ಹುಚ್ಚು ಪ್ರೀತಿ ಪ್ರೇಮ ಎಂದು ಇಂದಿನ ಯುವಕರು ಎಷ್ಟು ಕುರುಡರಾಗಿರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೈದರಾಬಾದ್‌ನಲ್ಲಿ ಕಲಿಯುತ್ತಿರುವ ಯಮನಿ ವಿದ್ಯಾರ್ಥಿ ಮೊಹಮ್ಮದ್ ಅಟ್ಟಾಸ್ ಅಲಿ ಎಂಬಾತ ಪ್ರೀತಿಸುವ ಹುಡುಗಿ ಕ್ಯಾನ್ಸರ್‌ನಲ್ಲಿ ಸತ್ತಳು ಎಂಬ ಕಾರಣದಿಂದಾಗಿ ‘ನಾವು ಅತಿ ಶೀಘ್ರದಲ್ಲೆ ಸ್ವರ್ಗದಲ್ಲಿ ಭೇಟಿಯಾಗೋಣ’ ಎಂದು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. 24 ವರ್ಷ ವಯಸ್ಸಿನ ಮೊಹಮ್ಮದ್ ಅಟ್ಟಾಸ್ ಅಲಿ ಹೈದರಾಬಾದ್ ನಗರದ ಪ್ಯಾರಾಮೌಂಟ್ ಕಾಲೊನಿಯ ಟೋಲಿ ಚೌಕಿ ಎಂಬಲ್ಲಿ ಫ್ಲ್ಯಾಟ್ ಒಂದರಲ್ಲಿ ವಾಸವಿದ್ದು ಉನ್ನತ ವ್ಯಾಸಾಂಗ ಮಾಡುತ್ತಿದ್ದನೆನ್ನಲಾಗಿದೆ. ಈ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಆಕೆ ಯಮನ್ ದೇಶದಲ್ಲಿದ್ದು, ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಳು.

ಅಟ್ಟಾಸ್ ಅಲಿ ಪ್ರೀತಿಸುವ ಯುವತಿ ವಾರಗಳ ಹಿಂದೆ ರೋಗ ಕಾರಣದಿಂದಾಗಿ ಮೃತಪಟ್ಟಿದ್ದು, ತನ್ನ ಸ್ನೇಹಿತರ ಮುಖಾಂತ ವಿಷಯವರಿತ ಅಲಿ, ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ವಾರದಿಂದ ಯಾರಲ್ಲೂ ಬೆರೆಯುತ್ತಿರಲಿಲ್ಲ ಎನ್ನಲಾಗಿದೆ. ಮೊನ್ನೆ ಸ್ನೇಹಿತರು ಆತನನ್ನು ಭೇಟಿಯಾಗಲು ರೂಮಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

Leave a Reply