ಒಂದು ಜಾತಿಯ ಪ್ರಾಣಿ ಅಥವಾ ಪಕ್ಷಿಗಳು ಮತ್ತೊಂದು ಜಾತಿಯ ಪ್ರಾಣಿ-ಪಕ್ಷಿಗಳಿಗೆ ಸಹಾನುಭೂತಿ ತೋರುವುದಿಲ್ಲ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಇಲ್ಲೊಂದು ಫೋಟೋ ಅದಕ್ಕೆ ತದ್ವಿರುದ್ಧವಾಗಿದೆ. ಕೆಲವು ಪಕ್ಷಿಗಳು ಜೊತೆ ಅಳಿಲೊಂದು ಬಿಸ್ಕತ್ ಹಂಚಿಕೊಳ್ಳುವ ಹಳೆಯ ಚಿತ್ರ ಮತ್ತೆ ಟ್ವಿಟರ್ನಲ್ಲಿ ವೈರಲ್ ಆಗಿದೆ. ಇದನ್ನು ಐಎಫ್‌ಎಸ್ ಪರ್ವೀನ್ ಕಸ್ವಾನ್ ಎಂಬುವರು ಶೇರ್ ಮಾಡಿದ್ದು ಯಾವುದೇ ತಾರತಮ್ಯವಿಲ್ಲದೆ ಜಗತ್ತಿನಲ್ಲಿ ಎಲ್ಲರೂ ಹೀಗೆ ಬಾಳಬೇಕು ಎಂದು ಅವರು ಆಶಿಸಿದ್ದಾರೆ.

ಚಿತ್ರದಲ್ಲಿ ಕಾಣುವಂತೆ ಅಳಿಲು ಪಕ್ಷಿಗಳ ಜೊತೆಗೆ ಬಿಸ್ಕತ್ ಹಂಚಿಕೊಳ್ಳುವುದನ್ನು ಕಾಣಬಹುದು ಅಥವಾ ಅಳಿದು ಆ ಮರಿ ಹಕ್ಕಿಗಳಿಂದ ಬಿಸ್ಕತ್ತು ಕಸಿದುಕೊಳ್ಳುತ್ತಿದೆ ಎಂದೂ ಕೂಡ ಕೆಲವರು ವಾದಿಸಬಹುದು. ಆದಾಗ್ಯೂ ಹೆಚ್ಚಿನವರು ಪ್ರಾಣಿಗಳಲ್ಲಿ ಇಂತಹ ಸಹಾನುಭೂತಿ ಇದೆಯೆಂದು ನಂಬುತ್ತಾರೆ. ಇಂತಹ ಹಲವಾರು ಘಟನೆಗಳು ನಮ್ಮ ಮುಂದೆ ನಡೆಯುತ್ತಿರುತ್ತದೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಹಿಂದೆ ಆನೆಯೊಂದು ರಸ್ತೆ ಮಧ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಆಮೆಗಾಗಿ ಮಿಡಿದದ್ದನ್ನು ಇಲ್ಲಿ ಸ್ಮರಿಸಬಹುದು.

ರಸ್ತೆ ಮಧ್ಯೆ ವಿಶ್ರಾಂತಿ ಪಡೆಯುತ್ತಿದ್ದ ಆಮೆಯ ನೋಡಿದ ಆನೆಯು ಅಪಾಯವನ್ನು ಮನಗಂಡು ಸೊಂಡಿಲಿನ ಮೂಲಕ ರಸ್ತೆ ಬದಿಗೆ ಆಮೆಯನ್ನು ತಳ್ಳಲು ಪ್ರಯತ್ನಿಸುವ ವಿಡಿಯೋ ಅದು. ಆಮೇಲೆ ಆಮೆ ರಸ್ತೆ ಬದಿಗೆ ಹೋದ ಬಳಿಕ ಆನೆ ಮುಂದೆ ಸಾಗುತ್ತದೆ.

 

Leave a Reply