ನವದೆಹಲಿ: ಎಟಿಎಂನಿಂದ ಹಣ ತೆಗೆಯಲು ಇನ್ನು ಕಾಲಮಿತಿ ಬರಲಿದೆ. ಒಮ್ಮೆ ಹಣ ತೆಗೆದರೆ ಮತ್ತೆ 6 ರಿಂದ 12 ಗಂಟೆಗಳ ಕಾಲ ಕಾಯಬೇಕು. ಎಟಿಎಂಗಳಲ್ಲಿ ಭಾರಿ ಅಕ್ರಮ ಹಾಗೂ ಕಳ್ಳತನಗಳು ಸಂಭವಿಸುವುದನ್ನು ತಡೆಗಟ್ಟಲು ಹೊಸ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ದೆಹಲಿ ರಾಜ್ಯಮಟ್ಟದ ಬ್ಯಾಂಕ್‌ಗಳ ಸಮಿತಿ ಈ ಕುರಿತು ಕೆಲವು ಶಿಫಾರಸು ಮಾಡಿದ್ದು, ಎಟಿಎಂನಲ್ಲಿ ಬಹುತೇಕ ಅಕ್ರಮಗಳು ನಡೆಯುವುದು ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ. ಹೀಗಾಗಿ ಹಣ ಪಡೆಯುವುದಕ್ಕೆ ಕಾಲಮಿತಿ ನಿಗದಿ ಸೂಕ್ತ ಎಂದು ಸಲಹೆ ನೀಡಲಾಗಿದೆ.

ಈ ಕುರಿತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮುಕೇಶ್ ಕುಮಾರ್ ಜೈನ್ ಮಾಹಿತಿ ನೀಡಿದ್ದು, 18 ಬ್ಯಾಂಕ್‌ಗಳ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. ಪ್ರತಿ ಬಾರಿ ಎಟಿಎಂನಿಂದ ಹಣ ಪಡೆಯುವಾಗಲೂ ಒನ್‌ಟೈಮ್ ಪಾಸ್‌ವರ್ಡ್ (ಒಟಿಪಿ) ನಮೂದಿಸಲು ಗ್ರಾಹಕರಿಗೆ ಸೂಚಿಸುವುದು ಸೂಕ್ತ ಎನಿಸುತ್ತದೆ ಎಂದು ಬ್ಯಾಂಕ್ ಪ್ರತಿನಿಧಿಗಳ ಸಭೆಯಲ್ಲಿ ಮತ್ತೊಂದು ಸಲಹೆ ನೀಡಲಾಗಿದೆ.

Leave a Reply