್ರವನ್ನು ಪ್ರಾರಂಭಿಸಿದೆ. ನಾವು ಬಂಧನ ಕೇಂದ್ರವನ್ನು ತೆರೆದಿದ್ದು, ಅಕ್ರಮ ವಲಸಿಗರನ್ನು ತುಂಬಲು ಇದು ಸಿದ್ಧವಾಗಿದೆ ಎಂದು ಸಮಾಜ ಕಲ್ಯಾಣ ವಿಭಾಗದ ಆಯುಕ್ತ ಆರ್.ಎಸ್. ಪೆದ್ದಪ್ಪಯ್ಯ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು. ರಾಜ್ಯ ಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

ಜನವರಿಯಲ್ಲಿ ಈ ಡೆಟೆನ್ಷನ್ ಸೆಂಟರ್ ತೆರೆಯಲು ಕೇಂದ್ರ ಸಿದ್ಧತೆ ನಡೆಸಿತ್ತು. ಕೇಂದ್ರ ಸರಕಾರ ನಿರ್ದೇಶನದ ಮೇರೆಗೆ ಅದನ್ನು ಮುಂದುವರೆಸಲಾಗಿದೆ. ಇದುವರೆಗೆ ಯಾವುದೇ ಅಕ್ರಮ ವಲಸಿಗರನ್ನು ದಾಖಲಿಸಲಾಗಿಲ್ಲ. ಅಕ್ರಮ ವಲಸಿಗರನ್ನು ಗುರುತಿಸಿ ಬಂಧನ ಕೇಂದ್ರಕ್ಕೆ . ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಕಳುಹಿಸುತ್ತದೆ ”ಎಂದು ಪೆದ್ದಪ್ಪಯ್ಯ ಹೇಳಿದರು. ಸರಕಾರ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲನ್ನು ಬಂಧನ ಕೇಂದ್ರವಾಗಿ ಪರಿವರ್ತಿಸಿದೆ. ಇದರಲ್ಲಿ ಆರು ಕೊಠಡಿಗಳು, ಅಡಿಗೆ ಮನೆ, ಭದ್ರತಾ ಕೊಠಡಿ,ವಾಚ್ ಟವರ್ ಮತ್ತು 24 ಜನರಿಗೆ ಅವಕಾಶ ಕಲ್ಪಿಸಿದೆ. ಕಂಪೌಂಡ್ ಗೋಡೆಯನ್ನು ಮುಳ್ಳು ತಂತಿಯಿಂದ ಭದ್ರ ಪಡಿಸಲಾಗಿದೆ.

ಅಕ್ರಮ ವಲಸಿಗರನ್ನು ವಾಸಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 35 ತಾತ್ಕಾಲಿಕ ಬಂಧನ ಕೇಂದ್ರಗಳನ್ನು ಗುರುತಿಸಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ನವೆಂಬರ್‌ನಲ್ಲಿ ತಿಳಿಸಿತ್ತು. ವಿವಿಧ ದೇಶಗಳ 866 ವ್ಯಕ್ತಿಗಳ ವಿರುದ್ಧ ವಿದೇಶಿಯರ ಕಾಯ್ದೆ ಮತ್ತು ಇತರ ಕಾನೂನುಗಳ ಅಡಿಯಲ್ಲಿ 612 ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರ ಹೇಳಿದೆ.

https://www.indiatimes.com/news/india/karnataka-opens-its-first-detention-centre-for-illegal-immigrants-502980.html?fbclid=IwAR2YVVRNtvk0kt_7aQQNGWdsOTwWUzKu5L_9ih2xd1_hqE7059cV-oqtUzQ

 

LEAVE A REPLY

Please enter your comment!
Please enter your name here