ಸೂರತ್: ಗುಜರತಿನ ಸೂರತ್‍ನಲ್ಲಿ ವಲಸೆ ಕಾರ್ಮಿಕರೊಬ್ಬರನ್ನು ಊರಿನವರು ಸೇರಿ ಹೊಡೆದು ಕೊಂದ ಘಟನೆ ನಡೆದಿದೆ.ಗುಜರಾತಿನಲ್ಲಿ ಹೊರ ರಾಜ್ಯದ ಕಾರ್ಮಿಕರ ವಿರುದ್ಧ ನಡೆಯುತ್ತಿರುವ ದಾಳಿಯ ಭಾಗವಾಗಿ ಘಟನೆ ನಡೆದಿದೆ. ಹದಿನೈದು ವರ್ಷಗಳ ಹಿಂದೆ ಸೂರತ್‍ಗೆ ಬಂದಿದ್ದ ಬಿಹಾರದ ಅಮರ್ಜಿತ್‍ ಸಿಂಗ್‍ರನ್ನು ನಿನ್ನೆ ಸಂಜೆ ಊರಿನ ಕೆಲವರು ಗುಂಪುಗೂಡಿ ಕೋಲಿನಲ್ಲಿ ಹೊಡೆದು ಕೊಂದಿದ್ದಾರೆ. ತಾನು ಕೆಲಸಕ್ಕಿದ್ದ ಮಿಲ್‍ನಿಂದ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಹದಿನಾಲ್ಕು ತಿಂಗಳ ಎಳೆಯ ಶಿಶು ಅತ್ಯಾಚಾರ ಪ್ರಕರಣದಲ್ಲಿ ಬಿಹಾರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಬಳಿಕ ಹಿಂದಿ ಮಾತಾಡುವವರ ವಿರುದ್ಧ ಗುಜರಾತ್‍ನ ಜನರು ದಂಗೆ ಎದ್ದಿದ್ದಾರೆ. ಈಗಾಗಲೆ ಬಿಹಾರ, ಉತ್ತರಪ್ರದೇಶ ಸಹಿತ ಉತ್ತರ ಭಾರತದ 50,000 ವಲಸೆ ಕಾರ್ಮಿಕರು ಜನರ ಹಲ್ಲೆ ಭೀತಿಯಿಂದ ಗುಜರಾತ್ ತೊರೆದಿದ್ದಾರೆ. ಇದರ ನಡುವೆ ಅಮಾಯಕ ಅಮರಜಿತ್ ಸಿಂಗ್‍ನ ಹತ್ಯೆ ನಡೆದಿದೆ.

ಸೂರತ್‍ನ ಪಂದೇಶ್ವರದಲ್ಲಿರುವ ಮಿಲ್ಲೊಂದರಲ್ಲಿ ಅಮರ್‍ಜಿತ್ ಕೆಲಸ ಮಾಡುತ್ತಿದ್ದರು. ಅವರು ಬಿಹಾರದಿಂದ ತನ್ನ ಹದಿನೇಳನೆ ವಯಸ್ಸಿನಲ್ಲಿ ಕೆಲಸ ಹುಡುಕಿ ಸೂರತ್‍ಗೆ ಬಂದಿದ್ದರು. ನಂತರಪತ್ನಿಮಕ್ಕಳೊಂದಿಗೆ ಸೂರತ್‍ನಲ್ಲಿ ಕಾಯಮ್ಮಾಗಿ ನೆಲೆಸಿದ್ದಾರೆ.

ಗುಜರಾತ್‍ನಲ್ಲಿ ಹಿಂದಿ ಭಾಷೆಯಾಡುವವರ ವಿರುದ್ಧ ಹರಡಿರುವ ದಾಳಿಯನ್ನು ತಡೆಯಬೇಕು ಎಂದು ಅಮರ್‍ಜಿತ್ ತಂದೆ ರಜ್‍ದೇವ್ ಸಿಂಗ್ ಕೇಂದ್ರ, ಗುಜರಾತ್,ಬಿಹಾರ ಸರಕಾರವನ್ನುಆಗ್ರಹಿಸಿದ್ದಾರೆ. ಇನ್ನು ಯಾವನೇ ಕುಟುಂಬ ಪುತ್ರನನ್ನು ಕಳಕೊಳ್ಳುವ ಸ್ಥಿತಿ ಆಗಬಾರದೆಂದು ರಜ್‍ದೇವ್ ಹೇಳಿದರು.

Leave a Reply