ಬೆಂಗಳೂರು: ಪತಿಯ ವಿಪರೀತ ಸಂಶಯ ಬುದ್ದಿ ತಾಳಲಾರದೆ ಮಹಿಳೆಯೊಬ್ಬರು ಪತಿಗೆ ಬ್ಯಾಟ್ ನಿಂದ ಹೊಡೆದ ಘಟನೆ ವರದಿಯಾಗಿದೆ. ಮಾತ್ರವಲ್ಲ, ಈ ಪತಿಯೇ ಬೇಡ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಪತಿಯ ಸಂಶಯ ಯಾವ ಮಟ್ಟದಲ್ಲಿ ಇತ್ತೆಂದರೆ ಆಕೆಯ ಖಾಸಗಿ ವಿಚಾರಗಳನ್ನು ಗಮನಿಸಲು  22 ಸೂಕ್ಷ್ಮ ಕ್ಯಾಮೆರಾಗಳನ್ನು ಅಳವಡಿಸಿದ್ದ ಎಂದು ಹೇಳಲಾಗಿದೆ.
ಹೋದ ವರ್ಷ ಪತ್ನಿಯ ಜನ್ಮ ಮೊಬೈಲ್ ಗಿಫ್ಟ್ ಕೊಟ್ಟು ಅದರಲ್ಲಿ ಸ್ಪೈವೇರ್ ಸಾಫ್ಟ್ವೇರ್ ಅಳವಡಿಸಿ ಆಕೆಯ ಫೋನಿನ ವಿಚಾರಗಳನ್ನು ಕದ್ದಾಲಿಸಲು ತೊಡಗಿದ. ಅಡುಗೆ ಕೋಣೆ ಸೇರಿದಂತೆ ಮನೆಯ ಸುತ್ತ ಸೂಕ್ಷ್ಮ ಕೆಮರಾ ಇಟ್ಟು ಪತಿಯ ಚಲನವಲನಗಳ ಬಗ್ಗೆ ನೋಡುತ್ತಿದ್ದ.  ಆಕೆಯ ಸೋದರಳಿಯನ ಜೊತೆ ಇದ್ದ ಫೋಟೋ ತೋರಿಸಿ ಇದು ಯಾರು ಎಂದು ಸಂಶಯಿಸಿದಾಗ ಪತ್ನಿಗೆ ಪತಿಯ ಈ ಸ್ವಭಾವ ತಿಳುವಳಿಕೆಗೆ ಬಂದಿದ್ದು, ಮಗನ ಬ್ಯಾಟ್ ನಿಂದ ಆತನ ತಲೆ ಒಡೆದ್ದಿದ್ದರೆ. ಇದೀಗ ಪತಿ ಆಕೆಯ ಮೇಲೆ ದೂರು ನೀಡಿದ್ದಾರೆ.

ಈ ದಂಪತಿ 2011ರಲ್ಲಿ ವಿವಾಹ ಆಗಿದ್ದು, ಇವರಿಗೆ ಒಬ್ಬ ಮಗ ಇದ್ದಾನೆ. ತಲೆಗೆ ಹಲವು ಸ್ಟಿಚ್‌ ಹಾಕಿಸಿಕೊಂಡಿದ್ದು ತನ್ನ ಸೌಂದರ್ಯ ಕೆಟ್ಟಿದೆ ಎಂದು  ಇದೀಗ ಪತ್ನಿಯ ವಿರುದ್ಧ ಪೊಲೀಸರಿಗೆ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದ್ದಾನೆ. ವಾರಗಳ ವರೆಗೆ ಜೋಡಿಯನ್ನು ಗುಪ್ತ ಸಮಾಲೋಚನೆಗೆ ಒಳಪಡಿಸಲಾಗಿದೆ.

Leave a Reply