ಅಮ್ಮ ಎಂಬ ವಾತ್ಸಲ್ಯಮಯಿ ನಮ್ಮಿಂದ ಶಾಶ್ವತವಾಗಿ ವಿದಾಯ ಕೋರು ವಾಗ ಪ್ರೀತಿಯ ಸುಂದರ ಪ್ರಪಂಚವೊಂದು ಕಳೆದುಹೋದ ಅನುಭವವಾಗುತ್ತದೆ. ತಂದೆ-ತಾಯಿಗಳು ನಮ್ಮೊಂದಿಗಿರುವ ಆ ಕಾಲವು ಜೀವನದ ಸುಂದರ ಕಾಲ. ಅವರಿರುವ ವರೆಗೆ ನಾವು ಮಕ್ಕಳೇ ಆಗಿರು ತ್ತೇವಲ್ಲಾ. ಅವರಲ್ಲೊಬ್ಬರನ್ನು ಕಳಕೊಂಡಾಗ ರೆಕ್ಕೆ ಮುರಿದ ಹಕ್ಕಿಯಂತೆ ಹತಾಶರಾಗು ತ್ತೇವೆ. ಇವತ್ತು ನಮಗಾಗಿ ಕಾಯುವವರೂ, ನಮ್ಮನ್ನು ಇಷ್ಟಪಡುವವರೂ ನಮ್ಮ ಸುತ್ತಲೂ ಇದ್ದಾರೆ. ಆದರೆ ಇವರೆಲ್ಲಾ ನಮ್ಮನ್ನು ಪ್ರೀತಿಸಲು ಆರಂಭಿಸಿದ್ದು ನಾವು ಒಂದು ವ್ಯಕ್ತಿತ್ವ ಆದ ಬಳಿಕ. ನಾವು ಏನೂ ಅಲ್ಲದ ಒಂದು ರೂಪವೂ ಇಲ್ಲದ ಕಾಲದಲ್ಲಿ, ಈ ಲೋಕಕ್ಕೆ ಬರುವುದಕ್ಕಿಂತಲೂ ಮೊದಲು ನಮ್ಮನ್ನು ಪ್ರೀತಿಸಲು, ಕಾಯಲು ತೊಡಗಿದವರೇ ನಮ್ಮ ಅಮ್ಮ ಅಪ್ಪ.

ಒಮ್ಮೆ ಖ್ಯಾತ ಸಾಹಿತಿ ವೈಕಂ ಮುಹಮ್ಮದ್ ಬಶೀರ್‍ರೊಂದಿಗೆ ಬದುಕಿನ ಅತ್ಯಂತ ಸಂತೋಷದಾಯಕವಾದ ಅನು ಭವ ಯಾವುದೆಂದು ಕೇಳಿದಾಗ ಅವರು ಹೇಳಿದರು, “ನನ್ನ ಮಗ ಅಝೀಝ್ ಮಗುವಾಗಿದ್ದಾಗ ತೀವ್ರ ಜ್ವರದಿಂದ ಪ್ರಜ್ಞಾಶೂನ್ಯನಾದ. ದಿಗ್ಭ್ರಾಂತನಾಗಿ ನಾನು ಅವನನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿ ಸಿದೆ. ನಾನು ಮಗು ಮರಣ ಹೊಂದಿದೆ ಯೆಂದು ಭಾವಿಸಿz್ದÉ. ಹೃದಯವು ನೋವಿನಿಂದ ಚೀರುತ್ತಿತ್ತು. ಓಡುವ ರಭಸಕ್ಕೆ ಕಲ್ಲಿಗೆ ಕಾಲು ತಾಗಿ ನಾನು ಮುಗ್ಗರಿಸಿದೆ. ಆಗ ಮಗು ಜೋರಾಗಿ ಅಳತೊಡಗಿತು. ನಾನು ಆನಂದಭರಿತನಾದೆ. ಅಂತಹ ಸಂತಸದ ಕ್ಷಣ ಬದುಕಿನಲ್ಲಿ ಬೇರೆ ಅನು ಭವಿಸಿಲ್ಲ. ಹಲವಾರು ಪ್ರಶಸ್ತಿ, ಪುರಸ್ಕಾರ ಗಳು, ಗೌರವಾದರಗಳ ನಡುವೆಯೂ ಬಾಳಿದ್ದರೂ ಅವರ ಹೃದಯವನ್ನು ಪುಳಕಿತಗೊಳಿಸಿದ ಸಂಗತಿ ಅವರು ಓರ್ವ ತಂದೆಯಾಗಿ ಅನುಭವಿಸಿದ ಕ್ಷಣವಾಗಿತ್ತು.

