ಮುಂಬೈ: ಫ್ಯಾಸನ್ ಡಿಸೈನರ್ ಸುನೀತಾ ಸಿಂಗ್ ಕೊಲೆ ಪ್ರಕರಣದಲ್ಲಿ ಅವರ ಪುತ್ರ ಲಕ್ಷ್ಯ ಸಿಂಗ್(23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಯಸಿಂಗ್ ಮುಂಬೈಯ ಕ್ರಾಸ್ ಗೇಟ್ ಬಿಲ್ಡಿಂಗ್ ಅಪಾರ್ಟ್‍ಮೆಂಟಿನಲ್ಲಿ ಕಳೆದ ಬುಧವಾರ ತನ್ನ ತಾಯಿಯನ್ನುಕೊಂದು ಹಾಕಿದ್ದನು ಎಂದುಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ತಾಯಿ ಸುನೀತಾ ಸಿಂಗ್ ಮತ್ತು ಲಕ್ಷ್ಯಸಿಂಗ್ ಮಾದಕ ವ್ಯಸನಿಯಾಗಿದ್ದು ಕ್ರಾಸ್‍ಗೇಟ್ ಬಿಲ್ಡಿಂಗ್ ಅಪಾರ್ಟ್‍ಮೆಂಟಿನಲ್ಲಿ ಇವರ ಜೊತ್ತೆ ಲಕ್ಷ್ಯನ ಭಾವಿ ವಧುಕೂಡ ಇವರ ಜತೆ ವಾಸಿಸುತ್ತಿದ್ದಳು. ಬುಧವಾರ ರಾತ್ರೆ ಲಕ್ಷ್ಯನ ಭಾವಿ ವಧುವಿನ ಕುರಿತು ಲಕ್ಷ್ಯ ಮತ್ತು ತಾಯಿ ಸುನೀತಾರ ನಡುವೆ ಜಗಳವಾಗಿದೆ. ಇದೇ ವೇಳೆ ಆತ ತಾಯಿಯನ್ನು ಸ್ನಾನಗೃಹಕ್ಕೆ ದೂಡಿ ಹಾಕಿ ಬಾಗಿಲು ಹಾಕಿದ್ದ. ಮರುದಿವಸ ಬಾಗಿಲು ತೆರೆದಾಗ ಅಮ್ಮ ಸತ್ತಿರುವುದು ಆತನಿಗೆ ಗೊತ್ತಾಗಿತ್ತು. ನಂತರ ದಿಕ್ಕೆಟ್ಟ ಲಕ್ಷ್ಯ ಮತ್ತು ಆತನ ಭಾವಿ ವಧು ಸ್ನಾನಗೃಹದಲ್ಲಿ ಬಿದ್ದು ತಾಯಿ ಮೃತಪಟ್ಟಿದ್ದಾರೆ ಎಂದು ಇತರರಿಗೆ ತಿಳಿಸಿದ್ದನು.

ಸುನೀತಾ ಸಿಂಗ್‍ರ ಸಾವು ನಿಗೂಢವಾಗಿದೆ ಎಂದು ಶಂಕಿಸಿದ ಪೊಲೀಸರು ರವಿವಾರ ಲಕ್ಷ್ಯ ಸಿಂಗ್‍ನನ್ನು ವಿವರವಾಗಿ ಪ್ರಶ್ನಿಸಿದ್ದರು. ನಂತರ ಘಟನೆ ನಡೆದಾಗ ಅಪಾರ್ಟ್‍ಮೆಂಟಿನಲ್ಲಿದ್ದ ಇಬ್ಬರು ಸಿಬ್ಬಂದಿಗಳು ಮತ್ತು ಲಕ್ಷ್ಯನ ಭಾವಿ ವಧುವನ್ನು ಪೊಲೀಸರು ಪ್ರಶ್ನಿಸಿದ್ದರು. ನಂತರ ಲಕ್ಷ್ಯಸಿಂಗ್ ತಾಯಿ ಸುನೀತಾ ಸಿಂಗ್‍ರ ಹತ್ಯೆ ಮಾಡಿದ್ದಾನೆ ಎಂಬ ವಿವರ ಬಹಿರಂಗವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply