ವಿವಾಹಿತ ಸಿಆರ್ಪಿಎಫ್ ಜವಾನ ತನ್ನ ಪ್ರಿಯತಮೆಯನ್ನು ವಿವಾಹವಾಗಿದ್ದು, ಪತ್ನಿಯೊಂದಿಗೂ ಪುನಃ ವಿವಾಹವಾಗಿದ್ದಾರೆ.
ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ ಓರ್ವ ಸಿಆರ್ಪಿಫ್ ಜವಾನ ಒಂದೇ ಮಂಟಪದಲ್ಲಿ ತನ್ನ ಪ್ರಿಯತಮೆ ಹಾಗೂ ಪತ್ನಿಯೊಂದಿಗೆ ವಿವಾಹವಾಗಿದ್ದಾರೆ.
ಪ್ರಥಮ ಪತ್ನಿಯಿಂದ ಮಗುವಾಗದ ಕಾರಣ ಪುನರ್ವಿವಾಹ ನಡೆದಿದೆ ಎಂದು ಗ್ರಾಮದ ಸರಪಂಚರು ತಿಳಿಸಿದ್ದಾರೆ. ಆದರೆ ಸೇವಾ ನಿಯಮಗಳ ಪ್ರಕಾರ ಒಂದಕ್ಕಿಂತ ಪತಿ ಅಥವಾ ಪತ್ನಿಯನ್ನು ಹೊಂದುವುದಕ್ಕೆ ನಿಷೇಧವಿದೆ ಎಂಬುದಾಗಿ ಸಿಆರ್ಪಿಎಫ್ ವಕ್ತಾರರು ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಮೊದಲ ಪತ್ನಿಗೆ ಮಕ್ಕಳಾಗದಿದ್ದರಿಂದ ಸಿಆರ್ ಪಿಎಫ್ ಯೋಧ ಅನಿಲ್ ಅವರು ತಾವು ಪ್ರೀತಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಮದುವೆಯಾಗಲು ನಿರ್ಧರಿಸಿದರು. ಇದಕ್ಕೆ ಪತ್ನಿ ಸಹ ಸಮ್ಮತಿ ನೀಡಿದ್ದರು. ಹೀಗಾಗಿ ಅನಿಲ್ ರಜೆ ಮೇಲೆ ಬಂದಾಗ ಅಂಗನವಾಡಿ ಕಾರ್ಯಕರ್ತೆಯ ಜತೆಯೇ ಹೆಚ್ಚು ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ. ಇದೀಗ ಸಂಪ್ರದಾಯದಂತೆ ಪ್ರೇಯಸಿ ಹಾಗೂ ಪತ್ನಿ ಜತೆ ಮದುವೆಯಾಗಿದ್ದಾರೆ ಎಂದು ಜಾಷ್ಪುರ್ ಮೂಲದ ಪತ್ರಕರ್ತ ರಾಜೇಶ್ ಪಾಂಡೆ ಅವರು ತಿಳಿಸಿದ್ದಾರೆ.

Leave a Reply