ತಿರುವನಂತಪುರಂ:ತಾನು ಸಾಯುವುದು ಖಚಿತವಾಗಿದೆ. ನೀವು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಮಕ್ಕಳನ್ನು ತಮ್ಮ ಜೊತೆ ಗಲ್ಫ್ ಗೆ ಕರಕೊಂಡು ಹೋಗಿ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ನಿಪಾ ವೈರಸ್ ಗೆ ಬಲಿಯಾಗುವ ಮುನ್ನ ಪತಿಗೆ ಕೇರಳ ನರ್ಸ್ ಲಿನಿ ಪತ್ರ ಬರೆದಿದ್ದಾರೆ.

ಈ ಪತ್ರ ಬಹಳ ಭಾವನಾತ್ಮಕವಾಗಿದ್ದು, ವೈದ್ಯ ಜಗತ್ತು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಆಕೆಯ ಸಾವಿಗೆ ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕೆಯ ಸಾವಿಗೆ ಸಂತಾಪ ಸೂಚಿಸಿದ್ದು, ಲಿನಿಯ ಸೇವೆಯನ್ನು ವೈದ್ಯ ಜಗತ್ತು ಸ್ಮರಿಸಲಿದೆ ಎಂದು ಹೇಳಿದ್ದಾರೆ.

31 ವರ್ಷದ ಲಿನಿ ಅವರು ಬಾವಲಿ ನಿಪಾ ವೈರಸ್ ಸೋಂಕು ತಗಲಿದ್ದ ರೋಗಿಗಳಿಗೆ ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಅವರಿಗೆ ವೈರಸ್ ಹರಡಿ ಸ್ವತಃ ಸಾವನ್ನಪ್ಪಿದ್ದರು.

ಲಿನಿ ಅವರು ಪತಿ, 7 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply