ತಿರುವನಂತಪುರಂ: ಮಗಳ ಮದುವೆಯ ಸಮಾರಂಭದಲ್ಲಿ ವೇದಿಕೆಯ ಮೇಲೆ ಮ್ಯೂಸಿಕ್ ಇಟ್ಟು ಹಾಡುತ್ತಿದ್ದ ಅಪ್ಪ ಕುಸಿದು ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಕೇರಳದಲ್ಲಿ ನಡೆದಿದೆ. ಕೊಲ್ಲಂ ಜಿಲ್ಲೆಯ ನೀಂದಕಾರದಲ್ಲಿ ಈ ಘಟನೆ ನಡೆದಿದ್ದು, ತಿರುವನಂತಪುರದ ಸಬ್ ಇನ್ಸ್ ಪೆಕ್ಟರ್ ವಿಷ್ಣು ಪ್ರಸಾದ್ (55) ಮೃತಪಟ್ಟ ದುರ್ದೈವಿ. ತನ್ನ ಕಿರಿಯ ಮಗಳ ಮದುವೆ ಸಮಾರಂಭದಲ್ಲಿ ಹಾಡುತ್ತಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಕೊನೆಯುಸಿರೆಳೆದರು.
ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದು ಎನ್ನಲಾಗಿದ್ದು, ಮಗಳಿಗೆ ವಿಷಯ ತಿಳಿಸದೇ ಮದುವೆ ಕಾರ್ಯ ಮುಗಿಸಿದ್ದಾರೆ. ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಗಳಿಗೆ ಮನೆಯವರು ಹೇಳಿದ್ದಾರೆ. ಸಬ್ ಇನ್ಸ್ ಪೆಕ್ಟರ್ ವಿಷ್ಣು ಪ್ರಸಾದ್ ಅಂತ್ಯಸಂಸ್ಕಾರದ ಸಮಯದಲ್ಲಿ ಮಗಳಿಗೆ ವಿಷಯ ತಿಳಿಸಲಾಗಿದ್ದು, ಮಗಳ ಮದುವೆ ದಿನವೇ ಇಹಲೋಕ ತ್ಯಜಿಸಿದ ಪೊಲೀಸ್ ಇನ್ಸ್ಪೆಕ್ಟರ್ ಗಾಗಿ ಎಲ್ಲರೂ ಕಂಬನಿ ಮಿಡಿದಿದ್ದಾರೆ.

Leave a Reply