ರಾಯ್ಪುರ: ವಿಧವೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪ್ರಿಯಕರನೇ ಅತ್ಯಾಚಾರ ಮಾಡಿದ್ದಾನೆ. ಕಿರುಚಾಟ ಕೇಳಿ ಬಂದ ಮೂವರು ಅಲ್ಲಿಗೆ ಆಗಮಿಸಿ ಆತನನ್ನು ಓಡಿಸಿದ್ದಾರೆ. ಆದರೆ ನಂತರ ಆ ಮೂವರೇ ಆಕೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಈ ವಿಚಾರವನ್ನು ಬಹಿರಂಗಪಡಿಸಿದರೆ ನೆಟ್ಟಗಿರಲ್ಲ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಈ ಘಟನೆ ಛತ್ತೀಸ್‍ಗಢದ ರಾಯ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

ನಾಲ್ವರು ಆರೋಪಿಗಳಾದ ಸುರೇಶ್ ಸಾಹು (24), ಹರೀಶ್ ಚಂದ್ರಕರ್ (25), ತ್ರಿನಾಥ್ ಮಹಾನಂದ್ (24) ಮತ್ತು ವಿನಯ್ ಯಾದವ್ (24) ನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ(24) ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿ ಸುರೇಶ್ ಸಾಹು ಜೊತೆ ಸಂಬಂಧವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply