ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ ಪುರುಷರ ಅತಿ ಪ್ರತಿಷ್ಠಿತ ಏಕದಿನ ಅಂತರರಾಷ್ಟ್ರೀಯ (ODI) ಕ್ರಿಕೆಟ್‌ ಪಂದ್ಯಾವಳಿಯಾಗಿದೆ. ಈ ಕ್ರೀಡೆಯ ನಿರ್ವಹಣಾ ಮಂಡಳಿಯಾದ ಅಂತರರಾಷ್ಟ್ರೀಯ ಕ್ರಿಕೆಟ್‌ ಪರಿಷತ್‌ (ಐಸಿಸಿ) ಈ ಕ್ರೀಡೆಯನ್ನು ಆಯೋಜಿಸುತ್ತದೆ.

ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯಗಳು ನಡೆದ ನಂತರ, ಅರ್ಹತೆ ಗಳಿಸಿದ ತಂಡಗಳು, ನಾಲ್ಕು ವರ್ಷಗಳಲ್ಲೊಮ್ಮೆ ನಡೆಯುವ ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ. ಅತಿಹೆಚ್ಚು ವೀಕ್ಷಿತ ಕ್ರೀಡಾ ಪಂದ್ಯಾವಳಿಗಳ ಪಟ್ಟಿಯಲ್ಲಿ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ನಾಲ್ಕನೆಯ ಸ್ಥಾನದಲ್ಲಿದೆ. ಐಸಿಸಿ ಮೂಲಗಳ ಪ್ರಕಾರ, ಇದು ಅತ್ಯಂತ ಮಹತ್ವವಾದ ಪಂದ್ಯಾವಳಿ ಹಾಗೂ ಕ್ರಿಕೆಟ್‌ ಆಟದಲ್ಲಿ ಅತಿಪ್ರಮುಖ ಮೈಲಿಗಲ್ಲು ಮೊಟ್ಟಮೊದಲ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ೧೯೭೫ರಲ್ಲಿ ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಯಿತು. ಮಹಿಳೆಯರ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ನಾಲ್ಕು ವರ್ಷಗಳಲ್ಲೊಮ್ಮೆ ೧೯೭೩ರಿಂದಲೂ ಆಯೋಜಿಸಲಾಗುತ್ತದೆ.

ಕ್ರಿಕೆಟ್‌ ವಿಶ್ವ ಕಪ್‌ ಮುಖ್ಯ ಪಂದ್ಯಾವಳಿಯಲ್ಲಿ ಎಲ್ಲಾ ಟೆಸ್ಟ್‌ ಹಾಗೂ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುವ ರಾಷ್ಟ್ರೀಯ ತಂಡಗಳು, ಜೊತೆಗೆ, ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಾವಳಿಗಳಲ್ಲಿ ಅರ್ಹತೆ ಪಡೆದಿರುವ ರಾಷ್ಟ್ರೀಯ ತಂಡಗಳೂ ಸಹ ಸ್ಪರ್ಧಿಸುತ್ತವೆ. ಪಂದ್ಯಾವಳಿಯಲ್ಲಿ ಜಯಗಳಿಸಿದ ಐದು ರಾಷ್ಟ್ರೀಯ ತಂಡಗಳಲ್ಲಿ ಆಸ್ಟ್ರೇಲಿಯಾ ಅತಿ-ಯಶಸ್ವೀ ತಂಡವಾಗಿದೆ. ಇದು ನಾಲ್ಕು ಬಾರಿ ವಿಶ್ವಕಪ್‌ ಗೆದ್ದಿದೆ. ವೆಸ್ಟ್‌ ಇಂಡೀಸ್‌ ಹಾಗೂ ಭಾರತ ಎರಡು ಬಾರಿ, ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಒಂದು ಬಾರಿ ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಜಯಗಳಿಸಿವೆ.

year                         winner                      runner-up

2015                       Australia                     New Zealand
2011                       India                          Sri Lanka
2007                       Australia                    Sri Lanka
2003                       Australia                    India
1999                       Australia                    Pakistan
1996                       Sri Lanka                   Australia
1992                       Pakistan                    England
1987                       Australia                    England
1983                       India West                 Indies

 

Leave a Reply