ವಿಶ್ವ ಪ್ರಸಿದ್ಧ ಪತ್ರಕರ್ತೆ ಅನಿಸಾ ಪ್ರತಾಪ್ ತನ್ನ ಆತ್ಮಕಥೆಯನ್ನು ಆರಂಭಿಸುವುದೇ ಹೀಗೆ: “ಹಲವಾರು ಪ್ರಖ್ಯಾತ ಪ್ರಶಸ್ತಿಗಳು ನನಗೆ ಲಭಿಸಿದೆ. ಹಲವಾರು ವರದಿಗಳು ನನ್ನನ್ನು ಪ್ರಸಿದ್ಧಗೊಳಿಸಿದೆ. ಆದರೆ ಬದುಕಿನ ಅತ್ಯಂತ ಆನಂದಮಯ ಅನುಭವ ಯಾವುದೆಂದರೆ ಯಾವುದೇ ಅಮ್ಮ ಹೇಳುವಂತೆ ನಾನು ನನ್ನ ಮೊದಲ ಮಗುವಿಗೆ ಜನ್ಮ ನೀಡಿದ ಆ ನಿಮಿಷ.

ಅಮ್ಮನಿಗೆ ನಮ್ಮ ಕುರಿತು ತಿಳಿದಂತೆ ಬೇರ್ಯಾರೂ ನಮ್ಮನ್ನು ಅರಿತಿಲ್ಲ. ನಮ್ಮ ಇಷ್ಟ, ಅನಿಷ್ಟ, ಸಿಟ್ಟು, ಸಂತೋಷ ಎಲ್ಲವೂ ಅಮ್ಮನಿಗೆ ತಿಳಿದಿದೆ. ಇತರೆಲ್ಲರಿ ಗಿಂತಲೂ ಅಮ್ಮ ನಮ್ಮೊಂದಿಗೇ ಇದ್ದಾಳೆ. ನಿಸ್ವಾರ್ಥವಾದ ಪ್ರಾರ್ಥನೆಯೊಂದಿಗೆ ನಮ್ಮನ್ನೇ ಗಮನಿಸುತ್ತಾ, ಸೂಕ್ತ ಸಲಹೆ ಗಳೊಂದಿಗೆ ನಮ್ಮ ಜತೆಯಲ್ಲಿದ್ದಾಳೆ. ಅಮ್ಮನನ್ನು ಕಳೆದುಕೊಳ್ಳುವಾಗ ಇವೆಲ್ಲ ವನ್ನೂ ಕಳೆದುಕೊಳ್ಳುತ್ತೇವೆ. ನೋವು, ಸಂಕಟಗಳೊಂದಿಗೆ ಒಂಭತ್ತು ತಿಂಗಳ ಗರ್ಭಧಾರಣೆ, ಅಸಹನೀಯವಾದ ನೋವಿ ನೊಂದಿಗೆ ಪ್ರಸವ, ಶ್ರಮದಾಯಕವಾದ ಪರಿಪಾಲನೆ, ಮಗುವಿನ ಮಲಮೂತ್ರ ದೊಂದಿಗೆ ಪ್ರೀತಿಯೊಂದಿಗೆ ಒಡನಾಟ, ಒಂದು ಕ್ಷಣವೂ ಬಿಟ್ಟಿರಲಾಗದ ಆತ್ಮೀಯತೆ, ಜೀವನವಿಡೀ ಮಕ್ಕಳ ನೆನಪಿನೊಂದಿಗೆ ನಿಟ್ಟುಸಿರು, ಹಸಿವಿನ ತೀವ್ರತೆಯಲ್ಲೂ ಮಗುವಿನ ಅಳು ಸಹಿಸಲಾಗದ ದುರ್ಬಲ ಮನಸ್ಸು. ಅಮ್ಮನಿಗೆ ಖಂಡಿತಾ ಸರಿಸಾಟಿ ಇಲ್ಲ.

