ಚೆನ್ನೈ: ಡಕಾಯತಿ ಮತ್ತು ಕೊಲೆ ಪ್ರಕರಣದಲ್ಲಿ ವೆಲ್ಲೂರ್ ಜೈಲಿನಲ್ಲಿ ಮೂವತ್ತು ವರ್ಷ ಕಾರಾಗೃಹ ವಾಸ ಅನುಭವಿಸಿದ ದಂಪತಿ ಅಕ್ಟೋಬರ್ ಆರರಂದು ಪುನರ್‍ಮಿಲನಗೊಂಡರು. ಸುಬ್ರಮಣಿ ಮತ್ತು ವಿಜಯರ ವಯಸ್ಸು ಈಗ ಅರುವತ್ತು ವರ್ಷವನ್ನೂ ದಾಟಿದೆ. ಈಗ ತಮ್ಮ ಜೀವನವನ್ನು ಆರಂಭಿಸುತ್ತಿದ್ದಾರೆ.

ತಿರೂಪುರದನಚಿಪಲ್ಯಂ ಗ್ರಾಮದ ಸುಬ್ರಮಣಿ ಶ್ರೀಲಂಕಾದ ವಿಜಯ ಎಂಬವರನ್ನು ಪ್ರೀತಿಸುತ್ತಿದ್ದರು. ಅವರಿಬ್ಬರ ನಡುವೆ ಪ್ರಮಾಣಿಕ ಪ್ರೀತಿಯಿತ್ತು. ಸುಬ್ರಮಣಿ ಶ್ರೀಮಂತ ಕುಟುಂಬದ ವ್ಯಕ್ತಿ ಆಗಿದ್ದರು. ಆದರೆ ಅವರು ಶ್ರೀಮಂತಿಕೆಯ ಕುಟುಂಬ ಅಥವಾ ವಿಜಯಾರನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಶ್ರೀಮಂತಿಕೆಯ ಬದಲು ಜಾನಪದ ಕಲಾವಿದೆ ವಿಜಯರಿಗೆ ಆದ್ಯತೆ ನೀಡಿದರು. ತದನಂತರ ಅವರಿಬ್ಬರು ಜತೆಗೂಡಿ ಇರಲು ನಿರ್ಧರಿಸಿದರು.

1987ರಲ್ಲಿ ಇಬ್ಬರೂ ಸುಲೂರ್‍ನಲ್ಲಿ ರಸ್ತೆ ಬದಿ ಮಲಗಿದ್ದರು. ಆಗ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ವಿಜಯರ ಅತ್ಯಾಚಾರ ನಡೆಸಲು ಯತ್ನಿಸಿದ್ದನು. ಆಗ ರಕ್ಷಣೆಗಾಗಿ ಆ ವ್ಯಕ್ತಿಯೊಂದಿಗೆ ಹೊಯ್‍ ಕೈ ಆಗಿತ್ತು. ಈ ಜಗಳದಲ್ಲಿ ಕುಡುಕ ವ್ಯಕ್ತಿ ಸತ್ತಿದ್ದನು. ನಂತರ ಪೊಲೀಸರು ದರೋಡೆ ಮತ್ತು ಕೊಲೆ ಆರೊಪದಲ್ಲಿ ದಂಪತಿಯನ್ನು ಬಂಧಿಸಿದ್ದರು. ಕೋರ್ಟು ಇಬ್ಬರಿಗೂ ಜೀವಾವಧಿ ಶಿಕ್ಷೆ ನೀಡಿತ್ತು. ಸಂಬಂಧಿಕರು ಕೂಡ ಅವರಿಗೆ ಸಹಾಯ ಮಾಡದ್ದರಿಂದ ಸುಬ್ರಮಣಿ ವೆಲ್ಲೂರಿನ ಸೆಂಟ್ರಲ್ ಜೈಲಿನಲ್ಲಿ ಮತ್ತು ವಿಜಯ ವೆಲ್ಲೂರಿನ ಮಹಿಳಾ ವಿಶೇಷ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾಯಿತು.

ರಾಜೀವ್ ಗಾಂಧಿ ಹತ್ಯೆ ಆರೋಪದಲ್ಲಿ ಜೈಲು ಶಿಕ್ಷೆಗೆ ಒಳಗಾದ ನಳಿನಿಯ ವಕೀಲರ ನೆರವಿನಲ್ಲಿ ಈ ಜೋಡಿಗಳಿಗೆ ಜೈಲು ವಿಭಾಗ ಪ್ರತಿ ಹದಿನೈದು ದಿನಕ್ಕೊಂದು ಸಲ ಭೇಟಿಯಾಗುವ ಅನುಮತಿ ಸಿಕ್ಕಿತ್ತು. 2013 ರಲ್ಲಿ ವಿಜಯ ಬಿಡುಗಡೆಗೊಂಡಿದ್ದರು. ಅವರನ್ನು ದುರ್ಬಲರನ್ನಿರಿಸುವ ಆಶ್ರಮದಲ್ಲಿ ಇರಿಸಲಾಗಿತ್ತು. ಅಕ್ಟೋಬರ್ ಆರರಂದು ಸುಬ್ರಮಣಿಯವರ ಬಿಡುಗಡೆಯಾಗಿತ್ತು. ನಂತರ ವಿಜಯಾ ಇದ್ದಲ್ಲಿಗೆ ಅವರನ್ನು ಕರೆ ತರಲಾಯಿತು. ಸುಬ್ರಮಣಿಯನ್ನು ನೋಡಿದ ಕೂಡಲೇ ಅವರತ್ತ ಓಡಿ ಬಂದು ವಿಜಯ ಕೈಹಿಡಿದಿದ್ದಾರೆ. ಸಬ್ರಮಣಿ ನಮ್ಮ ರಕ್ಷಣೆಗಾಗಿ ಇಟ್ಟ ಹೆಜ್ಜೆಯಲ್ಲಿ ಶಿಕ್ಷೆ ಅನುಭವಿಸಿದೆವು. ವಿಜಯಾರಿಗೆ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ.ನಾನು ಅವರನ್ನು ನೋಡಿಕೊಳ್ಳುತ್ತೇನೆ. ಅವರಿಗಾಗಿ ಬದುಕುತ್ತೇನೆ ಎಂದು ಹೇಳಿದ್ದಾರೆ. ಇದು ಅನಕರಣೀಯ ಪ್ರೀತಿಯಾಗಿದೆ.

Leave a Reply