ಹೈದರಾಬಾದ್: ಬಿಗ್‍ಸ್ಕ್ರೀನ್‍ನ ಸಿನೆಮಾ ತಾರೆಯರಿಗೆ ಅಭಿಮಾನಿಗಳಿರುವುದು ಹೊಸದೇನಲ್ಲ. ಅವರ ಅಭಿಮಾನಿದಲ್ಲಿ ವಿಚಿತ್ರವಾದುದನ್ನು ಅಭಿಮಾನಿಗಳು ಮಾಡುವುದಿದೆ. ನಟರ ಕಟೌಟ್ ತಯಾರಿಸಿ ಅದಕ್ಕೆ ಹಾಲಭೀಶೇಕ ಇತ್ಯಾಡಿ ಮಾಡುವವರು ಇದ್ದಾರೆ.

ಆದರೆ ನಟ ಪ್ರಭಾಸ್ ಅಭಿಮಾನಿ ಅವರ ಹೊಸ ಚಿತ್ರ ಸಹೋ ಬಿಡುಗಡೆ ತಡವಾಗುತ್ತಿದೆ. ಅದನ್ನು ಅದರ ತಂಡವೇ ತಡ ಮಾಡುತ್ತಿದೆ. ಇದನ್ನು ಸಹಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಅಭಿಮಾನಿಯೊಬ್ಬ ಬರೆದಿಟ್ಟು ಆತ್ಮಹತ್ಯೆಗೆ ಸಜ್ಜಾಗಿದ್ದಾನೆ. ಅಭಿಮಾನಿಯ ಹೆಸರು ಕೃಷ್ಣ ಎಂದು ತಿಳಿದು ಬಂದಿದೆ. ಆದರೆ ಇದು ಪ್ರಭಾಸ್ ಅಭಿಮಾನಿಗಳ ತಂತ್ರ ಎಂದು ಕೆಲವರು ಹೇಳುತ್ತಿದ್ದಾರೆ.

ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಕೃಷ್ಣ ಆತ್ಮಹತ್ಯೆಗೆ ಸಜ್ಜಾಗಿದ್ದು ದೊಡ್ಡ ಚರ್ಚೆಯಾಗುತ್ತಿದೆ.

Leave a Reply