ಇದು ನಮ್ಮ ಊರು: ಶಿಕ್ಷಕರೆಂದರೆ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಷ್ಠಾಚಾರ ಕಲಿಸಿ ಕೊಡುವವರು ಅಲ್ಲವೇ! ಆದರೆ ಇಂತಹ ಶಿಕ್ಷಕರೆ ಉಂಡಾಡಿ ಗುಂಡಾಗಳಾದರೆ ಏನು ಮಾಡೋದು..? ಅಲ್ಲಿ ಕಲಿಯುವ ಮಕ್ಕಳ ಸ್ಥಿತಿ ಏನಾಗಿರಬಹುದು.? ಇಂತಹ ಘಟನೆಯೊಂದು ಬಿಹಾರದ ಭಾಗಲ್ಪುರದಿಂದ ವರದಿಯಾಗಿದೆ. ಇಲ್ಲಿನ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರು ಕ್ಯಾಂಪಸ್‌ನಲ್ಲಿ ಸಿಗರೇಟು ಸೇದುತ್ತಿರುವಾಗ ಯಾರೋ ಒಬ್ಬರು ವಿಡಿಯೋ ಮಾಡಿದ್ದು ಅದು ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಜಿಲ್ಲಾ ಶಿಕ್ಷಣಾಧಿಕಾರಿ ಪ್ರಾಂಶುಪಾಲರನ್ನು ಹುದ್ದೆಯಿಂದ ಅಮಾನತುಗೊಳಿಸಿದ್ದಾರೆ.

ಇದೀಗ ಕರೋನಾ ಕಾರಣದಿಂದಾಗಿ ಬಿಹಾರದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ ಶಿಕ್ಷಕರು ಶಾಲೆಗೆ ಬಂದು ತಮ್ಮ ಕೆಲಸ ನಿರ್ವಹಿಬೇಕಾಗಿದೆ. ಮೊನ್ನೆಯಿಂದ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಅಕ್ಕಿ ಮತ್ತು ಶಾಲೆಯ ಉಡುಗೆಯ ಹಣವನ್ನು ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಂಹೋಲಾ ಬ್ಲಾಕ್‌ನ ಮದರ್‌ಗಂಜ್ ಮಧ್ಯಮ ಶಾಲೆಯ ಪ್ರಾಂಶುಪಾಲ ವಿನೋದ್ ಕುಮಾರ್ ಸಿಂಗ್ ಎಂಬಾತ ಶಾಲೆಯ ಆವರಣದಲ್ಲಿ ಸಿಗರೇಟು ಸೇದುತ್ತಿದ್ದ, ಇದನ್ನು ಯಾರೋ ಅವರ ವಿಡಿಯೋ ಮಾಡಿದ್ದಾರೆ. ಆ ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಗ್ರಾಮಸ್ಥರೊಬ್ಬರು ಈ ವಿಡಿಯೋವನ್ನು ಜಿಲ್ಲೆಯ ಶಿಕ್ಷಣ ಅಧಿಕಾರಿ ಸಂಜಯ್ ಕುಮಾರ್ ಅವರಿಗೆ ಕಳುಹಿಸಿದ್ದು, ನಂತರ ಶಿಕ್ಷಣ ಇಲಾಖೆ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಿದೆ.

Leave a Reply