ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಸಂಸ್ಕೃತದಲ್ಲಿ ಇದರ ಅರ್ಥ ಶೂರರಲ್ಲಿ ಶೂರ ಎಂದು.

ಪರಮವೀರ ಚಕ್ರವನ್ನು ಜನವರಿ 26 1950 (ಗಣರಾಜ್ಯ ದಿನ)ದಂದು ಆಗಸ್ಟ್ 15 1947 (ಸ್ವಾತಂತ್ರ್ಯ ದಿನ)ದಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಈ ಪುರಸ್ಕಾರವು ಭಾರತ ರತ್ನದ ನಂತರ ದೇಶದ ಎರಡನೇ ಅತಿ ದೊಡ್ಡ ಪುರಸ್ಕಾರ.

ಈ ಪುರಸ್ಕಾರವನ್ನು ಹೊಂದಿದವರು ತಮ್ಮ ಹೆಸರಿನ ಜೊತೆಗೆ ಇದರ ಹೆಸರನ್ನು ಉಪಯೊಗಿಸುವ ಅಧಿಕಾರ ಪಡೆದಿರುತ್ತಾರೆ. ಸ್ಸೆಕಂಡ್ ಲೆಫ್ಟಿನೆಂಟ್ ಅಥವಾ ಅದ್ಕ್ಕಿಂತ ಕಡಿಮೆ ಹುದ್ದೆಯಲ್ಲಿರುವ ಸೈನಿಕರಿಗೆ ಧನಯೋಗವೂ ಇದೆ. ಪುರಸ್ಕೃತರ ನಿಧನದ ನಂತರ ಅವರ ಪತ್ನಿಗೆ ಅವರ ಮರಣ ಅಥವಾ ಮರುವಿವಾಹದ ತನಕ ಮಾಸಾಶನ ಕೊಡುವ ಪದ್ಧತಿಯೂ ಇದೆ. ಆದರೆ ಈ ಮಾಸಾಶನ್ಅವು ಅತಿ ಕಡಿಮೆಯಾಗಿರುವುದು ವಿವಾದಾತ್ಮಕವಾಗಿದೆ. ಮಾರ್ಚ್ 1999ರಲ್ಲಿ ಇದು ತಿಂಗಳಿಗೆ ರೂ.1,500 ಆಗಿತ್ತು. ಆದರೆ ಬಹಳಷ್ಟು ರಾಜ್ಯಗಳು ಈ ಮಾಸಾಶನಕ್ಕಿಂತ ಹೆಚ್ಚು ದುಡ್ಡು ಈ ಮಹಿಳೆಯರಿಗೆ ಸಲ್ಲುವ ಹಾಗೆ ಮಾಡಿವೆ.

ವಿನ್ಯಾಸ

ಈ ಪದಕವನ್ನು ಶ್ರೀಮತಿ ಸಾವಿತ್ರಿ ಖನೋಲನ್ಕರ್ (ಮೂಲನಾಮ ಈವಾ ಯುವೊನ್ ಲಿಂಡಾ ಮಡೇ-ಡಿ-ಮರೋಸ್, ಇವರು ಭಾರತ ಭೂಸೇನೆಯ ಅಧಿಕಾರಿಯೊಬ್ಬರ ಪತ್ನಿ)ಅವರು ವಿನ್ಯಾಸಗೊಳಿಸಿದ್ದಾರೆ. ಕಾಕತಾಳೀಯವಾಗಿ ಪ್ರಥಮ ಪರಮ ವೀರ ಚಕ್ರವು ಇವರ ಅಳಿಯ ಮೇಜರ್ ಸೋಮನಾಥ ಶರ್ಮಾ ಅವರಿಗೆ ಸಂದಯವಾಯಿತು. ಪಾಕಿಸ್ತಾನದ ಬಂಡುಕೋರರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗಟ್ಟುವಾಗ ಇವರು ಮಡಿದರು.

