ಲಕ್ನೊ: ಉತ್ತರಪ್ರದೇಶದ ಅಲಾಹಾಬಾದಿನ ಹೆಸರು ಬದಲಿಸಿದ ನಂತರ ಈಗ ಫೈಝಾಬಾದಿಗೂ ಹೊಸ ಹೆಸರು ಸಿಗುವ ಸಾಧ್ಯತೆ ತಲೆಯೆತ್ತಿ ನಿಂತಿದೆ. ಫೈಝಾಬಾದ್ ಮತ್ತು ಅಯೋಧ್ಯೆಯನ್ನು ಜೋಡಿಸಿ ಶ್ರೀ ಅಯೋಧ್ಯೆ ಎಂಬ ಹೆಸರಿಸಬೇಕೆಮದು ವಿಶ್ವಹಿಂದೂ ಪರಿಷತ್ ಮತ್ತು ರಾಮ ಜನ್ಮಭೂಮಿ ನ್ಯಾಸ್ ಹೇಳಿದೆ ಎಂದು ವರದಿಯಾಗಿದೆ.

ಅಲಹಾಬಾದನ್ನು ಪ್ರಯಾಗ್ ರಾಜ್ ಎಂದು ಬದಲಿಸಿದ ಯೋಗಿ ಆದಿತ್ಯನಾಥ್ ಸರಕಾರದ ತೀರ್ಮಾನವನ್ನು ಎರಡೂ ಸಂಘಟನೆಗಳು ಬೆಂಬಲಿಸಿದ್ದು, ಜನರ ಭಾವನೆಗೆ ಪರಿಗಣನೆ ನೀಡಿ ಫೈಝಾಬಾದಿನ ಹೆಸರನ್ನು ಶ್ರೀಅಯೋಧ್ಯೆಯನ್ನಾಗಿ ಬದಲಿಸಬೇಕೆಂದು ವಿಹಿಂಪ ವಕ್ತಾರ ಶರದ್ ಶರ್ಮ ಹೇಳಿದರು.

ದೀಪಾಳಿಯ ದೀಪೋತ್ಸವದಲ್ಲಿ ಫೈಝಾಬಾದಿಗೆ ಪುನರ್‍ನಾಮಕರಣಗೊಳಿಸಬೇಕೆಂದು ಸರಕಾರವನ್ನು ಶರ್ಮ ಆಗ್ರಹಿಸಿದರು. ಅಲಾಹಾಬಾದ್ ಪ್ರಯಾಗ್‍ರಾಜ್ ಆಗುವುದಾದರೆ ಯಾಕೆ ಫೈಝಾಬಾದ್ ಅಯೋಧ್ಯೆ ಎನ್ನುವ ಹೆಸರು ಇಡಬಾರದು ಎಂದು ವಿಹಿಂಫ ಕೇಂದ್ರ ಸಲಹಾ ಸಮಿತಿ ಸದ್ಯಸ್ಯ ಪುರುಷೋತ್ತಮ ಸಿಂಗ್ ಹೇಳಿದರು. ಫೈಝಾಬಾದ್ ಜಿಲ್ಲೆಯೂ ಅಯೋಧ್ಯೆಯೂ ಒಟ್ಟು ಸೇರಿಸಿ ಶ್ರೀಅಯೋಧ್ಯೆ ಎಂಬ ಹೆಸರಿರಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.

Leave a Reply