ಹೊಸದಿಲ್ಲಿ: ಗೆಳೆಯನ ಜೊತೆ ಜಗಳವಾಡಿದ ವಿದ್ಯಾರ್ಥಿನಿಯೊಬ್ಬಳು ನೇಣು ಹಾಕಿಕೊಂಡು ಸತ್ತ ಘಟನೆ ಪೂರ್ವ ದಿಲ್ಲಿಯಿಂದ ವರದಿಯಾಗಿದೆ. ಮನೆಯಲ್ಲಿ ತನ್ನ ಕೋಣೆಯಲ್ಲಿ ಕುಳಿತು ವಿದ್ಯಾರ್ಥಿನಿ ಗೆಳೆಯನೊಂದಿಗೆ ವೀಡಿಯೊ ಕಾಲ್ ಮಾಡುತ್ತಿದ್ದಳು. ಇದೇ ವೇಳೆ ಅವರಿಬ್ಬರ ನಡುವೆ ಜಗಳವಾಗಿದೆ. ವೀಡಿಯೊಚಾಲು ಇರುವಂತೆ ತನ್ನ ದುಪ್ಪಟ್ಟದಿಂದ ಕೊರಳಿಗೆ ನೇಣು ಹಾಕಿ ಸತ್ತಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಶಿವಾನಿ(21) ಎಂದು ಗುರುತಿಸಲಾಗಿದ್ದು, ಈಕೆ ಕಂಪೆನಿ ಸೆಕ್ರಟರಿ ಕೋರ್ಸ್ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೊ ಕಾಲ್ ವೇಳೆ ತನ್ನ ಗೆಳೆಯನೊಂದಿಗೆ ಜಗಳವಾಗಿದ್ದು, ಆತನೊಂದಿಗೆ ಮುನಿಸಿಕೊಂಡು ಶಿವಾನಿ ನೇಣುಹಾಕಿಕೊಂಡಿದ್ದಳು. ಶಿವಾನಿಯ ತಂದೆಗೆ ಆಕೆಯ ಗೆಳೆಯನೇ ಫೋನ್ ಮಾಡಿ ತಿಳಿಸಿದ್ದು ಶಿವಾನಿಯ ಕೊಣೆಗೆ ಹೋಗಿ ತಂದೆ ನೋಡಿದಾಗ ಅವಳ ಫ್ಯಾನಿಗೆ ನೇತು ಹಾಕಿಕೊಂಡಿದ್ದಳು. ಶಿವಾನಿ ಫೋನ್ ವಶಪಡಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

ಶಿವಾನಿ ಪೂರ್ವ ದಿಲ್ಲಿಯ ಘೋಂಡಗಾಂವ್‍ನಲ್ಲಿ ಹೆತ್ತವರ ಜತೆ ವಾಸಿಸುತ್ತಿದ್ದಳು. ಅವಳ ತಂದೆ ಮನೆಯಲ್ಲಿಯೇ ದಿನಸಿ ಅಂಗಡಿ ಇದೆ . ಶನಿವಾರ ಸಂಜೆ ಶಿವಾನಿ ತನ್ನ ಕೊಣೆಯಲ್ಲಿ ಕೂತು ವೀಡಿಯೊ ಕಾಲ್ ಮಾಡುತ್ತಿದ್ದಳು. ಈ ವೇಳೆ ಆಕೆಗೆ ಗೆಳೆಯನೊಂದಿಗೆ ಜಗಳವಾಗಿತ್ತು. ನಂತರ ಶಿವಾನಿ ಫ್ಯಾನಿಗೆ ಶಾಲು ಕಟ್ಟಿ ನೇಣು ಹಾಕಿಕೊಂಡಿದ್ದಾಳೆ. ಫ್ಯಾನಿನಿಂದ ಕೆಳಗಿಳಿಸಿ ಶಿವಾನಿಯನ್ನು ಹತ್ತಿರದ ಸೇಂಟ್ ಸ್ಟೀಫನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಶಿವಾನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ಫೀಚರ್ ಇಮೇಜ್ – ಸಾಂದರ್ಭಿಕ ಚಿತ್ರ

Leave a Reply