ಈ ಪದಕವು ಕಂಚಿನದಾಗಿದ್ದು ದುಂಡಗಿದೆ. ಇದರ ವ್ಯಾಸ ಸುಮಾರು ಮೂರೂವರೆ ಸೆಂ.ಮಿ. ಮಧ್ಯದಲ್ಲಿ ಭಾರತ ದೇಶದ ಲಾಂಛನವಿದೆ. ಇದರ ಸುತ್ತಲೂ ಇಂದ್ರನ ವಜ್ರದ ನಾಲ್ಕು ಚಿತ್ರಗಳಿವೆ. ಹಿಂಬದಿಯಲ್ಲಿ ಎರಡು ಆಖ್ಯಾನಗಳು, ಅವುಗಳ ಮಧ್ಯೆ ಕಮಲದ ಹೂವು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಮ ವೀರ ಚಕ್ರ ಎಂದು ಬರೆದಿದೆ.

ಪದಕವನ್ನು ಹೊಂದಿದ ರಿಬ್ಬನ್ 32 ಮಿ.ಮಿ. ಉದ್ದವಿದ್ದು ನೇರಳೆ ಬಣ್ಣದ್ದಾಗಿದೆ. ಇಂದ್ರನಿಗೆ ತನ್ನ ತೊಡೆಯ ಮೂಳೆಯನ್ನು ವಜ್ರಾಯುಧವನ್ನಾಗಿ ಮಾಡಿಕೊಟ್ಟ ಋಷಿ ದಧೀಚಿಯ ಸಂಕೇತವಾಗಿ ಈ ಪುರಸ್ಕಾರವನ್ನು ವಿನ್ಯಾಸಗೊಳಿಸಲಾಗಿದೆ. ಶಿವಾಜಿಯ ಖಡ್ಗವಾದ ಭವಾನಿಯ ಚಿತ್ರವೂ ಇದೆ.

ಪುರಸ್ಕೃತ ಸೈನಿಕರು

ಮೇಜರ್ ಸೋಮನಾಥ ಶರ್ಮಾ, 1947
ಲಾನ್ಸ್ ನಾಯಕ್ ಕರಮ್ ಸಿಂಗ್, 1948
ಸೆಕಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ, 1948
ನಾಯಕ್ ಜಡೂನಾಥ ಸಿಂಗ್, 1948
ಕಂಪನಿ ಹವಿಲ್ದಾರ್ ಮೇಜರ್ ಪೀರು ಸಿಂಗ್, 1948
ಕ್ಯಾಪ್ಟನ್ ಗುರುಬಚನ್ ಸಿಂಗ್ ಸಲಾರಿಯಾ, 1961
ಮೇಜರ್ ಧಾನ್ ಸಿಂಗ್ ಥಾಪಾ, 1962
ಸುಬೇದಾರ್ ಜೋಗಿಂದರ್ ಸಿಂಗ್, 1962
ಮೇಜರ್ ಶೈತಾನ್ ಸಿಂಗ್, 1962
ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್, 1965
ಲೆಫ್ಟಿನೆಂಟ್ ಕರ್ನಲ್ ಆರ್ದೇಶಿರ್ ತಾರಾಪೋರ್, 1965
ಲಾನ್ಸ್ ನಾಯಕ್ ಆಲ್ಬರ್ಟ್ ಎಕ್ಕ, 1971
ಫ್ಲಯಿಂಗ್ ಆಫಿಸರ್ ನಿರ್ಮಲಜಿತ್ ಸಿಂಗ್ ಸೆಖೋನ್, 1971
ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ 1971
ಮೇಜರ್ ಹೋಶಿಯಾರ್ ಸಿಂಗ್, 1971
ನೈಬ್ ಸುಬೇದಾರ್ ಬಾಣಾ ಸಿಂಗ್, 1987
ಮೇಜರ್ ರಾಮಸ್ವಾಮಿ ಪರಮೇಶವರನ್, 1987
ಕ್ಯಾಪ್ಟನ್ ವಿಕ್ರಮ್ ಬಾತ್ರಾ, 1999
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, 1999
ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, 1999
ರೈಫಲ್ ಮ್ಯಾನ್ ಸಂಜಯ ಕುಮಾರ್, 1999

courtesy : Wikipedia

LEAVE A REPLY

Please enter your comment!
Please enter your name here