ಪತ್ತನಂತಿಟ್ಟ(ಕೇರಳ): ನೆರೆಹಾವಳಿ ಕಳೆದು ಎರಡು ವಾರ ಆಗಿದ್ದರೂ ಪತ್ತನಂತಿಟ್ಟದ ರಾನ್ನಿ ನಗರದ ಸಂಕಷ್ಟ ಮುಗಿದ್ದಿಲ್ಲ. ಎಲ್ಲೆಲ್ಲೂ ಕೆಸರು. ಅದನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಅತ್ತಿತ್ತ ಕಸ ಇತ್ಯಾದಿ ರಾಶಿ ನಗರನಿವಾಸಿಗಳ ಮುಂದೆ ಗುಡ್ಡೆ ಬಿದ್ದಿವೆ. ಪಂಪ ನದಿಯ ನೆರೆ ಮೊದಲುರಾನ್ನಿಯಲ್ಲಿ ಹಾವಳಿ ಮಾಡಿತು. ನಗರದ ಕೆಲವು ಪ್ರದೇಶಗಳಲ್ಲಿ ಮೂರು ಮೀಟರ್ ಎತ್ತರದಲ್ಲಿ ನೀರು ಹರಿದು ಹೋಗಿತ್ತು. ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋದಾಗ ಉಳಿದದ್ದು ಕೆಸರು ಮಾತ್ರ. ನಗರದ ರಸ್ತೆಗಳಲ್ಲಿ ಇದು ಗುಡ್ಡೆಬಿದ್ದಿದೆ. ಕೆಲವು ಕಡೆಗಳಲ್ಲಿ ಅದನ್ನು ತೆರವು ಗೊಳಿಸುವ ಕಾರ್ಯ ಈಗಲೂ ಮುಂದುವರಿಯುತ್ತಿದೆ.

ಎರಡು ವಾರಕ್ಕೂ ಹೆಚ್ಚು ಸಮಯ ಆಗಿದೆ. ನಗರದಲ್ಲಿ ವ್ಯಾಪಾರಿ ಸಂಸ್ಥೆಗಳಲ್ಲಿ ಹೆಚ್ಚಿನವು ಇನ್ನೂ ಬಾಗಿಲು ತೆರೆದಿಲ್ಲ. ನೆರೆ ಹಲವರಿಗೆ ಲಕ್ಷಾಂತರ ರೂಪಾಯಿ ನಷ್ಟವನ್ನು ತಂದು ಕೊಟ್ಟಿದೆ. ಸ್ಥಿತಿಗತಗಳು ಸಾಮಾನ್ಯ ಮಟ್ಟಕ್ಕೆ ಯಾವತ್ತು ಬರಬಹುದು ಎಂದು ಯಾರಿಗೂ ಸ್ಪಷ್ಟತೆಯಿಲ್ಲದ ಸ್ಥಿತಿ ಈಗ ಅಲ್ಲಿದೆ. ಈಗ ಧೂಳಿನ ಹಾವಳಿಯೂ ಇದೆ. ಆದ್ದರಿಂದ ಶುದ್ಧಗಾಳಿ ಇಲ್ಲದ ಸ್ಥಿತಿಯಿದೆ. ಆರೋಗ್ಯ ಸಮಸ್ಯೆಗಳು ಹಲವರನ್ನು ಕಾಡುತ್ತಿದೆ. ನಗರದಲ್ಲಿ ಹಲವು ಕಡೆ ವಿದ್ಯುತ್ ಸರಬರಾಜು ಇನ್ನೂ ಸರಿಪಡಿಸಲು ಸಾಧ್ಯವಾಗಿಲ್ಲ. ಇಲ್ಲಿ ಆದ ನಾಶ ನಷ್ಟಗಳ ಸರಿಯಾದ ಲೆಕ್ಕ ಇನ್ನೂ ಪ್ರಕಟವಾಗಿಲ್ಲ.

Leave a Reply