ನಾಗ್ಪುರ್: ಭಾರತದ ಮಾಜಿ ರಾಷ್ಟ್ರಪತಿ ಮತ್ತು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾದ ಪ್ರಣಬ್ ಮುಖರ್ಜಿ ಗುರುವಾರ ನಾಗ್ಪುರದ ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಆರ್ ಎಸ್ ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೇವರ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದು “ಭಾರತದ ಮಾತೆಯ ಶ್ರೇಷ್ಠ ಪುತ್ರ” ಎಂದು ಅವರನ್ನು ಕರೆದಿದ್ದಾರೆ.

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು
ಕಾಂಗ್ರೆಸ್ ಪಕ್ಷದ ಒಳಗೆ ಮತ್ತು ಹೊರಗಿನಿಂದ ಹಲವು ಟೀಕೆಗಳು ವ್ಯಕ್ತವಾದ ಹೊರತಾಗಿಯೂ, ಅವರು ಆರ್ ಎಸ್ ಎಸ್ ಕಛೇರಿಗೆ ಭೇಟಿ ನೀಡುವ ತಮ್ಮ ನಿರ್ಧಾರದಂತೆ ನಡೆದರು.

ನಾಗಪುರದಲ್ಲಿ ಹೆಗ್ಡೆವಾರ್ ರವರ ಜನ್ಮಸ್ಥಳವನ್ನು ಭೇಟಿ ಮಾಡಿ ಸಂದರ್ಶಕರ ಪುಸ್ತಕದಲ್ಲಿ ಬರೆಯುತ್ತಾ,
“ಭಾರತ ಮಾತೆಯ ಗೌರವಾನ್ವಿತ ಮಗನಿಗೆ ನನ್ನ ಗೌರವಾರ್ಪಣೆಯನ್ನು ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ” ಎಂದು ಬರೆದರು. ನಂತರ ಅವರು ಆರ್ ಎಸ್ ಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, “ವೈವಿಧ್ಯತೆ, ಬಹು ಸಂಸ್ಕೃತಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಣಬ್ ಮುಖರ್ಜಿಯವರ ಈ ನಡೆ ನೋವುಂಟು ಮಾಡಿದೆ” ಎಂದರು.

Leave a Reply