ಅಮ್ಮನ ಸ್ಪರ್ಶ:

ಪ್ರಸಿದ್ಧ ಮನಃಶಾಸ್ತ್ರ ಗ್ರಂಥದಲ್ಲಿ ಒಂದು ಘಟನೆಯನ್ನು ವಿವರಿಸಲಾಗಿದೆ. ಒಂದು ಮೆಡಿಕಲ್ ಕಾಲೇಜಿನಲ್ಲಿ ತಿಂಗಳು ತುಂಬುವ ಮೊದಲೇ ಒಂದು ಮಗು ಜನಿಸಿತು. ಆಸ್ಪತ್ರೆಯಲ್ಲಿ ಇಂಕ್ಯುಬೆಲರ್ ಸೌಲಭ್ಯ ಇಲ್ಲದ್ದರಿಂದ ತಾಯಿ ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಯೂ ವ್ಯವಸ್ಥೆಯಿಲ್ಲದ್ದರಿಂದ ಮಗುವನ್ನು ರಕ್ಷಿಸಲಿಕ್ಕಾಗಿ ನರ್ಸ್ ಮಗುವನ್ನು ಸಂದರ್ಶಕರಿಗೆ ಅನುಮತಿಯಿಲ್ಲದ ಒಂದು ಕೋಣೆಯಲ್ಲಿ ಕಂಬಳಿ ಹೊದಿಸಿ ಮಲಗಿಸಿದಳು. ಆದರೆ ಮರುದಿನವೇ ಮಗುವಿಗೆ ತೀವ್ರ ಜ್ವರ ಬಂತು. ಎಲ್ಲಾ ಮಾರ್ಗಗಳೂ ಕೊನೆಗೊಂಡಾಗ ಹಿರಿಯ ನರ್ಸ್ ಇನ್ನೊಂದು ಉಪಾಯ ಮಾಡಿದಳು. ಮಗು ವನ್ನು ಸದಾ ಸಮಯವೂ ಸ್ನೇಹದ ಸ್ಪರ್ಶ ನೀಡಲು ತಾಯಿಯ ಅಪ್ಪುಗೆಗೆ ಒಪ್ಪಿಸಿದಳು. ಅಮ್ಮ ಸಂತೋಷದಿಂದ ಒಪ್ಪಿಕೊಂಡಳು.

ಎರಡು ದಿನದಲ್ಲೇ ಮಗು ಗುಣಮುಖವಾಯಿತು. ಈಗ ಎರಡು ವರ್ಷದ ಮಗು ಅದು. ಔಷಧಿ, ಆಹಾರದೊಂದಿಗೆ ಅಮ್ಮನ ಪ್ರೀತಿ ವಾತ್ಸಲ್ಯದ ಸ್ಪರ್ಶ, ಲಾಲನೆ ಪಾಲನೆ ಒಂದು ಆರೋಗ್ಯವಂತ ಮಗುವಾಗಲು ಅತಿ ಅಗತ್ಯವೆಂದು ಗ್ರಂಥವು ಒತ್ತಿ ಹೇಳುತ್ತದೆ. ಅಮ್ಮನೊಂದಿಗೆ ಬೆಳೆಯದ ಮಗು ಪ್ರೀತಿ, ಅನುಕಂಪ ಕರುಣೆಯಂತಹ ಸದ್ಗುಣಗಳ ಕೊರತೆಯನ್ನು ಅನುಭವಿಸುತ್ತದೆಂದು ಹಲವು ಅಧ್ಯಯನಗಳ ಆಧಾರದಲ್ಲಿ ಗ್ರಂಥಕರ್ತ ಹೇಳುತ್ತಾರೆ, ಆದೇಶಗಳು, ಸಲಹೆ, ಮಾರ್ಗದರ್ಶನ, ಸ್ನೇಹದ ನೋಟ ಮಾತ್ರ ಸಾಲದು. ಸ್ಪರ್ಶ, ಲಾಲನೆ, ಆಲಿಂಗನ, ಪ್ರೀತಿಯ ಮುತ್ತು ಇವೆಲ್ಲವೂ ಅಮ್ಮನಿಂದ ಮಕ್ಕಳಿಗೆ ವರ್ಗಾವಣೆಯಾಗಬೇಕು… ಎಲ್ಲಾ ಉತ್ತಮ ಸಂಬಂಧಗಳಲ್ಲಿ ಸ್ಪರ್ಶಕ್ಕೆ ಬಹಳ ಪ್ರಾಮುಖ್ಯತೆಯಿದೆ. ಹಾಗಾದರೆ ಒಮ್ಮೆ ಯೋಚಿಸಿ ನೋಡಿ. ಅಮ್ಮನಿಗೆ ಒಂದು ಸಿಹಿ ಮುತ್ತು ನೀಡದೆ ಎಷ್ಟು ಕಾಲವಾಯ್ತು? ಅಪ್ಪನನ್ನು ಆಲಂಗಿಸದೆ ಎಷ್ಟು ಸಮಯವಾಯ್ತು. ಸಹೋದರಿಯನ್ನು, ತಮ್ಮನನ್ನು, ಮಕ್ಕಳನ್ನು ಸ್ಪರ್ಶಿಸದೆ ಅದೆಷ್ಟು ದಿನಗಳಾದವು?

