ಲೈಕುಗಳ ಸಿಗಲ್ಲವೆಂಬ ಕೊರಗಿಗೆ ಬಿದ್ದು, ಕಮೆಂಟುಗಳು ಸಿಗಲಿಲ್ಲವೆಂಬ ನಿರಾಸೆಗೆ ಬಿದ್ದು, ಸುಖಾಸುಮ್ಮನೇ ವಿವಾದಿತ ವಿಷಯಗಳನ್ನು ಬಂಡವಾಳ ಮಾಡಿಕೊಳ್ಳುವವರಿಗೂ, ಆಗಾಗ ಸಿಲ್ಲಿ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ…

ನಿಜವಾಗಿಯೂ ಲೈಕು ಮತ್ತು ಕಮೆಂಟುಗಳು ಸಿಗದೇ ಇದ್ದರೆ ಅದು ಖುಷಿ ಪಡಬೇಕಾದ ವಿಚಾರವೇ ಸರಿ.

ಕಾರಣಗಳು:

1-ಯಾರಿಗೂ ಋಣಿಯಾಗಿರಬೇಕಾದ ಅಗತ್ಯವಿಲ್ಲ. ಸಮಯವಿದ್ದಾಗ ಲೈಕು ಕಮೆಂಟ್ ಕೊಡಬಹುದು. ನಾನು ಕೊಟ್ಟಿದ್ದೇನೆ. ತಿರುಗಿ ನನಗೆ ಕೊಡಲಿಲ್ಲ ಎಂದು ಯಾರೂ ಹೇಳಲಾರರು.

2- ನೋಟಿಫಿಕೇಶನ್ ಗಳು ಕಡಿಮೆಯಾಗಿ, ಸಮಯ ಉಳಿತಾಯ ಆಗುತ್ತದೆ.

3- ಧಾರಾಳ ನಿದ್ರೆ, ಸಮಯಕ್ಕೆ ಸರಿಯಾಗಿ ಊಟ ಇತ್ಯಾದಿತ್ಯಾದಿ ದೈನಂದಿನ ಕೆಲಸಗಳು ಸರಾಗವಾಗಿ ನೆರವೇರುವುದು.

4- ಕಮೆಂಟುಗಳಿಂದಲೋ, ಪ್ರತ್ಯುತ್ತರವಾಗಿ ಬಂದ ಇನ್ನೊಬ್ಬರ ಪೋಸ್ಟ್‌ಗಳ ಕಾರಣದಿಂದಲೋ ವ್ಯಥಾ ಮಾನಸಿಕ ಉದ್ವೇಗಕ್ಕೊಳಗಾಗುವುದು ತಪ್ಪುವುದು.

5-ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.

6-ಎಲ್ಲಕ್ಕಿಂತ ಹೆಚ್ಚಾಗಿ ಇದ್ದುದರಲ್ಲಿ ತೃಪ್ತಿ ಪಡುವ ಗುಣ ಬೆಳೆಯುವುದು.

7-ತಾನು ಪೋಸ್ಟ್‌ ಹಾಕಿದ ಸಮಯದಲ್ಲಿ ತಾನು ಯಾವುದೋ ಮೂಡ್‌ನಲ್ಲಿರಬಹುದು, ಓದುಗರು ಯಾವುದ್ಯಾವುದೋ ಮೂಡ್‌ನಲ್ಲಿರುತ್ತಾರೆ. ಇಲ್ಲಿ ತಕ್ಷಣದ ಪ್ರತಿಕ್ರಿಯಿಸಲು ಅವಕಾಶವಂತೂ ಇದ್ದೇ ಇದೆ. ಆಗ ಉಂಟಾಗುವ ಅಪ್ರಬುದ್ಧ ತರ್ಕಗಳಿಂದ ಲಾಭವಿಲ್ಲ, ಅದರಿಂದ ನಷ್ಟ ಅನುಭವಿಸುವವರು ಯಾರೂ ಆಗಿರಬಹುದು.
ಇನ್ನೂ ಇದೆ, ಮತ್ತಷ್ಟೂ ಇರಬಹುದು…….

8 – ಫೇಸ್ಬುಕ್‌ಗೆ ಅಡಿಕ್ಟ್ ಆಗುವುದು ತಪ್ಪುವುದು ಇತ್ಯಾದಿತ್ಯಾದಿ

ಫೇಸ್ಬುಕ್ಕನ್ನು ಆಳಲಾಗಲಿಲ್ಲವೆಂದು ಅಳುವವರಿಗೆ ತಿಳಿಸಿ, ನಿಜವಾಗಿ ಅದು ಆಳುವುದಲ್ಲ; ಆ(ಹಾ)ಳಾಗುವುದು ಅಂತ!!

Leave a Reply