ಅವನು ತುಂಬ ಕಷ್ಟದಲ್ಲಿದ್ದ. ಏನೇನೋ ಭಯ ಅವನನ್ನು ಕಾಡುತ್ತಿತ್ತು. ಆತಂಕದಿಂದ ಬಳಲು ತ್ತಿದ್ದ ಅವನು ಒಂದು ದಿನ ಒಂದು ತೀರ್ಮಾನಕ್ಕೆ ಬಂದ.

`ನನ್ನ ಆತಂಕ ನಿವಾರಣೆಯಾಗಿ ನನಗೆ ನೆಮ್ಮದಿ ಸಿಕ್ಕರೆ, ನಾನು ನನ್ನ ಮನೆಯನ್ನು ಮಾರುತ್ತೇನೆ. ಅದರಿಂದ ಬಂದ ಅಷ್ಟೂ ಹಣವನ್ನು ಬಡವರಿಗೆ ನೀಡುತ್ತೇನೆ. ನನಗಿದೆಲ್ಲ ಸಾಕು, ನೆಮ್ಮದಿ ಬೇಕು.’

ಹಾಗಂತ ನಿಶ್ಚಯಿಸಿದ ಕೆಲವೇ ತಿಂಗಳಿಗೆ ಅವನ ಚಿಂತೆಗಳು ದೂರವಾದವು. ನೆಮ್ಮದಿ ಅವನನ್ನು ಹುಡುಕಿಕೊಂಡು ಬಂತು. ಅವನು ಅಭಯದಿಂದ ಬದುಕುವಂತಾಯಿತು. ತಾನು ಹೇಳಿದ ಮಾತನ್ನು ನಡೆಸಲೇಬೇಕು ಎಂದು ಅವನು ತೀರ್ಮಾನಿಸಿದ.

ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ಕೊಟ್ಟ. ಅದರ ಜೊತೆಗೇ ಒಂದು ಕರಾರು ಹಾಕಿದ: ಮನೆ ಕೊಳ್ಳುವವರು ಅದರೊಂದಿಗೆ ಒಂದು ಬೆಕ್ಕನ್ನು ಕೂಡ ಕೊಂಡು ಕೊಳ್ಳಬೇಕು. ಮನೆಯ ಬೆಲೆ ಒಂದು ಬೆಳ್ಳಿ ನಾಣ್ಯ, ಬೆಕ್ಕಿನ ಬೆಲೆ ಒಂದು ಲಕ್ಷ ಬಂಗಾರದ ನಾಣ್ಯ.

ಮನೆ ಮಾರಾಟವಾಯಿತು, ಬೆಕ್ಕು ಕೂಡ. ಮನೆ ಮಾರಿದ್ದರಿಂದ ಬಂದ ಒಂದು ಬೆಳ್ಳಿ ನಾಣ್ಯವನ್ನು ಅವನು ಬಡಬಗ್ಗರಿಗೆ ಕೊಟ್ಟ, ಲಕ್ಷ ಬಂಗಾ ರದ ವರಹವನ್ನು ಗಂಟುಕಟ್ಟಿಕೊಂಡು ಹೊರಟ.

ಲೋಭವು ಮನುಷ್ಯನನ್ನು ಹಿತ ಚಿಂತಕ ಮತ್ತು ಬಡಬಗ್ಗರಿಗೆ ದಾನ ಧರ್ಮ ಮಾಡುವುದರಿಂದ ತಡೆಯು ತ್ತದೆ. ಮನುಷ್ಯನನ್ನು ಪರಮ ಸ್ವಾರ್ಥಿಯನ್ನಾಗಿ ಮಾಡಿಬಿಡುತ್ತದೆ. ತನ್ನ ಸಂಪತ್ತನ್ನು ಉಳಿಸಲಿಕ್ಕಾಗಿ ಯಾವ ಮಟ್ಟದ ಕುಟಿಲ ತಂತ್ರ ಗಳನ್ನು ಹೂಡಲೂ ಆತ ಹಿಂಜರಿ ಯುವುದಿಲ್ಲ. ದೇವನಿಗೆ ಮೋಸ ಮಾಡಿದ ಮನುಷ್ಯ ಮಾನವರಿಗೆ ಮೋಸ ಮಾಡದಿರುವನೇ?

ಮನುಷ್ಯ ಹಣದ ಮೋಹಕ್ಕೆ ಮತ್ತು ಪಾಶಕ್ಕೆ ಸಿಲುಕಿ ತನ್ನ ಹೃದಯವನ್ನು ಇನ್ನಷ್ಟು ಸಂಕುಚಿತ ಗೊಳಿಸುತ್ತಾನೆ. ತನ್ನ ಸಂಕಷ್ಟದಲ್ಲಿ ಮಾಡಿದ ವಾಗ್ದಾನವನ್ನು ಮರೆತು ಬಿಡುತ್ತಾನೆ. ಅಥವಾ ನೆನಪಿಸಿದರೂ ಅದರಿಂದ ನುಣುಚಿಕೊಳ್ಳುತ್ತಾನೆ.

ನಿಜವಾಗಿ ಆತ ತನ್ನ ದಾನ ಧರ್ಮದ ಸಂಕಲ್ಪದ ಕಾರಣದಿಂದಾಗಿ ನೆಮ್ಮದಿ ಅವನನ್ನು ಖರೀದಿಸಿಕೊಂಡಿತು. ಆತ ಕುಟಿಲ ತಂತ್ರ ಮತ್ತು ಲೋಭದ ಕಾರಣದಿಂದ ಲಕ್ಷ ಬಂಗಾರವನ್ನೇನೋ ಪಡೆದುಕೊಂಡ. ಆದರೆ ನೆಮ್ಮದಿಯನ್ನು ಮಾರಿಬಿಟ್ಟ.

– ಸನ್ಮಾರ್ಗಿ

Leave a Reply