ಅಜ್ಜ-ಅಜ್ಜಿಯಿರುವ ಮನೆ:

ಓರ್ವ ಅಧ್ಯಾಪಕ ಗೆಳೆಯ ಹೇಳಿದ ವಿಷಯ. ಮನೆಯಲ್ಲಿ ಯಾರೆಲ್ಲಾ ಇದ್ದೀರೆಂಬ ಪ್ರಶ್ನೆಗೆ ಮಗು ಉತ್ತರ ಹೇಳಿತು. ತಂದೆ-ತಾಯಿ, ಅಣ್ಣ ಮತ್ತು ತಂಗಿಯಿದ್ದಾರೆ. ಹಾಗಾದರೆ ಅಜ್ಜ ಮತ್ತು ಅಜ್ಜಿ ಇಲ್ಲವೇ? ಎಂದು ಕೇಳಿದಾಗ ಮಗು ಆಲೋಚಿಸಿದಂತೆ ಮಾಡಿ ಹಾ| ಅಜ್ಜಿಯಿದ್ದಾರೆ ಎಂದಿತು. ಆ ಅಜ್ಜಿಯನ್ನು ಮನೆಯಲ್ಲಿ ಓರ್ವ ಸದಸ್ಯೆಯಂತೆ ನೋಡಿಕೊಳ್ಳುತ್ತಿದ್ದರೆ ಮಗು ಮೊದಲು ಅಜ್ಜಿಯನ್ನು ಹೇಳುತ್ತಿತ್ತೆಂಬುದು ಗ್ಯಾರಂಟಿ.
ನಮ್ಮ ಮನೆಯಲ್ಲಿ ಮಾಡಿದ ಒಂದು ಪ್ರಯೋಗ ಹೇಳುತ್ತೇನೆ. ಮಲಗುವ ಮುಂಚೆ ನನ್ನ ತಂದೆ ಮತ್ತು ತಾಯಿಗೆ ಮುತ್ತು ನೀಡಲು ಮಗನೊಡನೆ ಹೇಳುತ್ತೇನೆ. ಸ್ವಲ್ಪವೇ ದಿನ ಹೇಳಬೇಕಾಗಿ ಬಂತು. ನಂತರ ಈಗ ಅದು ಅವನಿಗೆ ಅಭ್ಯಾಸವಾಗಿ ಹೋಗಿದೆ. ತಂದೆ ಮತ್ತು ತಾಯಿ ಮೊಮ್ಮಗನ ಚುಂಬನಕ್ಕಾಗಿ ಕಾಯುತ್ತಿರುತ್ತಾರೆ.
ಅದನ್ನು ನೋಡುವಾಗ ವರ್ಣಿಸಲಸಾಧ್ಯವಾದ ಸಂತಸ ವಾಗುತ್ತದೆ. ಅವರಿಗಾಗುವ ಸಂತೋಷವೂ ಅಗಾಧವಾದುದು. ಅವರು ನಮ್ಮೊಂದಿಗೆ ಇರುವ ಸಮಯವೇ ಬದುಕಿನ ಸುಂದರ ಕಾಲವೆಂದು ಅವರು ಇರುವಾಗಲೇ ನಮಗೆ ಮನವರಿಕೆಯಾಗ ಬೇಕಲ್ಲವೇ? ನಮ್ಮ ವ್ಯಕ್ತಿತ್ವ ರೂಪಿಸಿದ ಮಹಾನ್ ಚೇತನಗಳಲ್ಲವೇ ಅವರಿಬ್ಬರು.

