ಚಾಕೋಲೆಟ್ ಅನ್ನು ಕೋಕೋ ಎಂಬ ಮರದ ಕಾಯಿಗಳಿಂದ ತಯಾರಿಸಲಾಗುತ್ತದೆ. ಕೋಕೋ ಮರಗಳು ಉಷ್ಣ ವಾತಾವರಣ ಹೊಂದಿದ ದೇಶಗಳಲ್ಲಿ ವರ್ಷದ ಎಲ್ಲಾ ದಿನಗಳಲ್ಲಿಯೂ ಬೆಳೆಸಲಾಗುತ್ತದೆ. ಚಾಕೋಲೆಟ್ ತಯಾರಿಸಲು ಕೋಕೋ ಮರದ ಕಾಯಿಗಳನ್ನು ಹುರಿಯಲಾಗುತ್ತದೆ. ನಂತರ ಅವುಗಳ ಸಿಪ್ಪೆಗಳನ್ನು ಬೇರ್ಪಡಿಸಲಾಗುತ್ತದೆ. ಬಳಿಕ ಲಭಿಸುವ ಸಣ್ಣ ತುಂಡನ್ನು ಪುಡಿ ಮಾಡಲಾಗುತ್ತದೆ. ಕಾಯಿಗಳಿಂದ ತೆಗೆಯಲಾದ ಎಣ್ಣೆಯನ್ನು ಈ ಪುಡಿಯೊಂದಿಗೆ ಸೇರಿಸಲಾಗುತ್ತದೆ. ನಂತರ ಈ ಮಿಶ್ರಣವನ್ನು ಚಾಕೋಲೆಟ್ ತಯಾರಿಕೆಗೆ ಬಳಸಲಾಗುತ್ತದೆ.

Leave a Reply