ನವದೆಹಲಿ: ಭಾಗಲ್ಪುರ ಗಲಭೆಯಲ್ಲಿ ಪೋಲಿಸಧಿಕಾರಿ ಕೆ ಎಸ್ ದ್ವಿವೇದಿ ಯವರ ಹಸ್ತಕ್ಷೇಪವಿದೆಯೆಂದು ವಿವಿಧ ತನಿಖಾ ಆಯೋಗಗಳ ವರದಿಯಲ್ಲಿ ಸೂಚಿಸಿರುವಾಗ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗ ಬಿಹಾರದ ಡಿ.ಜಿ.ಪಿ. ಯಾಗಿ ನೇಮಕ ಮಾಡಿದ್ದಾರೆ.

ಇದು ಮಿತ್ರಪಕ್ಷ ಬಿ.ಜೆ.ಪಿ.ಯನ್ನು ಮತ್ತು ಹಿಂದುತ್ವ ಶಕ್ತಿಗಳನ್ನು ತೃಪ್ತಿಪಡಿಸುವ ಕಾರ್ಯವೆಂದು ಪ್ರತಿಪಕ್ಷಗಳು ಆರೋಪಪಸುತ್ತಿದೆ.

ವಾಸ್ತವದಲ್ಲಿ ಅಲ್ಲಿ ಹಿರಿಯ ಐ.ಪಿ.ಎಸ್. ಅಧಿಕಾರಿ ರವೀಂದ್ರ ಕುಮಾರ್ ಡಿ.ಜಿ.ಪಿ. ಯಾಗಬೇಕಿತ್ತು. ಆದರೆ ಎಲ್ಲರೂ ಬೆರಗಾಗುವಂತೆ 1984ರ ಬ್ಯಾಚ್‍ನ ಐ.ಪಿ.ಎಸ್ ಅಧಿಕಾರಿ ಎಸ್ ಕೆ ಎಸ್ ದ್ವಿವೇದಿಯನ್ನು ನೇಮಿಸಲಾಗಿದೆ.

ಪ್ರಮೋದ್ ಕುಮಾರ್‍ರವರ ನಿವೃತ್ತರಾದ ಕಾರಣ ಆ ಹುದ್ದೆಗೆ ನೇಮಿಸಲಾಗಿತ್ತು. 1984 ರಲ್ಲಿ ನಡೆದ ಬಾಗಲ್ಪುರ ಗಲಭೆಯಲ್ಲಿ ಸಾವಿರಾರು ಮಂದಿ ಹತರಾಗಿದ್ದರು. ಇವರಲ್ಲಿ ಶೇಕಡಾ ತೊಂಬತ್ತರಷ್ಟು ಮಂದಿ ಮುಸ್ಲಿಮರಾಗಿದ್ದರು. ಆಗ ಕೆ ಎಸ್ ದ್ವಿವೇದಿಯವರು ಹಿರಿಯ ಪೋಲೀಸಧಿಕಾರಿಯಾಗಿದ್ದರು. ಗಲಭೆಗ್ರಸ್ತ ಸ್ಥಳ ಸಂದರ್ಶಿಸಿದ್ದ ಪ್ರದಾನಿ ರಾಜೀವ್ ಗಾಂಧಿಯವರು ದ್ವಿವೇದಿಯನ್ನು ತಕ್ಷಣ ವರ್ಗಾಯಿಸಲು ಆದೇಶಿಸಿದ್ದನ್ನು ಸ್ಮರಿಸಬಹುದು.

Leave a Reply