ಹೊಸದಿಲ್ಲಿ: ಕ್ರಿಕೆಟ್ ಅನಿಶ್ಚಿತತೆಯ ಆಟವಾಗಿದೆ. ಇದರಲ್ಲಿ ಯಾವಾಗ ಏನಾಗುತ್ತದೆ ಎನ್ನುವಂತಿಲ್ಲ. ಇತ್ತೀಚೆಗೆ ಬ್ಲೈಂಡ್ ಕ್ರಿಕೆಟ್ ದಕ್ಷಿಣ ಆಫ್ರಿಕದ ನ್ಯಾಶನಲ್ ಟೂರ್ನ್‍ಮೆಂಟಿನಲ್ಲಿ ಬ್ಯಾಟ್ಸ್ಮನ್ ಫೆಡ್ರಿಕ್ ಬೆಯರ್ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಐತಿಹಾಸಿಕ ಆಟ ಪ್ರದರ್ಶಿಸಿದ್ದಾರೆ. ಬೆಯರ್ ಬೊಲ್ಯೆಂಡ್ ತಂಡದಲ್ಲಿ ಆಡಿ 78 ಎಸೆತಗಳಲ್ಲಿ ದ್ವಿಶತಕ ಗಳಿಸಿದರು.

ಬೆಯರ್ ಈ ಪಂದ್ಯದಲ್ಲಿ 205 ರನ್‍ಗಳಿಸಿದ್ದು ಕೊನೆಯ ಎಸೆತದಲ್ಲಿ ಔಟಾದರು. ತನ್ನ ಒಟ್ಟು ರನ್‍ಗಳ್ಲಿಶೇ.78.80ರಷ್ಟು ರನ್ ಬೌಂಡರಿಗಳಿಂದ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಈವರೆಗೆ ಟಿಟ್ವೆಂಟಿ ಪಂದ್ಯದಲ್ಲಿ ದ್ವಿಶತಕ ಯಾರೂ ಗಳಿಸಿಲ್ಲ. ಬೆಯರ್ 263 ಸ್ಟ್ರೈಕ್‍ರೇಟ್‍ನಲ್ಲಿ ಬಿರುಗಾಳಿ ರೀತಿ ಆಡಿದರು. ಟೈಮ್ಸ್ ಲೈವ್‍ನ ವರದಿಯ ಪ್ರಕಾರ ಅಕ್ಟೋಬರ್ ಎರಡರಂದು ಪಂದ್ಯ ನಡೆದಿತ್ತು. 39 ಬೌಂಡರಿ ಮತ್ತು ಆರು ಸಿಕ್ಸರ್‍ಗಳನ್ನು ಬೆಯರ್ ಸಿಡಿಸಿದರು.

ಈ ರೀತಿ 180 ರನ್‍ಗಳನ್ನು ಅವರು ಗಳಿಸಿದರು. ಇವರ ಆರಂಭಿಕ ಜತೆಗಾರ ಶೆಫರ್ಡ ಮಾಗ್ಬ 53 ಎಸೆತಗಳಿಂದ 97 ರನ್ ಗಳಿಸಿದ್ದಾರೆ. ಬೊಲ್ಯೆಂಡ್ ತಂಡ 20 ಓವರಿನಲ್ಲಿ319 ರನ್‍ಗಳಿಸಿತ್ತು. ಪ್ರತಿಸ್ಪರ್ಧಿ ತಂಡ 20 ಓವರ್‍ನಲ್ಲಿಆರು ವಿಕೆಟ್ ನಷ್ಟದಲ್ಲಿ 155 ರನ್‍ಗಳಿಸಿದೆ. ಬೊಲ್ಯೆಂಡ್ 165 ರನ್‍ಗಳಿಂದ ಸ್ಟೇಟ್‍ತಂಡದ ವಿರುದ್ಧ ಜಯಗಳಿಸಿದೆ.

ಅಂಧರು ಅದ್ಭುತವಾಗಿ ಕ್ರಿಕೆಟ್ ಆಡುವ ಸಣ್ಣ ವಿಡಿಯೋ ನೋಡಿ

Leave a Reply