ವಾರಣಾಸಿ:ಗುಜರಾತಿನಲ್ಲಿ ಉತ್ತರ ಪ್ರದೇಶ- ಬಿಹಾರದ ಜನರನ್ನು ಓಡಿಸುತ್ತಿರುವುದರ ಪ್ರಭಾವ ವಾರಣಸಿಯಲ್ಲಿಯೂ ಕಂಡು ಬಂದಿದೆ.ಅಲ್ಲಿನ ಜನರು ಪ್ರಧಾನಿಮೋದಿಯವರನ್ನೇ ವಾರಣಾಸಿ ಛೋಡೊ ಎನ್ನುತ್ತಿದ್ದಾರೆ. ಬನಾರಸ್ ಪ್ರಧಾನಿ ನರೇಂದ್ರ ಮೋದಿಯವರ ಪಾರ್ಲಿಮೆಂಟು ಕ್ಷೇತ್ರವಾಗಿದೆ.ಮಾತ್ರವಲ್ಲ ಬನಾರಸ್‍ನಲ್ಲಿ ಇರುವ ಎಲ್ಲ ಗುಜರಾತಿಗಳು ಮತ್ತು ಮರಾಠಿಗಳು ಬನಾರಸ್ ತೊರೆದು ಹೋಗಬೇಕೆಂದು ಪೊಸ್ಟರ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಪೋಸ್ಟರ್‍ನಲ್ಲಿ ಬನಾರಸ್ ಸಂಸದ ಮೋದಿ ಗುಜರಾತಿ ಎಂದು ಸಂಬೋಧಿಸಲಾಗಿದೆ.

ಬನಾರಸ್‍ನ ರಸ್ತೆ ಬದಿಯಲ್ಲಿ ಮಂಗಳವಾರ ಈ ಎಚ್ಚರಿಕೆಯ ಪೋಸ್ಟರ್ ಕಂಡು ಬಂದಿದೆ. ಯುಪಿ-ಬಿಹಾರ್ ಏಕತಾಮಂಚ್ ಪೋಸ್ಟರ್ ಅಂಟಿಸಿದೆ. ಬೆಳಗ್ಗೆ ಯುಪಿ-ಬಿಹಾರ್ ಏಕತಾ ಮಂಚ್‍ನ ಜನರುಪೋಸ್ಟರ್ ಅಂಟಿಸಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ನಂತರ ಹಲವು ಗಲ್ಲಿಗಳಲ್ಲಿ ಪೋಸ್ಟರ್ ಅಂಟಿಸಿದ್ದಾರೆ.

ಪ್ರತಿಭಟನಕಾರರು ಗುಜರಾತಿ ವ್ಯಕ್ತಿಯನ್ನು ಆಲಿಂಗಿಸಿ ಪ್ರಧಾನಿ ಮಾಡಿದೆವು, ಅದರ ಶಿಕ್ಷೆ ನಮಗೆ ಈಗ ಸಿಗುತ್ತಿದೆ ಎಂದು ಹೇಳುತ್ತಿದ್ದರು. ಗುಜರಾತಿನಿಂದ ಉತ್ತರ ಪ್ರದೇಶ ಬಿಹಾರದ ಜನರನ್ನು ಹೊರಗೆ ದಬ್ಬಲಾಗುತ್ತಿದೆ. ಇದನ್ನು ಖಂಡಿತಾ ಸಹಿಸಲು ಸಾಧ್ಯವಿಲ್ಲ. ಮೂರು ದಿವಸಗಳೊಳಗೆ ಗುಜರಾತಿನಲ್ಲಿ ನಮ್ಮ ಜನರ ಮೇಲೆ ಆಗುತ್ತಿರುವ ದಬ್ಬಾಳಿಕೆ ಹಿಂಸೆ ನಿಲ್ಲದಿದ್ದರಿಂದ ಬನಾರಸ್‍ನಿಂದ ಗುಜರಾತಿಗಳನ್ನು ಓಡಿಸಲು ಶುರು ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Leave a Reply