ವಿದ್ವಾಂಸರಾದ ಇಮಾಮ್ ರಾಝಿ ಹೇಳಿದ ಘಟನೆಯಿದು;

ತಂದೆಯ ಆಸ್ತಿಯನ್ನು ಪಾಲು ಮಾಡುವಾಗ ಪ್ರತಿಯೊಬ್ಬರೂ ಅವರಿಗಿಷ್ಟವಿರುವುದು ಬೇಕೆಂದು ಹಟ ಹಿಡಿದರು. ಆದರೆ ತನಗಿಷ್ಟವಿರುವುದನ್ನು ಇಮಾಮ್‍ರು ಹೇಳಿದ್ದು ಹೀಗೆ: “ನನಗೆ ಅಮ್ಮ ಸಾಕು. ದಯಮಾಡಿ ನೀವು ನನಗೆ ಅಮ್ಮನನ್ನು ನೀಡಬೇಕು. ಉಳಿದದ್ದೆಲ್ಲಾ ನೀವೇ ತೆಗೆದುಕೊಳ್ಳಿ.”
ತನ್ನ ಕುಟುಂಬದೊಂದಿಗೆ ವಿದೇಶದಲ್ಲಿರುವ ಓರ್ವ ಗೆಳೆಯ ಬರೆದ ಘಟನೆ ಓದಿದೆ. ಆತ ಮಗುವಿನೊಂದಿಗೆ ಶಾಪಿಂಗ್ ಮಾಲ್‍ಗೆ ಹೋಗಿದ್ದ. ಅಲ್ಲಿ ಒಂದು ನಿಮಿಷದಲ್ಲಿ ಮಗು ಕಾಣೆಯಾಯಿತು. ಕೈಯಿಂದ ತಪ್ಪಿಸಿಕೊಂಡ ಮಗು ಕಾಣದೆ ತಂದೆ ದುಃಖಿಸಿದ. ಮನಸಾರೆ ಅತ್ತ. ದುಗುಡದಿಂದ ಅಲೆದಾಡಿ ಎರಡು ಗಂಟೆಯ ಬಳಿಕ ಮಗು ಸಿಕ್ಕಿತು. ಮಗುವಿನ ಮೇಲೆ ಮುತ್ತಿನ ಸುರಿಮಳೆ ಸುರಿಸಿದ ಆತ ಸೀದಾ ನಡೆದದ್ದು ಊರಿಗೆ ಟಿಕೆಟ್ ಮಾಡಲು ಇದೇನು? ಇಷ್ಟು ಅವಸರದಿಂದ ಊರಿಗೆ ಹೋಗಲು ಕಾರಣವೇನೆಂದು ಪತ್ನಿ ಕೇಳಿದಾಗ ಗೆಳೆಯ ಹೇಳಿದ, “ಎರಡು ಗಂಟೆಗಳ ಕಾಲ ನನ್ನ ಮಗು ಕಾಣೆ ಯಾದಾಗ ನಾನು ಅನುಭವಿಸಿದ ಯಾತನೆ ನನಗೊಬ್ಬನಿಗೇ ಗೊತ್ತು. ಎರಡು ವರ್ಷದಿಂದ ಸ್ವಂತ ಮಗುವನ್ನು ಕಾಣದೆ ದಿನ ಕಳೆಯುತ್ತಿರುವ ನನ್ನ ಅಮ್ಮನನ್ನು ನನಗೆ ನೋಡಬೇಕು. ಅಮ್ಮನ ಆ ವಿರಹದ ಆಳ ನನಗೀಗ ಅರ್ಥವಾಗುತ್ತಿದೆ!”

