ಬೇಕಾಗುವ ಸಾಮಗ್ರಿಗಳು:

ಚೆನ್ನಾಗಿ ಕಳಿತ 5-6 ಟೊಮೆಟೋ ಹಣ್ಣುಗಳು, ಕ್ಯಾರೆಟ್ 1 ಸಾಧಾರಣ ಗಾತ್ರದ್ದು, ಆಲೂಗಡ್ಡೆ 1 ಸಾದಾರಣ ಗಾತ್ರದ್ದು, ಕರಿ ಮೆಣಸು, ಜೀರಿಗೆ ತಲಾ 2 ಚಮಚ, ಸಕ್ಕರೆ 2 ಚಮಚ, ಬೆಳ್ಳುಳ್ಳಿ 1 ಗಡ್ಡೆ, ಕೊತ್ತಂಬರಿ, ಕರಿಬೇವು 1 ಹಿಡಿ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಟೊಮೆಟೋ, ಕ್ಯಾರೆಟ್, ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ಮೆಣಸು, ಜೀರಿಗೆಯನ್ನು ಬಾಣಲೆಯಲ್ಲಿ
ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಆರಿದ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಬೆಂದ ಟೊಮೆಟೋ, ತರಕಾರಿ ಆರಿದ
ನಂತರ ಮಿಕ್ಸಿಯಲ್ಲಿ ಅರೆದು, ಪಾತ್ರೆಗೆ ಹಾಕಿ ಸಾಕಷ್ಟು (ತಕ್ಕಷ್ಟು) ನೀರು ಸುರಿದು, ಒಲೆಯ ಮೇಲೆ ಕುದಿಯಲಿಡಿ. ಕೊತ್ತಂಬರಿ,
ಕರಿಬೇವು, ಮೆಣಸು, ಜೀರಿಗೆ ಪುಡಿ, ಉಪ್ಪು ಹಾಕಿ ಸಾರನ್ನು ಕುದಿಸಿ ಇಳಿಸಿ. ನಂತರ ಬಾಣಲೆಯಲ್ಲಿ 2 ಚಮಚ ತುಪ್ಪ
ಹಾಕಿ ಕಾಲು ಚಮಚ ಜೀರಿಗೆ, ಬಿಡಿಸಿಟ್ಟ ಬೆಳ್ಳುಳ್ಳಿಗಳನ್ನು ಹಾಕಿ ಚೆನ್ನಾಗಿ ಹುರಿದು ಸಾರಿಗೆ ಒಗ್ಗರಣೆ ಕೊಡಿ.
ಬಿಸಿ ಅನ್ನದೊಂದಿಗೆ ಕಲಸಿ ತಿನ್ನಲು ರುಚಿ, ಲೋಟಕ್ಕೆ ಬಗ್ಗಿಸಿ ಹಾಗೇ ಕುಡಿಯಲೂ ಬಹುದು. ಕ್ಯಾರೆಟ್, ಆಲೂ ಇಲ್ಲದೆಯೂ ರಸಂ ತಯಾರಿಸಬಹುದು

Leave a Reply