ನವದೆಹಲಿ: ಕಳೆದ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಸಾವು ಸಂಭವಿಸಿದೆ ಎನ್ನಲಾದ ಬಾಲಿವುಡ್ ನಟಿ ಶ್ರೀದೇವಿ ವಿಷಯಕ್ಕೆ ಸಂಬಂಧಿಸಿ, ಭೂಗತಪಾತಕಿ ದಾವೂದ್ ಇಬ್ರಾಹಿಂ ಹೆಸರನ್ನು ತಳುಕು ಹಾಕಿ ಟ್ವೀಟ್ ಮಾಡಿದ್ದ ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಗೆ ಟ್ವಿಟ್ಟರ್‌ನಲ್ಲಿ ಭರ್ಜರಿಯಾಗಿ ಜನ ಮಂಗಳಾರತಿ ಮಾಡಿದ್ದಾರೆ.

ನಟಿ ಶ್ರೀದೇವಿಯ ಸಾವಿನ ಬಗ್ಗೆ ಹಲವಾರು ಊಹಾಪೋಹಗಳು ಸೃಷ್ಟಿಯಾಗಿದ್ದು, ಪ್ರಾಥಮಿಕ ವರದಿ ಪ್ರಕಾರ ಶ್ರೀದೇವಿ ಹೃದಯ ಸ್ತಂಭನದಿಂದ ನಿಧನರಾಗಿರುವುದಾಗಿ ವರದಿಯಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶ್ರೀದೇವಿ ಪ್ರಜ್ಞೆತಪ್ಪಿ ಬಿದ್ದು ಬಾತ್ ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿಸಿದೆ. ಅಲ್ಲದೇ ದೇಹದಲ್ಲಿ ಮದ್ಯದ ಅಂಶ ಪತ್ತೆಯಾಗಿರುವುದಾಗಿ ಉಲ್ಲೇಖಿಸಿತ್ತು.

ಶ್ರೀದೇವಿ ನಿಗೂಢ ಸಾವಿನ ತನಿಖೆ ನಡೆಯುತ್ತಿರುವಾಗಲೇ ಎಎನ್‌ಐ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಸುಬ್ರಹ್ಮಣ್ಯ ಸ್ವಾಮಿ, ‘ನಿಜ ವಿಷಯ ಇನ್ನೂ ಮಾಧ್ಯಮಗಳಿಗೆ ಗೊತ್ತಿಲ್ಲ. ಶ್ರೀದೇವಿ ಯಾವತ್ತೂ ಹಾರ್ಡ್ ಲಿಕ್ಕರ್ ಉಪಯೋಗಿಸಿಲ್ಲ. ಸಿಸಿಟಿವಿ ಫೂಟೇಜ್ ಏನಾಯ್ತು? ವೈದ್ಯರು ಏಕಾಏಕಿ ಬಂದು ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದೆ?ಅದಾಗ್ಯೂ, ನಟಿಯರು ಹಾಗೂ ತಲೆಮರೆಸಿಕೊಂಡಿರುವ ಭೂಗತಪಾತಕಿ ದಾವೂದ್ ಇಬ್ರಾಹಿಂ ನಡುವಿನ ಅಕ್ರಮ ಸಂಬಂಧದ ಬಗ್ಗೆಯೂ ಸ್ವಾಮಿ ಪ್ರಶ್ನಿಸಿದ್ದಾರೆ.

ಅದಾಗ್ಯೂ, ನಟಿಯರು ಹಾಗೂ ತಲೆಮರೆಸಿಕೊಂಡಿರುವ ಭೂಗತಪಾತಕಿ ದಾವೂದ್ ಇಬ್ರಾಹಿಂ ನಡುವಿನ ಅಕ್ರಮ ಸಂಬಂಧದ ಬಗ್ಗೆಯೂ ಸ್ವಾಮಿ ಪ್ರಶ್ನಿಸಿದ್ದಾರೆ. ಸಿನಿಮಾ ನಟಿಯರು ಹಾಗೂ ದಾವೂದ್ ಜೊತೆಗಿನ ಅಕ್ರಮ ಸಂಬಂಧ ಇದೆಯಲ್ಲ ಅದರ ಬಗ್ಗೆಯೂ ನಾವು ಸ್ವಲ್ಪ ನಿಗಾ ವಹಿಸಬೇಕಾಗಿದೆ ಎಂದು ಸ್ವಾಮಿ ಪ್ರತಿಕ್ರಿಯಿಸಿದ್ದರು.
ಸ್ವಾಮಿ ಈ ಹೇಳಿಕೆ ಟ್ವೀಟರ್‌ನಲ್ಲಿ ಭಾರೀ ಟ್ರೋಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡು ಮಂಗಳಾರತಿ ಮಾಡಿದ್ದಾರೆ‌.

Leave a Reply