ಹೊಸದಿಲ್ಲಿ: ಬಾಲಿವುಡ್ ತಾರೆಯರುವ ಮತ್ತು ಚಲನಚಿತ್ರ ಮಂದಿಯ ವಿರುದ್ಧ ಲೈಂಗಿಕ ದೂರುಗಳು ಬಹಿರಂಗಗೊಳ್ಳುತ್ತಿರುವ ವೇಳೆಯೇ ನಟಿ ಪೂಜಾ ಭಟ್ ಭಿನ್ನ ರಾಗ ಹಾಡಿದ್ದಾರೆ. ಮಹಿಳೆಯರಲ್ಲಿ ಕೂಡ ಪ್ರತಿಷ್ಠಿತ ಸ್ಥಾನಗಳಿಸಲಿಕ್ಕಾಗಿ ಲೈಂಗಿಕತೆಯನ್ನು ಉಪಯೋಗಿಸುವವರಿದ್ದಾರೆ. ಎಲ್ಲ ಪುರುಷರು ಕೆಟ್ಟವರಲ್ಲ. ಪ್ರತಿಷ್ಠೆ ಅಧಿಕಾರಗಳಿಗಾಗಿ ಮಹಿಳೆಯರಲ್ಲಿ ಕೆಲವರು ಲೈಂಗಿಕತೆಯನ್ನು ಉಪಯೋಗಿಸುತ್ತಾರೆ ಎಂದು ನಟಿ ಪೂಜಾ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

” ಒಬ್ಬ ಪುರುಷ ಎನ್ನುವವನಿಂದಾಗಿ ಈ ಜಗತ್ತಿನ ಎಲ್ಲ ಪುರುಷರನ್ನು ಲೈಂಗಿಕ ಕಿರುಕುಳದಾರರು ಎಂದು ಹೇಳಲು ಸಾಧ್ಯವಿಲ್ಲ. ಈ ಜಗತ್ತಿನ ಎಲ್ಲ ಮಹಿಳೆಯರು ಬಲಿಪಶುಗಳಾಗುವುದು ನಿರ್ಬಂಧಿತವಲ್ಲ. ಕೆಲವು ಸಮಯದಲ್ಲಿ ಮಹಿಳೆಯರೂ ಅಪರಾಧಿಗಳಾಗಬಹುದು. ಒಂದೇ ಬ್ರಶ್‍ನಲ್ಲಿ ಎಲ್ಲರನ್ನೂ ಪೆಯಿಂಟು ಮಾಡುವುದು ಪಕ್ಷಪಾತಿತ್ವವಾಗಿದೆ” ಎಂದು ಪೂಜಾಭಟ್ ಹೇಳಿದರು.

ಸಹೋದ್ಯೋಗಿ ಮಹಿಳೆಯರ ವಿರುದ್ಧ ಲೈಂಗಿಕ ಶೋಷಣೆ ಕೇವಲ ಬಾಲಿವುಡ್‍ನಲಿ ಮಾತ್ರವಲ್ಲ ನಡೆಯುತ್ತಿರುವುದು. ಮಾಧ್ಯಮ ರಾಜಕೀಯ,ಶಿಕ್ಷಣ ಕ್ಷೇತ್ರದಲ್ಲಿಯೂ ಇಂಥ ಶೋಷಣೆಗಳು ನಡೆಯುತ್ತಿವೆ ಎನ್ನುವುದು ಸತ್ಯವಾಗಿದೆ. ಲೈಂಗಿಕ ಶೋಷಣೆ ಅಧಿಕಾರ ಹಸ್ತಾಂತರಿಸುವ ವೇಳೆ ಹೆಚ್ಚು ನಡೆಯುತ್ತದೆ. ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಅಧಿಕಾರಕ್ಕಾಗಿ ಮಹಿಳೆಯರು ಅವರ ಲೈಂಗಿಕತೆಯ ಸಹಾಯ ಪಡೆಯುತ್ತಾರೆ. ಅಧಿಕಾರದಲ್ಲಿರುವ ಓರ್ವನನ್ನು ಮದುವೆ ಆಗುವುದು ಮತ್ತು ಲೈಂಗಿಕ ಆಸಕ್ತಿಗಳು ಹೆಚ್ಚಿನ ಪ್ರತಿಷ್ಠೆಗಾಗಿ ಉಪಯೋಗಿಸುವುದು ವ್ಯತ್ಯಾಸ ವಿರುವ ವಿಚಾರವಲ್ಲ ಎಂದು ಪೂಜಾ ಭಟ್ ಅಭಿಪ್ರಾಯಿಸಿದರು.

ಕೆಲವು ಪ್ರಕರಣಗಳಲ್ಲಿ ನಿರಪರಾಧಿ ಪುರುಷರು ಮಾಧ್ಯಮ, ಕೋರ್ಟಿನಲ್ಲೆಲ್ಲ ವಿಚಾರಣೆಗೆ ತುತ್ತಾಗಿ ಸಮಾಜದಲ್ಲಿ ಆತನ ಸ್ಥಾನಮಾನ ಕುಟುಂಬ ಜೀವನ ನಾಶವಾಗುವ ಪರಿಸ್ಥಿತಿಯೂ ಉಂಟಾಗುತ್ತದೆ ಎಂದು ಪೂಜಾ ಭಟ್ ಹೇಳಿದರು.

ಮೀಟು ಕ್ಯಾಂಪೆಯಿನ್‍ನಲ್ಲಿ ನಟಿ ತನುಶ್ರೀದತ್ತ ನಾನಾಪಟೇಕರ್ ವಿರುದ್ಧ ಲೈಂಗಿಕಾರೋಪ ಹೊರಿಸಿದ ನಂತರ ಬಹಳಷ್ಟು ನಟಿಯರು ತಮಗಾದ ಅನುಭವಗಳನ್ನು ವಿವರಿಸಲು ಮುಂದೆ ಬಂದಿದ್ದಾರೆ.

Leave a Reply