12ನೇ ತರಗತಿ ಪಾಸ್ ವ್ಯಕ್ತಿಯಿಂದ ಟ್ರಾವೆಲ್ ಏಜೆನ್ಸಿ ಗೆ ಮೋಸ  ಮಾಡಿದ ಕೆಲಸ ನಡೆದಿದೆ. ಯಾವುದೇ ಹಣ ಪಾವತಿಸದೇ 1500 ಏರ್ ಟಿಕೆಟ್ ಬುಕ್ ಈ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.
ಮಧ್ಯ ಪ್ರದೇಶದ ದತಿಯಾ ಎಂಬಲ್ಲಿನ27 ವರ್ಷದ ವ್ಯಕ್ತಿಯೊಬ್ಬ ಕಡಿಮೆಯೆಂದರೆ ನಾಲ್ಕು ಟ್ರಾವೆಲ್ ವೆಬ್ಸೈಟ್ ಗಳಿಗೆ ವಂಚಿಸಿ ಯಾವುದೇ ಹಣ ಪಾವತಿಸದೇ 1500ಕ್ಕಿಂತಲೂ ಹೆಚ್ಚು ಏರ್ ಟಿಕೆಟ್ ಬುಕ್ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಕೇವಲ 12ನೇ ತರಗತಿ ಪಾಸಾಗಿರುವ ಆರೋಪಿ ರಾಜ್ ಪ್ರತಾಪ್ ಪರ್ಮಾರ್ ಎರಡು ವರ್ಷಗಳಿಂದ ಇದೇ ದಂಧೆಯಿಂದ ಸುಮಾರು ಎರಡು ಕೋಟಿ ರೂಪಾಯಿಗಳನ್ನು ಗಳಿಸಿದ್ದಾನೆ.

ಮಧ್ಯ ಪ್ರದೇಶ ಪೋಲೀಸರ ಪ್ರಕಾರ ಈ ರಾಜ್ ಪ್ರತಾಪ್ ಎನ್ನುವವನಿಗೆ ಎರಡು ವರ್ಷಗಳ ಹಿಂದೆ ಟಿಕೆಟ್ ಬುಕ್ ಮಾಡುವ ಗೇಟ್ ವೇ ತೆರೆದು ಕೊಂಡಿತ್ತು. ಇದರಿಂದ ಈ ತನ್ನ ಪ್ಲಾನ್ ರಚಿಸಿ, ದೇಶದಾದ್ಯಂತ ಇರುವ ಟ್ರಾವೆಲ್ ಏಜೆನ್ಸಿ ಗಳಿಗೆ 80% ಡಿಸ್ಕೌಂಟ್ ರೇಟ್ ನಲ್ಲಿ ಟಿಕೆಟ್ ಮಾರಲು ತೊಡಗಿದ. ಹೀಗೆ ಟಿಕೆಟ್ ಮಾರಿ ಕೋಟ್ಯಂತರ ಗಳಿಸಿದ ಎಂದು ಹೇಳಿದ್ದಾರೆ. ಕಳ್ಳ ಎಷ್ಟೇ ಚಾಲಾಕಿಯಾದರೂ ಒಂದಲ್ಲ ಒಂದಿನ ಆತ ಸಿಕ್ಕಿ ಬೀಳುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

Leave a Reply