ನವದೆಹಲಿ: ಟಿಕ್ ಟಾಕ್ ನಲ್ಲಿ ಜನಪ್ರಿಯ ಮೋಹಿತ್ ಮೋರ್ ರನ್ನು ಅಜ್ಞಾತ ಬೈಕ್ ಸವಾರರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಅಪ್ರಾಪ್ತರಾದ ವಿಕಾಸ್ ಹಾಗೂ ರೋಹಿತ್, ವ್ಯಕ್ತಿಯೊಬ್ಬರ ಜೊತೆಗಿದ್ದ ಹಗೆ ತೀರಿಸಲು ದ್ವೇಷವನ್ನು ತೀರಿಸಿಕೊಳ್ಳಲು ಒಂದು ತಿಂಗಳ ಹಿಂದೆ ಸಂದೀಪ್‍ಗೆ ಗ್ಯಾಂಗ್‍ನಲ್ಲಿ ಸೇರಿಸಿಕೊಳ್ಳಲು ಹೇಳಿದ್ದಾನೆ. ಆಗ ಸಂದೀಪ್ ನೀನು ಟಿಕ್‍ಟಾಕ್ ಸ್ಟಾರ್ ಮೋಹಿತ್ ಮೋರ್ ನನ್ನು ಕೊಲೆ ಮಾಡಿದರೆ ಮಾತ್ರ ಸೇರಿಸಿಕೊಳ್ಳುವುದಾಗಿ ಹೇಳಿದ್ದನು. ಹೀಗೆ ಗ್ಯಾಂಗ್ ನಲ್ಲಿ ಸೇರಿ ಅಪ್ರಾಪ್ತ ಬಾಲಕರು ಮೋಹಿತ್ ಮೋರ್ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸಂದೀಪ್ ಸಹಚರ ಮಾಂಗು ಹಿಂದೆ ಕೊಲೆಯಾಗಿದ್ದು ಆತ ಮೋಹಿತ್ ಮೂಲಕ ಮೋಹನ್ ಗಾರ್ಡನ್‍ನಲ್ಲಿ ಆಸ್ತಿಗಾಗಿ 30 ಲಕ್ಷ ರೂ. ಹೂಡಿದ್ದನು. ಮಾಂಗು ಕೊಲೆ ಆದ ನಂತರ ಸಂದೀಪ್ ಹಣ ಕೇಳಿದ್ದಾಗ ಮೋಹಿತ್ ಕೊಡಲು ನಿರಾಕರಿಸಿದ್ದನು. ಬಳಿಕ ಸಂದೀಪ್ ಬಾಲಕನ ಮೂಲಕ ಮೋಹಿತ್ ಬಳಿ ಹಣ ಕೇಳಿದ್ದನು. ಆಗ ಮೋಹಿತ್ ಬಾಲಕನ ಮೇಲೆ ಹಲ್ಲೆ ಮಾಡಿದ್ದ. ಕೊನೆಗೆ ಈ ತಕರಾರು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.

Leave a Reply