ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪಕ್ಕೊಳಗಾಗಿರುವ ಕೇಂದ್ರ ಸಚಿವ ಎಂ ಜೆ ಅಕ್ಬರಿಂದಾಗಿ ಕೇಂದ್ರ ಸರಕಾರಕ್ಕೆ ಇರಿಸುಮುರಿಸು ಸ್ಥಿತಿ ಎದುರಾಗಿದ್ದು, ಬಹುದೊಡ್ಡ ನಿರ್ಧಾರವನ್ನು ಮಾಡಿದೆ. ದೇಶಾದ್ಯಂತ ಮೀಟೂ ಅಭಿಯಾನದಲ್ಲಿ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆಯ ದೂರುಗಳಲ್ಲಿ ತನಿಖೆ ನಡೆಸಲು ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ರೂಪಿಸಲು ಸರಕಾರ ಹೊರಟಿದೆ. ಆದರೆ, ಇದಕ್ಕಿಂತ ಮೊದಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ¸ ಸಚಿವೆ ಮೇನಕಾ ಗಾಂಧಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದರು.

ಈ ಸಮಿತಿಯು ಲೈಂಗಿಕ ಶೋಷಣೆ ಪ್ರಕರಣದಲ್ಲಿ ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ನೀಡಲಿದೆ. ಈ ವರದಿಯ ಆಧಾರದಲ್ಲಿ ಸರಕಾರ ಇಂತಹ ಪ್ರಕರಣಗಳಲ್ಲಿ ಕ್ರಮ ಜರಗಿಸುವುದು ಮತ್ತು ಲೈಂಗಿಕ ಶೋಷಣೆ ತಡೆಯಲು ಅಗತ್ಯ ಕ್ರಮ ಜರಗಿಸಲಿದೆ. ಸಚಿವರ ಸಮಿತಿಯ ಅಧ್ಯಕ್ಷತೆಯನ್ನು ಹಿರಿಯ ಮಹಿಳಾ ಸಚಿವೆ ವಹಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮೀಟೂ ಅಭಿಯಾನದಲ್ಲಿ ಬಹಿರಂಗಗೊಳ್ಳುತ್ತಿರುವ ವಿಷಯದಲ್ಲಿ ಮೇನಕಾ ಗಾಂಧಿ ಹೆಚ್ಚು ಗಂಭೀರವಾಗಿದ್ದಾರೆ. ಅವರು ಲೈಂಗಿಕ ಶೋಷಣೆಯ ಪ್ರಕರಣಗಳ ತನಿಖೆಗೆ ನಿವೃತ್ತ ನ್ಯಾಯಾಧೀಶದರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಆದರೆ ಮೋದಿ ಸರಕಾರದ ಸಚಿವ ಸಂಪುಟವು ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆಯ ಮೇನಕಾ ಗಾಂಧಿ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಇದರ ಬದಲಾಗಿ ಸಚಿವ ಮಟ್ಟದ ಸಮೂಹ(ಸಮಿತಿ) ರಚಿಸಲು ಹೊರಟಿದೆ.

ಆದರೆ ಮೇನಕಾ ಗಾಂಧಿ ನ್ಯಾಯಾಧೀಶರ ನೇತೃತ್ವದ ಸಮಿತಿ ಕೆಲಸದ ಸ್ಥಳದಲ್ಲಾಗುವ ಲೈಂಗಿಕ ಕಿರುಕುಳ ದೂರುಗಳನ್ನು ನಿರ್ವಹಿಸಲು ಈಗಿರುವ ಕಾನೂನಿನ ಮಗ್ಗುಲುಗಳನ್ನು ಮತ್ತು ಸೂಕ್ತ ಕಾರ್ಯ ಯೋಜನೆಯ ಕುರಿತು ಅಧ್ಯಯನ ನಡೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲಹೆ ನೀಡಲಿದೆ ಎಂದು ತಿಳಿಸಿದ್ದರು. ಆದರೆ ಕೇಂದ್ರ ಸರಕಾರ ಅವರ ಪ್ರಸ್ತಾವವನ್ನು ಪುರಸ್ಕರಿಸಿಲ್ಲ. ಯಾವುದೇ ಕಾರಣಕ್ಕೂಮಹಿಳೆಯರಿಗೆ ಕಿರುಕುಳವಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಕಿರುಕುಳಕ್ಕೊಳಗಾದ ಮಹಿಳೆಯರು ಸ್ವಯಂ ಮುಂದೆ ಬಂದು ದೂರು ನೀಡಬಹುದು ಎಂದು ಮೇನಕಾ ಹೇಳಿದ್ದರು.

Leave a Reply