ಬ್ಯಾರಿ ಝುಲ್ಫಿ ಆಯೋಜಿಸಲು ಹೊರಟ
ಬ್ಯಾರಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವಿವಾದಗಳು ಮತ್ತು ಚರ್ಚೆ, ಅವಹೇಳನಗಳು ನಡೆದಿತ್ತು.

ಇದೀಗ ಅವರು ಕೇರಳ ಹಾಗೂ ಕೊಡಗಿನಲ್ಲಿ ನಡೆದ ಭೀಕರ ದುರಂತದಲ್ಲಿ ಕಷ್ಟ ನಷ್ಟ ಅನುಭವಿಸಿದವರ ಸಹಾಯಕ್ಕಾಗಿ ಹಾಡಿನ ಮೂಲಕ ಒಂದು ಸಣ್ಣ ಮನವಿಯನ್ನು ಮಾಡಿದ್ದಾರೆ.

ಬ್ಯಾರಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಸಿದರೆ ಧರ್ಮ, ಮ್ಯೂಸಿಕ್ ಎಂಬ ಚರ್ಚೆ ಶುರುವಾಗುತ್ತದೆ.. ಆದ್ದರಿಂದ ನಾವು ಸಾಂಸ್ಕೃತಿಕ ಕ್ಷೇತ್ರವನ್ನು ಬಿಡಲು ಸಾಧ್ಯವಿಲ್ಲ. ಸಾಂಸ್ಕೃತಿಕ ಮಾಧ್ಯಮವು ಬಹಳ ಪ್ರಭಾವ ಪೂರ್ಣ ಮಾಧ್ಯಮವಾಗಿದೆ..ಆದ್ದರಿಂದ ಬ್ಯಾರಿ ಹಾಡುಗಳ ಜೊತೆ ಹಿಂದಿ ಭಾಷೆಯ ಮೂಲಕ ಮಾಡುತ್ತಿದ್ದೇನೆ. ಇದರ ವ್ಯಾಪ್ತಿ ದೊಡ್ಡದಾಗಿದೆ. ಇತ್ತೀಚೆಗೆ ಸ್ವಾತಂತ್ರ್ಯೋತ್ಸವ ಗಾನಗಳನ್ನು ಮಾಡಿದೆ. ನಿಜವಾಗಿ ಅದು ಬ್ಯಾರಿ ಗಾನ ಮಾಡಲು ಮೊದಲು ಚಿಂತಿಸಿದ್ದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾರಿ ಝುಲ್ಫಿ ಅವರ ಸಾಹಿತ್ಯ ರಚನೆಯಲ್ಲಿ,
ಅವರ ಮಕ್ಕಳಾದ ಝೋಯಾ ಬೇಬಿ ಮತ್ತು ಫೆಲ್ಲಾಹ್ ಬೇಬಿ ಮತ್ತು ಝುಲ್ಫಿ ಅವರ ಸ್ವರದಲ್ಲಿ ನಿಮ್ಮ ಮುಂದೆ ಈ ಹಾಡು ಕೇಳಿ ಪ್ರೋತ್ಸಾಹಿಸಿ…

Leave a Reply