ಇಂದು ಹಲವು ಮನೆಗಳಲ್ಲಿ ತಂದೆ-ತಾಯಿಗಳು ಅನಾಥರಾಗಿದ್ದಾರೆ. ಮಕ್ಕಳ ಮೊಮ್ಮಕ್ಕಳ ಸಹವಾಸವಿಲ್ಲದೆ, ಆಯಾಸದಿಂದ ಬಸವಳಿಯುವಾಗ ಕೈ ಹಿಡಿದು ಎಬ್ಬಿಸಲು ಜನರಿಲ್ಲದೆ, ಪಾಪ ಇಬ್ಬರೂ ಪರಸ್ಪರ ಮುಖ ನೋಡುತ್ತಾ ದೊಡ್ಡ ದೊಡ್ಡ ಮನೆ ಗಳಲ್ಲಿ ಅವರು ಒಂಟಿಯಾಗುತ್ತಿದ್ದಾರೆ. ಅವರ ಯೌವನ ತಮ್ಮ ಮಕ್ಕಳಿಗಾಗಿಯೇ ಕಳೆದು ಹೋಗಿದೆ. ಆದರೆ ಮಕ್ಕಳ ಯೌವನ ತಮ್ಮ ಗುರಿ ಸಾಧನೆಗಾಗಿ ಮಾತ್ರ ಸಂಕು ಚಿತಗೊಂಡಿದೆ.

ನಮಗೆ ಜನ್ಮ ನೀಡಿದವರು, ನಮಗೆ ಸುಂದರ ಹೆಸರನ್ನಿಟ್ಟವರು, ನಮ್ಮನ್ನು ಸಾಕಿ ಬೆಳೆಸಿದವರು, ನಮ್ಮ ಏಳಿಗೆ, ಯಶಸ್ಸು, ಪ್ರಸಿದ್ಧಿಯನ್ನು ಕಂಡು ನಮಗಿಂತಲೂ ಹೆಚ್ಚು ಸಂತೋಷಪಟ್ಟವರು, ನಮ್ಮ ನೋವಿಗಾಗಿ ಬಹಳವಾಗಿ ದುಃಖಿಸಿದವರು, ಯಾವುದೇ ಕರಾರು ಇಲ್ಲದೆ ನಮ್ಮೊಂದಿಗೆ ಸಂಬಂಧ ಬೆಳೆಸಿ ದವರು. ಅವರೇ ನಮ್ಮ ಪ್ರೀತಿಯ ತಂದೆ-ತಾಯಿಗಳು. ಅವರಿಗೆ ನೆರಳಾಗಿ, ಅವರ ಆರೈಕೆ ಮಾಡಬೇಕಾದವರು ಮಕ್ಕಳು. ಅಜ್ಜಿಯ ಕಥೆಗಳನ್ನು ಕೇಳಿಯೂ, ಅಜ್ಜನ ಪ್ರೀತಿಯನ್ನು ಹೀರಿಕೊಂಡು ನಮ್ಮ ಮಕ್ಕಳು ಬೆಳೆಯಲಿ.
ಪ್ರತಿಯೊಬ್ಬ ಅಜ್ಜ ಮತ್ತು ಅಜ್ಜಿಯೂ ಪ್ರೀತಿಯ ಕಡಲಾಗಿದ್ದಾರೆ. ಅವರ ಬದುಕಿನ ಅನುಭವದ ಪಕ್ವತೆ ಅವರ ಮಾತಿನಲ್ಲಿ ಅಡಗಿರುತ್ತದೆ. ತಂದೆ-ತಾಯಿಯ ರಕ್ತ ಹಾಗೂ ಬೆವರು ಎಲ್ಲಿಗೆ ಹರಿದು ಹೋಗಿದೆ? ಮಕ್ಕಳ ಶರೀರವನ್ನು ಒಮ್ಮೆ ನೋಡಿ. ದಪ್ಪಗಾದ ಸುಂದರವಾದ ಆ ಕೈಕಾಲುಗಳು ಹಾಗೂ ಉರುಟಾದ ಮುಖವನ್ನು ನೋಡಿ ಮಕ್ಕಳ ಬದುಕನ್ನು ಸುಂದರಗೊಳಿಸಿದ ಕುರುಹಾಗಿ ಅವರ-ನೆರಿಗೆ ಕಟ್ಟಿದ ಚರ್ಮವನ್ನು ಕಾಣಬಹುದು. ತಮ್ಮ ಅನುಭವದಿಂದ ನಮಗೆ ಮತ್ತು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ಹೊಸ ಮನೆಗಳಿಗೆ ಇವರೊಂದು ಅಲಂಕಾರವಾಗಿದ್ದಾರೆ. ಹೊಸ ಸುಂದರ ಮನೆಗಳಿಗೆ ಹಿರಿಯರ ಉಪಸ್ಥಿತಿ ಅನಿ ವಾರ್ಯವೂ ಹೌದು.

ಇತ್ತೀಚೆಗೆ ಗೆಳೆಯನ ತಂದೆ ಆಸ್ಪತ್ರೆ ಯಲ್ಲಿ ಗಂಭೀರ ಸ್ಥಿತಿಯಲ್ಲಿ ದಾಖಲಾದಾಗ ತನ್ನ ತಂದೆಯ ಕುರಿತು ಆತ ಹೇಳುತ್ತಲೇ ಇದ್ದ. ತಂದೆಯ ಕುರಿತು ಹಲವಾರು ಒಳ್ಳೆಯ ವಿಷಯಗಳನ್ನು ಹೇಳುತ್ತಿದ್ದ. ಅದರಲ್ಲೊಂದು ವಿಷಯ ಕೇಳಿ ಹೃದಯ ತುಂಬಿ ಬಂತು. “ನನ್ನ ತಂದೆ ನನ್ನ ಮಗನ ಒಳ್ಳೆಯ ಫ್ರೆಂಡ್. ಅವನಿಗೆ ನಾನು ಹೆಚ್ಚು ಸಿಗುವುದಿಲ್ಲ. ಅವನ ಎಲ್ಲಾ ಕೆಲಸಗಳನ್ನು ತಂದೆ ಮಾಡಿ ಕೊಡುತ್ತಿದ್ದರು. ಅವನಿಗೊಂದು ಸೈಕಲ್ ಇದೆ. ಅದು ಅವನಿಗೆ ಜೀವ… ಅದು ಆಗಾಗ ಹಾಳಾಗುತ್ತದೆ. ಆಗ ತಂದೆ ಆ ಸೈಕಲನ್ನು ತಲೆಯಲ್ಲಿ ಹೊತ್ತುಕೊಂಡು ಅವನೊಂದಿಗೆ ಹೋಗಿ ರಿಪೇರಿ ಮಾಡಿಸಿ ತರುತ್ತಾರೆ. ಹಾಗೆ ಹೋಗುವಾಗ ಅವನಿಗೆ ಇಷ್ಟವಿರುವುದನ್ನು ಖರೀದಿಸಿ ಕೊಡುತ್ತಾರೆ. ಮಾತು ಪೂರ್ತಿಯಾಗದೇ ಅರ್ಧದಲ್ಲೇ ನಿಂತಿತು. ಆ ತಂದೆ ತೀರಿಕೊಂಡಾಗ ನಾನು ಆ ಮೊಮ್ಮಗನನ್ನೇ ಹುಡುಕಿದೆ. ಅವನು ಜನರಿಂದ ದೂರವಾಗಿ ತನ್ನ ಪುಟ್ಟ ಸೈಕಲ್‍ನ ಬಳಿಯೇ ದುಃಖ ದಿಂದ ನಿಂತುಕೊಂಡಿದ್ದಾನೆ. ಜೀವನದ ಅನುಭವಗಳನ್ನು ಹಂಚಿಕೊಳ್ಳಲಾಗದ ಈ ಸಣ್ಣ ಪ್ರಾಯದಲ್ಲಿ ಬೆಲೆಬಾಳುವ ಒಂದು ನಿಧಿಯನ್ನು ಕಳೆದುಕೊಂಡೆ ನೆಂಬ ಸತ್ಯ ಆ ಪುಟ್ಟ ಮನಸ್ಸಿಗೆ ಹೊಳೆದಿರಬಹುದೇ?

ಪಿ.ಎಂ.ಎ. ಗಫೂರ್
ಸಾಂದರ್ಭಿಕ ಚಿತ್ರ

Leave a Reply